ನಿನ್ನೆ ಈಶ್ವರಪ್ಪ.. ಇಂದು ಮತ್ತೊಬ್ಬ ಸಚಿವ; ಕಳಂಕಿತ ಸಚಿವೆ ಜೊಲ್ಲೆ ಪರ ಹೆವಿ ಬ್ಯಾಟಿಂಗ್

ನಿನ್ನೆ ಈಶ್ವರಪ್ಪ.. ಇಂದು ಮತ್ತೊಬ್ಬ ಸಚಿವ; ಕಳಂಕಿತ ಸಚಿವೆ ಜೊಲ್ಲೆ ಪರ ಹೆವಿ ಬ್ಯಾಟಿಂಗ್

ಹುಬ್ಬಳ್ಳಿ: ನಿನ್ನೆಯಷ್ಟೇ ಕಳಂಕಿತ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಘನವೆತ್ತ ಸರ್ಕಾರ ಸಚಿವ ಕೆಎಸ್​ ಈಶ್ವಪ್ಪ ಅವರು ಬ್ಯಾಟ್ ಬೀಸಿದ್ದರು. ಇದೀಗ ರಾಜ್ಯ ಸರ್ಕಾರದ ಮತ್ತೋರ್ವ ಸಚಿವ ಸಿಸಿ ಪಾಟೀಲ್ ಬ್ಯಾಟ್ ಬೀಸಿದ್ದಾರೆ.

blank

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಚಿವರು.. ಶಶಿಕಲಾ ಜೊಲ್ಲೆ ಆರೋಪಿ ಅಲ್ಲ, ಕೇವಲ ಆರೋಪ ಮಾತ್ರ ಆಗಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡ್ತಾರೆ. ಮುಖ್ಯಮಂತ್ರಿಗಳು ಆ ಬಗ್ಗೆ ಚರ್ಚೆ ಮಾಡ್ತಾರೆ. ಕಾನೂನು ರೀತಿ ಯಾವ ಕ್ರಮ ಆಗುತ್ತೋ ಆದಾಗುತ್ತದೆ. ಆದೇ ಆಕೆ ಆರೋಪಿ ಅಲ್ಲ, ತನಿಖೆ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ ಎಂದಿದ್ದಾರೆ.

blank

ನಿನ್ನೆಯಷ್ಟೇ ಜೊಲ್ಲೆ ಪರ ಕೆಎಸ್​ ಈಶ್ವರಪ್ಪ ಮಾತನಾಡಿ.. ಯಾವುದೇ ವ್ಯಕ್ತಿ ಕೊಲೆ ಮಾಡಿ ಬಂದಿದ್ದರೂ ಕೂಡ ಆತನ ವಿರುದ್ಧ ತನಿಖೆ ಮಾಡಿ, ತೀರ್ಪು ಬಂದ ಮೇಲೆಯೇ ಶಿಕ್ಷೆ ಆಗೋದು. ಯಾರೋ ಒಬ್ಬರು ಬಂದರು, ಶಶಿಕಲಾ ಜೊಲ್ಲೆ ಜೊತೆ ಮಾತನಾಡಿದರು ಅಂದ ಮಾತ್ರಕ್ಕೆ ಅವರು ಭಷ್ಟ್ರಾಚಾರ ಆರೋಪ ಹೊತ್ತಿದ್ದಾರೆ. ಅವರ ರಾಜೀನಾಮೆ ಕೊಡಿಸಿ ಅನ್ನೋದು ತಪ್ಪು ಅಂತಾ ಹೇಳಿದ್ದರು.

ಇದನ್ನೂ ಓದಿ: ‘ಜೊಲ್ಲೆ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ’ ಈಶ್ವರಪ್ಪ​ ನಾಚಿಕೆಗೇಡಿನ ಹೇಳಿಕೆ

Source: newsfirstlive.com Source link