ನಿಂಬೆ ಹಣ್ಣಿಗಿಂತ ವಿಭಿನ್ನ ನಿಂಬೆ ಹಣ್ಣು ಬಂತು ನೋಡು; ಈ ನಿಂಬೆಗೆ ಮನಸೋತಿತು ಮೈಸೂರು

ನಿಂಬೆ ಹಣ್ಣಿಗಿಂತ ವಿಭಿನ್ನ ನಿಂಬೆ ಹಣ್ಣು ಬಂತು ನೋಡು; ಈ ನಿಂಬೆಗೆ ಮನಸೋತಿತು ಮೈಸೂರು

ಮೈಸೂರು: ಜಿಲ್ಲೆಯಲ್ಲಿ ಬರೋಬ್ಬರಿ 2ಕೆಜಿ ತೂಗುವ ಗಜ ಗಾತ್ರದ ನಿಂಬೆ ಹಣ್ಣೊಂದು ಪತ್ತೆಯಾಗಿದ್ದು ಜನಮಾನಸದಲ್ಲಿ ಅಚ್ಚರಿಯನ್ನುಂಟು ಮಾಡಿದೆ.

blank

ಹೌದು ಜಿಲ್ಲೆಯ ಸರಗೂರು ತಾಲೂಕಿನ ಬಿದರಳ್ಳಿಯಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಸನೋಜ್​ ಎಂಬುವವರ ಮನೆಯಲ್ಲಿನ ನಿಂಬೆ ಗಿಡದಲ್ಲಿ ಭಾರೀ ಗಾತ್ರದ ನಿಂಬೆ ಹಣ್ಣು ಬೆಳೆದಿದೆ. ಈ ಗಿಡದಲ್ಲಿ ಒಟ್ಟು ಮೂರು ನಿಂಬೆ ಹಣ್ಣುಗಳು ಬೆಳೆದಿದ್ದು ಒಂದು ನಿಂಬೆ ಹಣ್ಣು ಮಾತ್ರ ಬರೋಬ್ಬರಿ 2ಕೆಜಿ 150 ಗ್ರಾಂನಷ್ಟು ತೂಕ ಹೊಂದಿ ಆಶ್ಚರ್ಯ ಉಂಟು ಮಾಡಿದ್ದು ಸ್ಥಳೀಯರು ಬೆರಗಾಗಿದ್ದಾರೆ.

ಇದನ್ನೂ ಓದಿ:  ‘ನಾನು ಈಗಲೂ ಗಟ್ಟಿಮುಟ್ಟು’ ಆರೋಗ್ಯದ ಗುಟ್ಟನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಿದ್ದರಾಮಯ್ಯ

blank

ಇನ್ನು ಈ ಲಿಂಬೆ ದೊಡ್ಡ ಗಾತ್ರ ಬರುವವರೆಗೂ ಮನೆ ಮಾಲೀಕ ಸನೋಜ ಕಾವಲಿದ್ದು ನೋಡಿಕೊಳ್ತಿದ್ದರಂತೆ. ಸ್ಥಳಕ್ಕೆ ಕೃಷಿ ಇಲಾಖೆ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದು, ಇದೊಂದು ಅಚ್ಚರಿಯ ತಳಿಯಾಗಿದ್ದು, ಇದನ್ನು ಪೋಷಿಸಿ ಅಭಿವೃದ್ಧಿ ಪಡಿಸಿ ಎಂದಿದ್ದಾರೆ.

Source: newsfirstlive.com Source link