ಬೊಮ್ಮಾಯಿ ನಡೆ ಟೀಕಿಸಿ ಬಿಜೆಪಿಯಲ್ಲೀಗ ಪ್ರೀತಂಗೌಡ ಒಬ್ಬಂಟಿ; ಮುಜುಗರಕ್ಕೆ ಒಳಗಾದ ಶಾಸಕ

ಬೊಮ್ಮಾಯಿ ನಡೆ ಟೀಕಿಸಿ ಬಿಜೆಪಿಯಲ್ಲೀಗ ಪ್ರೀತಂಗೌಡ ಒಬ್ಬಂಟಿ; ಮುಜುಗರಕ್ಕೆ ಒಳಗಾದ ಶಾಸಕ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಭೇಟಿ ವಿಚಾರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರ ಹಾಕಿರುವ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಇದೀಗ ಒಬ್ಬಂಟಿಯಾಗಿದ್ದಾರೆ ಅನ್ನೋ ಮಾತುಗಳು ಶುರುವಾಗಿವೆ.

ಪ್ರೀತಂಗೌಡ ಹೇಳಿಕೆ ಏನು..?
ಮುಖ್ಯಮಂತ್ರಿಯಾದ ಕೂಡಲೇ ಸುತ್ತೂರು, ಸಿರಿಗೆರೆ, ಸಿದ್ದಗಂಗಾ ಆದಿಚುಂಚನಗಿರಿ, ಮಠಕ್ಕೆ ಹೋಗ್ತಾರೆ ಅಂದ್ಕೊಂಡಿದ್ವಿ. ಆದರೆ ದೇವೇಗೌಡರ ಮನೆಗೆ ಹೋಗಿರುವುದು ಕಾರ್ಯಕರ್ತರಿಗೆ ನೋವಾಗಿದೆ. ದಿನ ಬೆಳಗ್ಗೆ ಜಿಲ್ಲೆಯಲ್ಲಿ ಗುದ್ದಾಡೋದು ನಾವು. ನಿಮ್ಮ ಮನೆಗೆ ಕಲ್ಲು ಹೊಡೆದವರ ಮನೆಗೆ ಕ್ಯಾಬಿನೆಟ್ ವಿಸ್ತರಣೆಗೂ ಮುನ್ನ ಹೋದರೆ ಹೇಗೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಏಕೆ ಏಕಾಂಗಿ..?
ಪ್ರೀತಂಗೌಡರ ಈ ಹೇಳಿಕೆ ವಿಚಾರದಲ್ಲಿ ಯಾವಬ್ಬ ಬಿಜೆಪಿ ನಾಯಕರೂ ಕೂಡ ಅವರ ಬೆನ್ನಿಗೆ ನಿಲ್ಲಲಿಲ್ಲ. ಸಿಎಂ ಗಾದಿಗೆ ಏರಿದ 24 ಗಂಟೆಯಲ್ಲಿ ದೇವೇಗೌಡರ ಆಶೀರ್ವಾದವನ್ನ ಪಡೆದುಕೊಂಡು ಬೊಮ್ಮಾಯಿ ಬಂದಿದ್ದರು. ಬೊಮ್ಮಾಯಿ ಅವರ ಅಡ್ಜಸ್ಮೆಂಟ್ ಪಾಲಿಟಿಕ್ಸ್ ಶಾಸಕ ಪ್ರೀತಂಗೌಡ ಧ್ವನಿ ಎತ್ತಿದ್ದರೂ ಬಿಜೆಪಿ ನಾಯಕರು ಸುಮ್ಮನೆ ಇದ್ದರು.

blank

ಮಾತ್ರವಲ್ಲ ಸಿಎಂ ಜೊತೆ ಹೆಚ್‌ಡಿಡಿ ಭೇಟಿಗೆ ಖುದ್ದು ತೆರಳಿದ್ದ ವಿ.ಸೋಮಣ್ಣ ವಿರುದ್ಧವೂ ಶಾಸಕರು ಕಿಡಿಕಾರಿದ್ದರು. ಇದೇ ವಿಚಾರಕ್ಕೆ ಪ್ರೀತಂಗೌಡ ಹಾಗೂ ಸೋಮಣ್ಣ ನಡುವೆ ‌ದೊಡ್ಡ ಮಾತಿನ ‌ಸಮರವೇ ಉಂಟಾಗಿತ್ತು. ಈ ಬೆಳವಣಿಗೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿತ್ತು.

ಯಾಕೆ ಬಿಜೆಪಿ ನಾಯಕರು ಬೆನ್ನಿಗೆ ನಿಲ್ಲಲಿಲ್ಲ..?
ಮೂಲಗಳ ಪ್ರಕಾರ ಹೈಕಮಾಂಡ್ ಕಾರಣಕ್ಕೆ ಪ್ರೀತಂಗೌಡ ಬೆನ್ನಿಗೆ ಬಿಜೆಪಿ ನಾಯಕರು ನಿಂತಿಲ್ಲ ಅಂತಾ ಹೇಳಲಾಗುತ್ತಿದೆ. ಹಾಸನ ಕ್ಷೇತ್ರದ ಸಮಸ್ಯೆ ನಮಗ್ಯಾಕೆ ಎಂದು ಮೌನಕ್ಕೆ ಶರಣಾಗಿದ್ದಾರಂತೆ. ಇನ್ನು ನಿನ್ನೆ ಸಿಎಂ ಅವರನ್ನ ಭೇಟಿಯಾಗಿದ್ದ ಪ್ರೀತಂಗೌಡರಿಗೆ ಸಿಎಂ ಬೊಮ್ಮಾಯಿ ಅವರು ಬುದ್ಧಿವಾದ ಹೇಳಿ ಕುಳುಹಿಸಿದ್ದರೆ ಎನ್ನಲಾಗಿದೆ.

ಮುಜುಗರಕ್ಕೆ ಒಳಗಾದ ಪ್ರೀತಂಗೌಡ
ಅಲ್ಲದೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಪ್ರೀತಂಗೌಡ ಅವರಿಗೆ ಕಿವಿ ಮಾತುಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಪ್ರೀತಂಗೌಡ ಮುಜುಗರಕ್ಕೆ ಒಳಗಾಗಿದ್ದಾರೆ. ದೇವೇಗೌಡರ ಭೇಟಿ ಹಳೇ ಮೈಸೂರು ಭಾಗದಲ್ಲಿನ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರೂ ತಮ್ಮ ಪಕ್ಷದ ನಾಯಕರು ಬೆನ್ನಿಗೆ ನಿಲ್ಲಲಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಆಪ್ತರ ಬಳಿ ಹೇಳಿಕೊಂಡ ಪ್ರೀತಂಗೌಡ ಆಕ್ರೋಶವನ್ನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿಎಂ ಆದ 24 ಗಂಟೆಯೊಳಗೆ ದೇವೇಗೌಡರ ಮನೆಗೇಕೆ ಹೋಗಬೇಕಿತ್ತು? -ಗುಡುಗಿದ ಬಿಜೆಪಿ ಶಾಸಕ

Source: newsfirstlive.com Source link