ಬೆಂಗಳೂರಿನಲ್ಲಿ ಕೊರೊನಾ ಡೆಲ್ಟಾ ಪ್ಲಸ್​​​ ಜತೆಗೆ ಕಪ್ಪಾ ತಳಿ ​ಹಾವಳಿ; ಭಾರೀ ಆತಂಕ

ಬೆಂಗಳೂರಿನಲ್ಲಿ ಕೊರೊನಾ ಡೆಲ್ಟಾ ಪ್ಲಸ್​​​ ಜತೆಗೆ ಕಪ್ಪಾ ತಳಿ ​ಹಾವಳಿ; ಭಾರೀ ಆತಂಕ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್​​ ಹೊಸ ತಳಿ ಪತ್ತೆಯಾಗಿದೆ. ಇದುವರೆಗೂ 148 ಮಂದಿಗೆ ಕೊರೋನಾ ಡೆಲ್ಟಾ ತಳಿ ಸೋಂಕು ಕಾಣಿಸಿಕೊಂಡರೆ, ಇನ್ನು 8 ಮಂದಿಗೆ ಕಪ್ಪಾ ತಳಿ ಎಂಬ ಹೊಸ ಸೋಂಕು ಪತ್ತೆಯಾಗಿದೆ. ಇದರಿಂದ ನಗರದ ಜನ ಭಾರೀ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.

ಇತ್ತೀಚೆಗೆ ರಾಜ್ಯಾದ್ಯಂತ ಕೊರೋನಾ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಮೂರಲೇ ಅಲೆಯ ಆತಂಕದ ನಡುವೆ ಕೊರೋನಾ ವೈರಸ್​​​​​ ಹೊಸ ತಳಿ ಪತ್ತೆಯಾಗಿರುವುದು ಎಲ್ಲಾರನ್ನು ಆತಂಕಕ್ಕೆ ದೂಡಿದೆ.

ಇದನ್ನೂ ಓದಿ: ಜರ್ಮನಿಯಲ್ಲಿ ಸುಮಾರು 8,600 ಮಂದಿಗೆ ನಕಲಿ ಲಸಿಕೆ ನೀಡಿದ್ರಾ ನರ್ಸ್​​​? ನಡೆದಿದ್ದೇನು?

ಆರೋಗ್ಯ ಇಲಾಖೆ 192 ಜನರ ಗಂಟಲು ದ್ರವವನ್ನು ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್​ಗೆ ರವಾನೆ ಮಾಡಿತ್ತು. ಈ ಪೈಕಿ 148 ಮಂದಿಗೆ ಡೆಲ್ಟಾ ತಳಿ ಸೋಂಕು ಕಾಣಿಸಿಕೊಂಡಿದೆ. ಅಂತೆಯೇ 8 ಮಂದಿಗೆ ಕಪ್ಪಾ ಪತ್ತೆಯಾಗಿದ್ದು, ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

Source: newsfirstlive.com Source link