ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅಂಧ ವಿದ್ಯಾರ್ಥಿ; ಸಾಧನೆಗೆ ಅಭಿನಂದನೆಗಳ ಮಹಾಪೂರ

ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅಂಧ ವಿದ್ಯಾರ್ಥಿ; ಸಾಧನೆಗೆ ಅಭಿನಂದನೆಗಳ ಮಹಾಪೂರ

ಬಾಗಲಕೋಟೆ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಅಂಧ ವಿದ್ಯಾರ್ಥಿನಿಯೊರ್ವಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯೋ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದು, ಅಂಧ ವಿದ್ಯಾರ್ಥಿನಿಯ ಈ ಸಾಧನೆಗೆ ಜಿಲ್ಲೆಯಾದ್ಯಂತ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಉತ್ತೂರು ಗ್ರಾಮದ ಜ್ಯೋತಿ ಕಟಗೋಳ ಶೇ. 90.24 ಅಂಕ ಪಡೆದು ಅಂಧ ವಿದ್ಯಾರ್ಥಿಗಳ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಸೈ ಎನಿಸಿಕೊಂಡಿದ್ದಾಳೆ.  ಎಸ್ಸೆಸ್ಸೆಲ್ಸಿಯ ಅಂಧ ವಿದ್ಯಾರ್ಥಿಗಳ ವಿಭಾಗದಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯೋ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದು. ಅಂಧ ವಿದ್ಯಾರ್ಥಿನಿ ಸಾಧನೆಗೆ ಅಭಿನಂದನೆ ಮಹಾಪೂರ ಹರಿದು ಬರುತ್ತಿದೆ.

blank

ವೃತ್ತಿಯಿಂದ ರೈತರಾದ ಮಾರುತಿ ಹಾಗೂ ಸುಮಂಗಲಾ ದಂಪತಿಯ ಪುತ್ರಿಯಾದ ವಿದ್ಯಾರ್ಥಿನಿ ಜ್ಯೋತಿ ಭವಿಷ್ಯದಲ್ಲಿ ಐಎಎಸ್ ಪಾಸು ಮಾಡುವ ಕನಸು ಹೊಂದಿದ್ದಾಳೆ. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ವ್ಯಾಸಂಗ ಮಾಡಿದ್ದು, ಬ್ರೈಲ್ ಲಿಪಿಯಲ್ಲಿ ಓದಿದ್ದಾಳೆ. ಬಾಲಕಿ ಕಣ್ಣು ಕಾಣದೆ ಇದ್ರು ಯಾರಿಗೂ ಹೊರೆ ಆಗದೇ ಜೀವನ ಸಾಗಿಸುತ್ತಿದ್ದಾಳೆ. ಮನೆಯಲ್ಲಿ ಸಾಮಾನ್ಯರಂತೆ ಎಲ್ಲ ಕೆಲಸ ಮಾಡುತ್ತ ತಾಯಿಗೆ ನೆರವಾಗಿದ್ದಾಳೆ.

ತಂದೆ ತಾಯಿ ಓದಿಲ್ಲ್ಲವಾದ್ದರಿಂದ ಅನಕ್ಷರಸ್ಥ ಕುಟುಂಬಕ್ಕೆ ಜ್ಯೋತಿ ಬೆಳಕಾಗಿದ್ದಾಳೆ ಕನ್ನಡಕ್ಕೆ 118, ಇಂಗ್ಲಿಷಗೆ 100, ಹಿಂದಿಯಲ್ಲಿ 100, ಅರ್ಥ ಶಾಸ್ತ್ರ 88, ರಾಜ್ಯಶಾಸ್ತ್ರ 64, ಸಮಾಜಶಾಸ್ತ್ರ 94 ಸೇರಿ ಒಟ್ಟು 625ಕ್ಕೆ 564 ಅಂಕ ಪಡೆದಿದ್ದು, ಜ್ಯೋತಿ ಡಿಡಿ ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಸಂಗೀತ, ಕಂಪ್ಯೂಟರ್ ನಲ್ಲಿ ಕೂಡ ಪರಿಣಿತಿ ಹೊಂದಿದ ಅಂಧ ವಿದ್ಯಾರ್ಥಿನಿಯ ಈ ಸಾಧನೆಗೆ ಜ್ಞಾನ ಸಿಂಧು ಅಂಧ ಮಕ್ಕಳ ವಸತಿ ಶಾಲೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರು, ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ….

Source: newsfirstlive.com Source link