ಫೇಸ್​​ಬುಕ್​​​ನಲ್ಲಿ ಬಯಲಿಗೆ ಬಂದ ಸಂಸಾರದ ಗುಟ್ಟು; ಗಂಡನ ಪ್ರೇಯಸಿಗೆ ಹೆಂಡತಿ ತಪರಾಕಿ

ಫೇಸ್​​ಬುಕ್​​​ನಲ್ಲಿ ಬಯಲಿಗೆ ಬಂದ ಸಂಸಾರದ ಗುಟ್ಟು; ಗಂಡನ ಪ್ರೇಯಸಿಗೆ ಹೆಂಡತಿ ತಪರಾಕಿ

ಗಂಡನ ಅಕ್ರಮ ಸಂಬಂಧದ ಬಗ್ಗೆ ಪತ್ನಿ ಸೋಷಿಯಲ್​​ ಮೀಡಿಯಾದಲ್ಲೇ ಚರ್ಚೆ ನಡೆಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಧಿಕಾ ಎಂಬಾಕೆ ತನ್ನ ಗಂಡ ರಾಮ್,​ ಪ್ರತಿಕಾ ಎಂಬ ಯುವತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರ ಬಗ್ಗೆ ಫೇಸ್​​​ಬುಕ್​​ನಲ್ಲಿ ಬರೆದು ಬೀದಿ ಕಾಳಗಕ್ಕೆ ನಿಂತಿದ್ದಾರೆ. ಈಕೆ ಬೀದಿ ಕಾಳಗಕ್ಕೆ ನಿಂತಿರುವುದು ಮತ್ಯಾರೊಂದಿಗೂ ಅಲ್ಲ, ಬದಲಿಗೆ ತನ್ನ ಗಂಡನ ಜತೆ ಅಕ್ರಮ ಸಂಬಂಧ ಬೆಳೆಸಿದ್ದ ಯುವತಿ ಪತ್ರಿಕಾ ಜೊತೆ.

ಹೌದು, ರಾಮ್​​ ಬಗ್ಗೆ ಹೆಂಡತಿ ರಾಧಿಕಾ ಮತ್ತು ಪ್ರೇಯಸಿ ಪ್ರತಿಕಾ ಫೇಸ್​​ಬುಕ್​​ನಲ್ಲೇ ಬರೆದು ರಂಪಾಟ ಮಾಡುತ್ತಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕಾಮೆಂಟ್ಸ್​​ನಲ್ಲಿ ಅಶ್ಲೀಲವಾಗಿ ಬೈದುಕೊಳ್ಳುವ ಹಂತಕ್ಕೆ ಬೀದಿ ಕಾಳಗ ತಲುಪಿದೆ.

ಕೆಲವು ವರ್ಷಗಳ ಹಿಂದೆಯೇ ರಾಮ್​​ನನ್ನು ರಾಧಿಕಾ ಮದುವೆಯಾಗಿದ್ದಳು. ಆದರೆ, ಮದುವೆಯಾದ ಮೇಲೂ ರಾಮ್​​​​​ ಪ್ರತಿಕಾ ಎಂಬ ಯುವತಿಯನ್ನು ಪ್ರೀತಿಸಿದ್ದ. ಈ ವಿಚಾರ ಗೊತ್ತಾದ ಕೂಡಲೇ ರಾಧಿಕಾ ತನ್ನ ಗಂಡ ರಾಮ್​​ ಜೊತೆಗೆ ಜಗಳವಾಡಿದ್ದರು.ಪ್ರತಿಕಾಗೂ ಫೋನ್​​ ಮಾಡಿ ಜಾಡಿಸಿದ್ದರು.

ಇದನ್ನೂ ಓದಿ: ತಾಯಿಗೆ ಒಲಿಂಪಿಕ್ ಪದಕ ತೊಡಿಸಿದ ಕ್ಯಾಪ್ಟನ್; ಮಡಿಲಲ್ಲಿ ಮಗುವಾಗಿ ಕಸು ಪಡೆದ ಮನ್​ಪ್ರೀತ್..!

ಒಂದಷ್ಟು ದಿನಗಳ ಕಾಲ ಸುಮ್ಮನಿದ್ದ ಪ್ರತೀಕಾ ದಿಢೀರ್​​​​ ನನ್ನನ್ನ ರಾಮ್​​ ಕರೆದ ಎಂದು ರಾಧಿಕಾ ಮನೆಗೆ ಬಂದಿದ್ದಾಳೆ. ಈ ವೇಳೆ ಆಕ್ರೋಶಗೊಂಡ ರಾಮ್​​​ ಸುಳ್ಳು ಹೇಳುತ್ತೀಯಾ ಎಂದು ಪ್ರೇಯಸಿ ಮೇಲೆ ಹಲ್ಲೆ ನಡೆಸಿದ್ದಾನೆ. ರಾಮ್​​-ಪ್ರತಿಕಾ ಜಗಳವನ್ನು ರಾಧಿಕಾ ಮೊಬೈಲಿನಲ್ಲಿ ಸೆರೆ ಹಿಡಿದು ಸೋಷಿಯಲ್​​ ಮೀಡಿಯಾದಲ್ಲಿ ಅಪ್ಲೋಡ್​​ ಮಾಡಿದ್ದಾರೆ. ಈ ವಿಡಿಯೋ ಈಗ ಭಾರೀ ವೈರಲ್​​ ಆಗಿದೆ.

Source: newsfirstlive.com Source link