3ನೇ ಅಲೆ ಮುನ್ನವೇ ಮಕ್ಕಳಲ್ಲೂ ಪತ್ತೆಯಾದ ಕೊರೋನಾ ಸೋಂಕು; ಆತಂಕದಲ್ಲಿ ಪೋಷಕರು

3ನೇ ಅಲೆ ಮುನ್ನವೇ ಮಕ್ಕಳಲ್ಲೂ ಪತ್ತೆಯಾದ ಕೊರೋನಾ ಸೋಂಕು; ಆತಂಕದಲ್ಲಿ ಪೋಷಕರು

ರಾಜ್ಯದಲ್ಲಿ ಕೊರೋನಾ ವೈರಸ್​​ ಆರ್ಭಟ ಜೋರಾಗಿದೆ. ಹಿರಿಯರು, ಮಧ್ಯ ವಯಸ್ಕರು, ಮಹಿಳೆಯರು, ಯುವಕರು ಬೆನ್ನಲ್ಲೀಗ ಮಕ್ಕಳಿಗೂ ಕೊರೋನಾ ಪಾಸಿಟಿವ್​​ ಕಾಣಿಸಿಕೊಳ್ಳುತ್ತಿದೆ. ಇದು ಕೊರೋನಾ ಮೂರನೇ ಅಲೆ ಮುನ್ಸೂಚನೆ ಎಂದು ಹೇಳಲಾಗುತ್ತಿದ್ದು, ಮಕ್ಕಳಿಗೆ ಕೋವಿಡ್​​​​-19 ಸೋಂಕು ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಮಕ್ಕಳಿಗೆ ಕೂಡ ವ್ಯಾಕ್ಸಿನ್​​ ನೀಡಬೇಕು. ಎಲ್ಲಾ ಮಕ್ಕಳಿಗೂ ಲಸಿಕೆ ನೀಡಿದ್ದರೆ ಕೊರೋನಾ ಪಾಸಿಟಿವ್​​ ಪತ್ತೆ ಆಗುತ್ತಿರಲಿಲ್ಲ. ಯಾವ ವಯಸ್ಸಿನ ಮಕ್ಕಳಿಗೆ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಅಧ್ಯಯನ ಮಾಡಲಾಗುವುದು. ಸೋಂಕಿಗೆ ನಿಖರವಾದ ಕಾರಣವೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ದಿನವಾರು ಮಕ್ಕಳಿಗೆ ಸೋಂಕು‌ ಪತ್ತೆ ವಿವರ…

ದಿನಾಂಕ – ಹೆಣ್ಣು + ಗಂಡು: ಒಟ್ಟು

  • ಆಗಸ್ಟ್ 01 – 22+ 35 = 57
  • ಆಗಸ್ಟ್ 02 – 13 + 17 = 30
  • ಆಗಸ್ಟ್ 03 – 26+ 30 = 56
  • ಆಗಸ್ಟ್ 04 – 37+ 24 = 61
  • ಆಗಸ್ಟ್ 05 – 25+ 34 = 59
  • ಆಗಸ್ಟ್ 06 – 34 + 33 = 67
  • ಆಗಸ್ಟ್ 07 – 30 + 20 = 50
  • ಆಗಸ್ಟ್ 08 – 20 + 18 = 38
  • ಆಗಸ್ಟ್ 09 – 19 + 23 = 42
  • ಆಗಸ್ಟ್ 10 – 20 + 25 = 45

ಇದುವರೆಗೂ ಒಟ್ಟು 246 ಹೆಣ್ಣು ಮಕ್ಕಳು ಮತ್ತು 259 ಮಂದಿ ಗಂಡು ಮಕ್ಕಳಿಗೆ ಅಂದರೆ ಒಟ್ಟು 505 ಕೊರೋನಾ ಕೇಸ್​​ ಪತ್ತೆಯಾಗಿವೆ. ಹೀಗಾಗಿ ಸದ್ಯದಲ್ಲೇ ಕೇಂದ್ರ ಸರ್ಕಾರ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಜರ್ಮನಿಯಲ್ಲಿ ಸುಮಾರು 8,600 ಮಂದಿಗೆ ನಕಲಿ ಲಸಿಕೆ ನೀಡಿದ್ರಾ ನರ್ಸ್​​​? ನಡೆದಿದ್ದೇನು?

Source: newsfirstlive.com Source link