ಕುಡಿದ ಮತ್ತಿನಲ್ಲಿ ಬಸ್​ನಲ್ಲೇ ಮಷಿನ್ ಗನ್​ ಬಿಟ್ಟ ಪೊಲೀಸ್; ಸೈನಿಕನಿಂದಾಗಿ ತಪ್ಪಿತು ಮಹಾದುರಂತ

ಕುಡಿದ ಮತ್ತಿನಲ್ಲಿ ಬಸ್​ನಲ್ಲೇ ಮಷಿನ್ ಗನ್​ ಬಿಟ್ಟ ಪೊಲೀಸ್; ಸೈನಿಕನಿಂದಾಗಿ ತಪ್ಪಿತು ಮಹಾದುರಂತ

ಕುಡಿದ ಮತ್ತಿನಲ್ಲಿ ಓರ್ವ ಪೊಲೀಸ್ ಮಷಿನ್ ಗನ್​ ಕಾರ್ಟ್​ರಿಡ್ಜ್ ಹಾಗೂ ಕಾರ್ಬೈನ್​ನ್ನು ಬಸ್​ನಲ್ಲೇ ಬಿಟ್ಟುಹೋದ ಘಟನೆ ಉತ್ತರ ಪ್ರದೇಶದ ಮೀರತ್​​ನಲ್ಲಿ ನಡೆದಿದೆ. ಅಧಿಕಾರಿಯನ್ನ ಬೇಜವಾಬ್ದಾರಿ ಹಿನ್ನೆಲೆ ಸಸ್ಪೆಂಡ್ ಮಾಡಲಾಗಿದೆ. ಮೀರತ್​ನ ಪೊಲೀಸ್ ಯೋಗೇಶ್ ಶರ್ಮಾ ಎಂಬುವರನ್ನ ಅಲ್ಲಿನ ಬ್ಲಾಕ್ ಪ್ರಮುಖ್ ಪಂಕಜ್ ಗೌತಮ್ ಎಂಬುವರಿಗೆ ಸೆಕ್ಯುರಿಟಿ ನೀಡಲು ನಿಯೋಜಿಸಲಾಗಿತ್ತು.

ಡ್ಯೂಟಿ ಮುಗಿಸಿ ಮನೆಗೆ ತೆರಳುವ ವೇಳೆ ಪೊಲೀಸ್ ಮದ್ಯ ಸೇವಿಸಿ ಬಸ್​ನಲ್ಲಿ ತೆರಳಿದ್ದಾರೆ ಎನ್ನಲಾಗಿದೆ. ಆದ್ರೆ ಬಸ್​ನಿಂದ ಇಳಿದ ವೇಳೆ ಮಷಿನ್ ಗನ್​ನ್ನು ಬಸ್​ನಲ್ಲೇ ಮರೆತು ಹೋಗಿದ್ದಾರೆ. ಅದೃಷ್ಟವಶಾತ್​ ಬಸ್​ನಲ್ಲಿ ಆರ್ಮಿ ಸೈನಿಕ ರೋಹಿತ್ ಕುಮಾರ್ ಎಂಬುವವರು ಪ್ರಯಾಣಿಸುತ್ತಿದ್ದರು. ಯೋಗೇಶ್ ಶರ್ಮಾ ಮಷಿನ್ ಗನ್ ಮರೆತು ಹೋಗಿದ್ದನ್ನ ಗಮನಿಸಿ ಅದನ್ನ ಪೊಲೀಸರಿಗೆ ಮರಳಿಸಿದ್ದಾರೆ.

ಆದರೆ ಆರ್ಮಿ ಸೈನಿಕನ ವಿರುದ್ಧವೇ ಆರೋಪ ಹೊರಿಸಿರುವ ಯೋಗೇಶ್ ಶರ್ಮಾ.. ನನಗೆ ವಿಷಪ್ರಾಸನ ಮಾಡಿ ಸೈನಿಕ ನನ್ನಿಂದ ಮಷಿನ್ ಗನ್ ಕಸಿದುಕೊಂಡಿದ್ದರು ಎಂದಿದ್ದಾರೆ. ಸದ್ಯ ಯೋಗೇಶ್ ಶರ್ಮಾ ಅವರನ್ನ ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ.

Source: newsfirstlive.com Source link