ಬೆಳಗ್ಗೆನೂ ಶೂಟಿಂಗ್​, ರಾತ್ರಿಯೂ ಶೂಟಿಂಗ್​; ಈ ವಯಸ್ಸಿನಲ್ಲೂ ದುಡಿದು ದಣಿದ ಬಿಗ್​​-ಬಿ

ಬೆಳಗ್ಗೆನೂ ಶೂಟಿಂಗ್​, ರಾತ್ರಿಯೂ ಶೂಟಿಂಗ್​; ಈ ವಯಸ್ಸಿನಲ್ಲೂ ದುಡಿದು ದಣಿದ ಬಿಗ್​​-ಬಿ

ಟಿವಿಗಳಲ್ಲಿ ತುಂಬಾ ರಿಯಾಲಿಟಿ ಶೋಗಳು ಬರ್ತವೆ…ಆದ್ರೆ, ಎಲ್ಲಾ ವಯಸ್ಸಿನವರು ಕೂತು ನೋಡುವಂಥ ಶೋ ಅಂದ್ರೆ ಅದು ಕೌನ್​ ಬನೇಗಾ ಕರೋಡ್​ಪತಿ. ಇದು, ಆಲ್ಮೋಸ್ಟ್​ ಆಲ್​ ಎಲ್ಲಾ ಭಾಷೆಗಳಲ್ಲಿ ಈ ಶೋ ಬರುತ್ತೆ. ಹಿಂದಿ ಭಾಷೆಯಲ್ಲಿ ಈ ಶೋನ ಬಿಗ್​ ಬಿ ಅಮಿತಾಭ್​ ಬಚ್ಚನ್​ ನಡೆಸಿಕೊಡ್ತಾಯಿದ್ದು, ನಿನ್ನೆಯಿಂದ 13ನೇ ಸೀಸನ್​ನ್ನ ಶೂಟಿಂಗ್ ಶುರುವಾಗಿದೆ.

ಬೆಳಿಗ್ಗೆ ಕೌನ್​ಬನೇಗಾ ರಾತ್ರಿ ಬ್ರಹ್ಮಾಸ್ತ್ರ

ನಿನ್ನೆಯ ಮೊದಲ ದಿನದ ಶೂಟಿಂಗ್​ಗೆ ಅಮಿತಾಭ್​ ಬಚ್ಚನ್​ ಲೇಟ್​ ಆಗಿ ಹೋಗಿದ್ದಾರೆ. ಕಾರಣ ರಾತ್ರಿಯೆಲ್ಲಾ ಮಾಡಿರೋ ಸಿನಿಮಾದ ಶೂಟಿಂಗ್​. ಹೌದೂ, ಬಿಗ್​ ಬಿಗೆ ಹೆಸ್ರಿಗಷ್ಟೇ ವಯಸ್ಸಾಗಿದೆ. ದೇಹಕ್ಕೂ ಆಗಿಲ್ಲ, ಮನಸ್ಸಿಗಂತೂ ಮೊದಲೇ ಆಗಿಲ್ಲ. ಪ್ರತಿ ದಿನ ಬ್ಯುಝಿಯಿರೋ ಇರೋ ಇವ್ರು ನಿನ್ನೆ ತಮಗೆ ಆಗ್ತಾಯಿರೋ ಸುಸ್ತಿನ ಬಗ್ಗೆ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ರಾತ್ರಿಯೆಲ್ಲಾ ಬ್ರಹ್ಮಾಸ್ತ್ತ್ರ ಚಿತ್ರದ ಶೂಟಿಂಗ್​ನಲ್ಲಿ ಬ್ಯುಝಿ ಇದ್ದೆ. ಹೀಗಾಗಿ, ನಿದ್ದೆಯಿಲ್ಲ.  ಬೆಳಗಾದ್ರೆ ಕೆಬಿಸಿ ಶೂಟಿಂಗ್​ಗೆ ಹೋಗ್ಬೇಕು. ಇದು ನನ್ನ ಎನರ್ಜಿಯನ್ನ ಕಡಿಮೆ ಮಾಡ್ತಾಯಿದೆ. ಮೊದಲ ದಿನದ ಶೂಟಿಂಗ್​ಗೆ ಲೇಟ್​ ಆಗಿದೆ. ಇದು, ತಪ್ಪು ಅಂತ ನನಗೂ ಗೊತ್ತು ಆದ್ರೆ ಏನೂ ಮಾಡೋದಕ್ಕೆ ಆಗಲ್ಲ ಅಂತ ತಮ್ಮ ಬ್ಲಾಗ್​​ನಲ್ಲಿ ಬರೆದುಕೊಂಡಿದ್ದಾರೆ.

 

Source: newsfirstlive.com Source link