ತಲೆಕೆಳಗಾದ BJP ಎಲೆಕ್ಷನ್ ಲೆಕ್ಕಾಚಾರ; ಈ ವರ್ಷದ ಅಂತ್ಯದಲ್ಲೇ ಮತ್ತೆ ಸಂಪುಟ ವಿಸ್ತರಣೆ..?

ತಲೆಕೆಳಗಾದ BJP ಎಲೆಕ್ಷನ್ ಲೆಕ್ಕಾಚಾರ; ಈ ವರ್ಷದ ಅಂತ್ಯದಲ್ಲೇ ಮತ್ತೆ ಸಂಪುಟ ವಿಸ್ತರಣೆ..?

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆಯ ಜೊತೆ ಜೊತೆಗೆ 2023ರ ಎಲೆಕ್ಷನ್ ಗಮನದಲ್ಲಿ ಇಟ್ಕೊಂಡು ರಾಜ್ಯ ಬಿಜೆಪಿ ಎಲೆಕ್ಷನ್ ಕ್ಯಾಬಿನೆಟ್​ ರಚನೆ ಮಾಡಬಹುದು ಅಂತಾ ಹೇಳಲಾಗಿತ್ತು. ಆದರೆ ಆಗಸ್ಟ್ 4 ರಂದು ಬೊಮ್ಮಾಯಿ ರಚಿಸಿದ ಸಂಪುಟ, ಎಲೆಕ್ಷನ್ ಕ್ಯಾಬಿನೆಟ್​ ಅಲ್ಲ!

ಯಾಕೆ ಎಲೆಕ್ಷನ್ ಕ್ಯಾಬಿನೆಟ್ ಅಲ್ಲ..?
ಎಲೆಕ್ಷನ್ ಕ್ಯಾಬಿನೆಟ್ ಅಂದರೆ, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಚಿಸುವ ಸಂಪುಟ ಆಗಿದೆ. ಕಾರಣ ಏನಂದರೆ ‌ಎಲೆಕ್ಷನ್ ಕ್ಯಾಬಿನೆಟ್‌ನಲ್ಲಿ ಯಾವುದೇ ಅಸಮತೋಲನ ಇರಬಾರದು. ಪ್ರದೇಶವಾರು, ಸಮುದಾಯವಾರು ಹಾಗೂ ಹಿರಿತನದ ಆಧಾರ ಮೇಲೆ ಮಂತ್ರಿಗಳನ್ನ ಮಾಡಲಾಗುತ್ತದೆ. ಆದರೆ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ಮೂರು ಅಂಶಗಳನ್ನು ಮಾನದಂಡಗಳಾಗಿ ಪರಿಗಣಿಸಿ, ಸಂಪುಟ ರಚಿಸಿಲ್ಲ.

blank

ಈ ಸಂಪುಟದಲ್ಲಿ ಅಸಮತೋಲನವಿದೆ. 13 ಜಿಲ್ಲೆಗಳಿಗೆ ಪ್ರಾತಿನಿಧ್ಯತೆಯೇ ಸಿಕ್ಕಿಲ್ಲ. ಜೊತೆಗೆ ಸಮುದಾಯದ ಆಧಾರದಲ್ಲೂ ಪರಿಪಕ್ವವಾದ ನ್ಯಾಯ ಒದಗಿಸಿಲ್ಲ. ಹೀಗಿರುವಾಗ, ಇದು ಎಲೆಕ್ಷನ್ ಕ್ಯಾಬಿನೆಟ್ ಆಗಲು ಹೇಗೆ ಸಾಧ್ಯ? ಪ್ರಶ್ನೆ ಕೂಡ ಇದೆ.

ಇತ್ತ 2023ರ ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಈ ವರ್ಷದ ಅಂತ್ಯದಲ್ಲಿ ಮತ್ತೊಮ್ಮೆ ಸಂಪುಟ ಪುನಾರಚನೆ ಆಗಬಹುದು ಅನ್ನೋ ಮಾತುಗಳು ಶುರುವಾಗಿವೆ. ಒಂದು ವೇಳೆ ಕ್ಯಾಬಿನೆಟ್​ ವಿಸ್ತರಣೆಯಾದರೆ ಎಲೆಕ್ಷನ್ ಕ್ಯಾಬಿನೆಟ್ ಆಗುವ ನಿರೀಕ್ಷೆ ಇದೆ. ಹೀಗಾಗಿ ಈಗ ರಚನೆಯಾಗಿರುವುದು ನೂತನ ಸಚಿವ ಸಂಪುಟ ಮಾತ್ರ. ಮುಂದೆ ಎಲೆಕ್ಷನ್ ಕ್ಯಾಬಿನೆಟ್ ರಚನೆಯಾಗಲಿದೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

Source: newsfirstlive.com Source link