ರಾಜ್ಯಸಭೆಯಲ್ಲಿ ಗದ್ದಲ; ವೆಂಕಯ್ಯ ನಾಯ್ಡು ಭೇಟಿ ಮಾಡಿದ ವಿಪಕ್ಷಗಳ ನಿಯೋಗ

ನವದೆಹಲಿ: ಹಲವು ಮಸೂದೆಗಳ ಬಗ್ಗೆ ಯಾವುದೇ ಚರ್ಚೆ ಮಾಡದೇ ಅಂಗೀಕರಿಸಲಾಗಿದೆ ಅಂತಾ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಮನವಿ ಪತ್ರ ಸಲ್ಲಿಸಿ ಬಂದಿದ್ದೇವೆ ಅಂತಾ ರಾಜ್ಯಸಭೆಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.

ಈ ಸಂಬಂಧ ವಿರೋಧ ಪಕ್ಷಗಳ ನಾಯಕರು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನ ಭೇಟಿಯಾದರು. ಈ ಭೇಟಿ ವೇಳೆ ಕಾಂಗ್ರೆಸ್​, ಶಿವಸೇನಾ, ಡಿಎಂಕೆ, ಸಿಪಿಐಎಂ, ಆರ್​ಜೆಡಿ, ಎನ್​ಸಿಪಿ, ಸಿಪಿಐ, ಐಯುಎಂಎಲ್, ಎಲ್​ಜೆಡಿ ನಾಯಕರು ಇದ್ದರು.

ವೆಂಕಯ್ಯ ನಾಯ್ಡು ಅವರನ್ನ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಖರ್ಗೆ, ಆಡಳಿತ ಪಕ್ಷ ಏಕಪಕ್ಷೀಯ ನಿರ್ಧಾರವನ್ನ ತೆಗೆದುಕೊಳ್ತಿದೆ. ರಾಜ್ಯಸಭೆಯಲ್ಲಿ ಚರ್ಚೆಯನ್ನೇ ಮಾಡದೇ ಹಲವು ಮಸೂದೆಗಳನ್ನ ಅಂಗೀಕಾರ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ಇದು ಆಗಬಾರದು. ಹೀಗಾಗಿ ನಾವು ಮಾನ್ಯ ಸಭಾಧ್ಯಕ್ಷರಿಗೆ ಮನವಿಯನ್ನ ಸಲ್ಲಿಕೆ ಮಾಡಿ ಬಂದಿದ್ದೇವೆ ಅಂತಾ ಹೇಳಿದರು.

ರಾಜ್ಯಸಭೆಯಲ್ಲಿ ಗದ್ದಲ; ವೆಂಕಯ್ಯ ನಾಯ್ಡು ಭೇಟಿ ಮಾಡಿದ ವಿಪಕ್ಷಗಳ ನಿಯೋಗ

ಕಣ್ಣೀರು ಇಟ್ಟಿ ವೆಂಕಯ್ಯ ನಾಯ್ಡು..!
ನಿನ್ನೆ ರಾಜ್ಯಸಭಾ ಕಲಾಪದ ವೇಳೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಭಾವುಕರಾಗಿದ್ದರು. ರಾಜ್ಯಸಭೆ ಕಲಾಪದ ವೇಳೆ ವಿರೋಧ ಪಕ್ಷದ ನಾಯಕರುಗಳು ಗದ್ದಲ ಹಾಗೂ ಅಶಿಸ್ತಿನ ವರ್ತನೆಯನ್ನ ತೋರಿಸಿದ್ರು. ಕೆಲವು ಸದಸ್ಯರು ಮೇಜಿನ ಮೇಲೆ ಏರಿದಾಗ ಅಧಿಕಾರಿಗಳು ಮತ್ತು ಸದನದ ವರದಿಗಾರರು ಕುಳಿತಿದ್ದರು. ಮತ್ತೊಬ್ಬ ಸಂಸದರು ಅಧ್ಯಕ್ಷರ ಮೇಲೆ ಅಧಿಕೃತ ಕಡತವೊಂದನ್ನು ಎಸೆದಿದ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿ ಮಾತನಾಡಿದ್ದ ವೆಂಕಯ್ಯ ನಾಯ್ಡು.. ವರದಿಗಾರರು ಕುಳಿತುಕೊಳ್ಳುವ ಜಾಗವನ್ನು ದೇವಾಲಯದ ಗರ್ಭಗುಡಿ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ವರ್ತನೆಯಿಂದ ರಾಜ್ಯಸಭೆಯ ಎಲ್ಲಾ ಪಾವಿತ್ರ್ಯತೆ ಹಾಳಾಯಿತು, ಕಳೆದ ದಿನ ನಿದ್ರೆಯಿಲ್ಲದೇ ರಾತ್ರಿ ಕಳೆದಿದ್ದೇನೆ ಅಂತಾ ಕಣ್ಣೀರು ಇಟ್ಟಿದ್ದರು.

ಇನ್ನು ನಿನ್ನೆಯ ರಾಜ್ಯಸಭೆಯಲ್ಲಿ ನಡೆದ ಕೋಲಾಹಲ ಇದೀಗ ರಾಜಕೀಯವಾಗಿ ಬಿರುಸುಗೊಳ್ತಿದೆ. ವಿರೋಧ ಪಕ್ಷಗಳು ಹೊರಗಿನವರನ್ನ ಕರೆಸಿ ನಮ್ಮ ಮಹಿಳಾ ಸಂಸದರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಂತಾ ಆರೋಪಿಸಿದೆ.

ಇತ್ತ ಈ ಆರೋಪವನ್ನ ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ನಿನ್ನೆ ಸದನದಲ್ಲಿ ನಡೆದಿರುವ ವಿಡಿಯೋ ಒಂದನ್ನ ಬಿಡುಗಡೆ ಮಾಡಿದೆ. ಈ ವಿಡಿಯೋ ಬಿಡುಗಡೆ ಮಾಡಿ, ಕಾಂಗ್ರೆಸ್​ ವಿರುದ್ಧ ಬೊಟ್ಟು ಮಾಡಿದೆ. ಕಲಾಪದ ಸಂದರ್ಭದಲ್ಲಿ ಯಾರೂ ಹೊರಗಿನವರು ಬಂದಿಲ್ಲ. ಆದರೆ ವಿರೋಧ ಪಕ್ಷದ ಸಂಸದೇ ಮಾರ್ಷಲ್​​ಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದೆ.

Source: newsfirstlive.com Source link