ಒಂದು ಭೇಟಿ, ಹಲವು ಸಂದೇಶ.. ಜಮೀರ್ ಮನೆಗೆ ಡಿಕೆಎಸ್ ಭೇಟಿ ಹಿಂದಿನ ‘ಬೇಟೆ ರಹಸ್ಯ’

ಒಂದು ಭೇಟಿ, ಹಲವು ಸಂದೇಶ.. ಜಮೀರ್ ಮನೆಗೆ ಡಿಕೆಎಸ್ ಭೇಟಿ ಹಿಂದಿನ ‘ಬೇಟೆ ರಹಸ್ಯ’

ಬೆಂಗಳೂರು: ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂದು ಘೋಷಣೆ ಕೂಗಿ ಡಿ.ಕೆ.ಶಿವಕುಮಾರ್ ಅವರ ಕೆಂಗಣ್ಣಿಗೆ ಮಾಜಿ ಸಚಿವ ಜಮೀರ್ ಅಹಮ್ಮದ್​ ಖಾನ್ ಗುರಿಯಾಗಿದ್ದರು. ಇದೀಗ ಮಹತ್ವದ ಬೆಳವಣಿಗೆ ಒಂದರಲ್ಲಿ ಡಿಕೆ ಶಿವಕುಮಾರ್ ಅವರು ಜಮೀರ್ ಅವರ ಮನೆಗೆ ಭೇಟಿ ನೀಡುವ ಮೂಲಕ ಕಾಂಗ್ರೆಸ್​ ನಾಯಕರಿಗೆ ಹಾಗೂ ಟೀಕಾಕಾರರಿಗೆ ಹಲವು ಸಂದೇಶಗಳನ್ನ ರವಾನಿಸಿಬಿಟ್ಟಿದ್ದಾರೆ.  ​

ಇದನ್ನೂ ಓದಿ: ಜಮೀರ್ ಮನೆಗೆ ಭೇಟಿ; ಕೆಲವೊಂದು ಮಾರ್ಗದರ್ಶನ ನೀಡಿದ್ದೇನೆ ಎಂದ ಡಿ.ಕೆ. ಶಿವಕುಮಾರ್

ಹೆಂಗಿತ್ತು ಇಬ್ಬರ ಸಂಬಂಧ..?
ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಜಮೀರ್ ಹಾಗೂ ಡಿ.ಕೆ.ಶಿವಕುಮಾರ್ ಅಂತರವನ್ನ ಕಾಯ್ದುಕೊಂಡಿದ್ದರು. ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿನ ಕಾರ್ಯಕ್ರಮಗಳಿಗೆ KPCC ಅಧ್ಯಕ್ಷರಿಗೆ ಜಮೀರ್ ಆಹ್ವಾನವನ್ನ ನೀಡಿರಲಿಲ್ಲ. ಈ ಹಿಂದೆ ಬೆಂಗಳೂರು ಭಾಗದ ಶಾಸಕರ ಸಭೆಗೆ ಜಮೀರ್​ಗೆ ಕಡೇ ಕ್ಷಣದಲ್ಲಿ ಆಹ್ವಾನ ನೀಡಿದ್ದರು. ಶಿವಕುಮಾರ್ ಮನೆಯ ಸಭೆಗೆ ಗೈರಾಗಿ, ಹೈದರಾಬಾದ್​ಗೆ ಜಮೀರ್ ತೆರಳಿದ್ದರು.

blank

ಇತ್ತೀಚೆಗೆ ಜಮೀರ್ ಅಹಮ್ಮದ್ ಖಾನ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. ಈ ದಾಳಿ ಬೆನ್ನಲ್ಲೆ ಬಿಜೆಪಿ ನಾಯಕರು ಡಿ.ಕೆ.ಶಿವಕುಮಾರ್​ನತ್ತ ಬೆಟ್ಟು ಮಾಡಿದ್ದರು. ಇದಾದ ಬಳಿಕ ಜಮೀರ್​, ಸುದ್ದಿಗೋಷ್ಟಿ ನಡೆಸಿ ಇ.ಡಿ. ದಾಳಿ ಹಿಂದೆ ನಮ್ಮ ಪಕ್ಷದವರ ಕೈವಾಡ ಇಲ್ಲ. ಉಳಿದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಹುನ್ನಾರ ಎಂದು ಆರೋಪಿಸಿದ್ದರು. ಇದಾದ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಖುದ್ದು ಜಮೀರ್ ಮನೆಗೆ ಭೇಟಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಇಲಿಗಳ ರೀತಿ ಕೆಲ್ಸ ಮಾಡಬಾರದು, ಮುಖಾಮುಖಿ ಎದುರಿಸಬೇಕು -ಸತೀಶ್ ರೆಡ್ಡಿ ಸವಾಲ್

ಡಿಕೆಎಸ್ ನೀಡಿದ ಸಂದೇಶ ಏನು..?

  • ಜಮೀರ್-ನನ್ನ ನಡುವೆ ವಯಕ್ತಿಕ ದ್ವೇಷ ಇಲ್ಲ
  • ಪಕ್ಷದ ಶಾಸಕರ ರಕ್ಷಣೆ ನನ್ನ ಕರ್ತವ್ಯ
  • ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ
  • ಜಮೀರ್ ನಮ್ಮ ಪಕ್ಷದ ಹಿರಿಯ ಶಾಸಕರು, ಮಾಜಿ ಸಚಿವರು
  • ಮುಂದಿನ CM ವಿಚಾರದ ಚರ್ಚೆಗೆ ಸದ್ಯ ಫುಲ್​ಸ್ಟಾಪ್
  • ಎಲ್ಲರೊಂದಿಗೆ ಸೇರಿ, ಪಕ್ಷ ಸಂಘಟನೆ, ಅಧಿಕಾರಕ್ಕೆ ತರಲು ಪಣ
  • ED ದಾಳಿ ಸಂದರ್ಭದಲ್ಲಿ ನೈತಿಕ ಬೆಂಬಲ ತುಂಬೋದು ನನ್ನ ಕರ್ತವ್ಯ

ಈ ಎಲ್ಲಾ ಅಂಶಗಳ ಮೂಲಕ ಡಿಕೆ ಶಿವಕುಮಾರ್ ಅವರು, 2023ರ ಸಾರ್ವತ್ರಿಕ ಚುನಾವಣೆ ‘ಮತ ಬೇಟೆ’ಗಾಗಿ ಒಗ್ಗಟ್ಟಿನ ಮಂತ್ರದ ಸಂದೇಶ ರವಾನಿಸಿದ್ದಾರೆ. ಜೊತೆಗೆ ಜಮೀರ್ ಮನೆಗೆ ಭೇಟಿ ನೀಡುವ ಮೂಲಕ ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಿರುವುದರ ಜೊತೆಗೆ ಮುಸ್ಲಿಂ ಸಮುದಾಯದ ಮತಗಳು ಚದುರದಂತೆ ರೂಪಿಸಿರುವ ತಂತ್ರ ಇದಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಅಭಿಮಾನಿಗಳು ಸರ್ಪ್ರೈಸ್; ‘ಟಗರು ಸಿದ್ದರಾಮಯ್ಯ’ ಸಾಂಗ್ ರಿಲೀಸ್

Source: newsfirstlive.com Source link