ಚಾಕು, ಚೂರಿ ಅಂತಿದ್ದ ಸೆಂಟ್ರಲ್​ ಜೈಲ್​ ಕೈದಿಗಳಿಂದ ಈಗ ಧ್ಯಾನದ ಜಪ; ಬದಲಾವಣೆಯೇ ರೋಚಕ

ಚಾಕು, ಚೂರಿ ಅಂತಿದ್ದ ಸೆಂಟ್ರಲ್​ ಜೈಲ್​ ಕೈದಿಗಳಿಂದ ಈಗ ಧ್ಯಾನದ ಜಪ; ಬದಲಾವಣೆಯೇ ರೋಚಕ

ಬೆಂಗಳೂರು: ಸದಾ ನೆಗೆಟಿವ್ ಸುದ್ದಿಯಲ್ಲಿರ್ತಿದ್ದ ಸೆಂಟ್ರಲ್ ಜೈಲಿನಲ್ಲೀಗ ಪಾಸಿಟಿವ್ ಸುದ್ದಿಯೊಂದು ಹರಿದಾಡ್ತಿದೆ. ಗಾಂಜಾ, ಚಾಕು ಚೂರಿ ಹೊಡೆದಾಟ ಅಂತಿದ್ದ ಜೈಲಿನಲ್ಲೀಗ ಎಲ್ಲೆಡೆ ಧ್ಯಾನ, ಯೋಗದ ಮಂತ್ರ ಜಪಿಸಲಾಗುತ್ತಿದೆ.

ಹೌದು ಕೋವಿಡ್ ಹಿನ್ನೆಲೆ ಖೈದಿಗಳ ಸದೃಢ ಆರೋಗ್ಯಕ್ಕೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪರಪ್ಪನ ಅಗ್ರಹಾರದಲ್ಲಿ ಖೈದಿಗಳಿಗೆ ಯೋಗ, ಧ್ಯಾನ ತರಬೇತಿ ನೀಡಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಮಾನಸಿಕ ಖಿನ್ನತೆಗೆ ಜಾರಿದ್ದ ಕೆಲ ಖೈದಿಗಳನ್ನ ತಪಾಸಣೆ ನಡೆಸಿದಾಗ ನಿಮ್ಹಾನ್ಸ್ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಖೈದಿಗಳು ಖಿನ್ನತೆಯಿಂದ ಬಳಲುತ್ತಿರುವ ಅಂಶ ಬೆಳಕಿಗೆ ಬಂದಿತ್ತು.

blank

ಜೈಲು ಸಿಬ್ಬಂದಿಗಳಿಗೆ ರವಿ ಶಂಕರ್ ಗುರೂಜಿ ಆಶ್ರಮದಿಂದ ಯೋಗ, ಧ್ಯಾನದ ತರಬೇತಿ..

ಕೊರೊನಾ ಹೆಮ್ಮಾರಿ ಕಾರಣದಿಂದ ಮನೆಯವರು ಬಾರದೆ ಖೈದಿಗಳು ಮಾನಸಿಕವಾಗಿ ನೊಂದಿದ್ರು. ಖೈದಿಗಳನ್ನ ಇದರಿಂದ ಹೊರ ತರ ಬೇಕಾದ್ರೆ ಯೋಗ, ಧ್ಯಾನ ಮಾಡಿಸುವಂತೆ ವೈದ್ಯರು ತಿಳಿಸಿದ್ದರು. ಇದರ ಬೆನ್ನಲ್ಲೇ ಕ್ರಮ ಕೈಗೊಂಡ ಹಿರಿಯ ಅಧಿಕಾರಿಗಳು ಜೈಲು ಸಿಬ್ಬಂದಿಗಳಿಗೆ ರವಿ ಶಂಕರ್ ಗುರೂಜಿ ಆಶ್ರಮದಿಂದ ಯೋಗ, ಧ್ಯಾನದ ತರಬೇತಿ ನೀಡಲಾಗಿತ್ತು.

ಈಗ ಜೈಲಿನ ಸಿಬ್ಬಂದಿಗಳಿಂದ ದಿನನಿತ್ಯ ಖೈದಿಗಳಿಗೆ ಯೋಗ, ಧ್ಯಾನದ ಬಗ್ಗೆ ಟ್ರೈನಿಂಗ್ ನೀಡಲಾಗುತ್ತಿದ್ದು, ಸೂರ್ಯ ನಮಸ್ಕಾರ, ಯೋಗ, ಧ್ಯಾನ, ಗೂರೂಜಿ ಪುಸ್ತಕಗಳ ಬಗ್ಗೆ ಪ್ರವಚನ ಮಾಡಲಾಗುತ್ತಿದೆ. ಕೇವಲ ಯೋಗ, ಧ್ಯಾನ ಅಷ್ಟೇ ಅಲ್ದೆ, ಕೈದಿಗಳ ಮನಃಪರಿವರ್ತನೆಗೆ ಅಧಿಕಾರಿಗಳಿಂದ ವಿಶೇಷ ತರಗತಿ ಕೂಡ ಆಯೋಜಿಸಲಾಗುತ್ತಿದೆ.

ಇದನ್ನೂ ಓದಿ:  ಹೆಚ್ಚುತ್ತಿರುವ ಕೊರೊನಾ: ಬೆಂಗಳೂರಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧ

ಪ್ರತಿ ನಿತ್ಯ 6.30 ರಿಂದ‌ 8.30 ರ ವರೆಗೆ ಖೈದಿಗಳಿಗೆ ಯೋಗ ತರಬೇತಿ ನೀಡಲಾಗುತ್ತಿದ್ದು, ಈ ನಡುವೆ ಹೆಚ್ಚು ತೂಕ ಇರೋರು, ಅನಾರೋಗ್ಯವುಳ್ಳವರಿಗೆ ಪ್ರತ್ಯೇಕ ತರಬೇತಿ ನೀಡುವದರ ಜೊತೆಗೆ ಪ್ರತಿ ನಿತ್ಯ ಜೈಲಲ್ಲಿ ಸ್ಪೋರ್ಟ್ ಆಕ್ಟಿವಿಟೀಸ್​ಗಳಲ್ಲಿ ತೊಡಗುವಂತೆ ಮಾಡಲಾಗುತ್ತಿದೆ.

blank

ಸದೃಢ ದೇಹ ಹಾಗೂ ಆರೋಗ್ಯ ಜೊತೆಗೆ ಕೈದಿಗಳ ಮನಃ ಪರಿವರ್ತನೆಯಲ್ಲಿ ಸಕ್ರಿಯರಾದ ಸಿಬ್ಬಂದಿಗಳಿಗೆ ಬಹುಮಾನದ ಭರವಸೆ ನೀಡಿದ ಹಿರಿಯ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯ ಕಂಡು ಬಂದ್ರೆ ಶಿಸ್ತುಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ ಕೂಡ ನೀಡಲಾಗಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link