ಮೇಕೆದಾಟು ಜಟಾಪಟಿ: ಈ ಯೋಜನೆ ವಿಚಾರದಲ್ಲಿ ನಾನು ‘ಭಾರತದ ಪರ’ ಎಂದ ಸಿ.ಟಿ. ರವಿ

ಮೇಕೆದಾಟು ಜಟಾಪಟಿ: ಈ ಯೋಜನೆ ವಿಚಾರದಲ್ಲಿ ನಾನು ‘ಭಾರತದ ಪರ’ ಎಂದ ಸಿ.ಟಿ. ರವಿ

ಬೆಂಗಳೂರು: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನೀವು ತಮಿಳುನಾಡು ಪರವೋ.. ಕರ್ನಾಟಕದ ಪರವೋ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ನಾನು ಭಾರತದ ಪರ ಎಂದು ಹೇಳಿಕೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.

ನೀವು ನನ್ನ ಹೇಳಿಕೆಯನ್ನ ಹೇಗೆ ವಿಶ್ಲೇಷಿಸುತ್ತೀರಿ ಅನ್ನೋದು ಮುಖ್ಯವಲ್ಲ. ನಾನು ಹೇಳ್ತೇನೆ ಅನ್ನೋದು ಮುಖ್ಯ. ಕಾವೇರಿ ನೀರಿನ ಹಂಚಿಕೆ ಮಾಡಿಯಾಗಿದೆ. ಹಲವು ತೀರ್ಪುಗಳು ಬಂದಿವೆ. ತೀರ್ಪಿನ ವ್ಯಾಪ್ತಿಯೊಳಗೆ ಕರ್ನಾಟಕ ಮತ್ತು ತಮಿಳುನಾಡು ನೀರು ಹಂಚಿಕೆ ಮಾಡಿಕೊಂಡ್ರೆ ಯಾವುದೇ ಅಡ್ಡಿಯಿಲ್ಲ. ತೀರ್ಪಿನಂತೆ ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದ್ದರೆ ಯಾವುದೇ ಅಡ್ಡಿಬರೋದಿಲ್ಲ.. ನೀರು ಎಲ್ಲರಿಗೂ ಅತ್ಯವಶ್ಯಕ.. ಕುಡಿಯೋ ನೀರಿಗೆ ಗಡಿಯಿಲ್ಲ.. ನೀರಿಗೆ ರಾಜಕೀಯವಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.

ಇಂದು ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ಆಯೋಜಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಹಿಂದುಳಿದ ವರ್ಗಗಳ ಮೀಸಲಾತಿ ಅಧಿಕಾರವನ್ನು ರಾಜ್ಯಗಳಿಗೆ ನೀಡಿದ್ದು, ಈ ಮೂಲಕ 671 ಒಬಿಸಿ ಸಮುದಾಯಗಳು ನ್ಯಾಯ ಪಡೆಯೋಕೆ ಸಾಧ್ಯವಾಗಲಿದ್ದು, ಬಿಜೆಪಿಗೆ ಸಾಮಾಜಿಕ ನ್ಯಾಯ ಬದ್ಧತೆ ಇದೆ, ಅದಕ್ಕೆ ಪೂರಕವಾಗಿ ನಮ್ಮ ಸರ್ಕಾರ ನಡೆದುಕೊಳ್ಳಲಿದೆ ಎಂದಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್​​ಗೆ ಉಲ್ಟಾ ಹೊಡೆಯಿತಾ ಆರೋಪ? ಮಹಿಳಾ ಮಾರ್ಷಲ್​​ ಮೇಲೆ ಕೈ ಸಂಸದರ ಹಲ್ಲೆ?

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ಮಾಡಿದ ಅವರು ನಮ್ಮ ಸರ್ಕಾರ ಏನೇ ಮಾಡಿದರೂ, ನಮ್ಮ ರಾಜಕೀಯ ವಿರೋಧಿಗಳು ಹಳೆ ಗ್ರಾಮಾಫೋನ್ ಪ್ಲೇಟ್ ತಿರುಗಿಸ್ತಾನೆ ಇರುತ್ತಾರೆ. ಅದರಲ್ಲಿ ಸಿದ್ದರಾಮಯ್ಯ ಒಬ್ಬರು. ಸಿದ್ದರಾಮಯ್ಯ ಅಪ್​ಡೇಟ್​ ಆಗ್ಬೇಕು ಅವರ ಸಾಫ್ಟವೇರ್​ ಹಾಳಾಗಿದೆ ಮೊದಲು ನಿಮ್ಮ ಸಾಫ್ಟವೇರ್​ ಅಪ್​ಡೇಟ್​ ಮಾಡ್ಕೋಳಿ ಎಂದು ಲೇವಡಿ ಮಾಡಿದ್ದಾರೆ.

ಇನ್ನು ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿ, ದಲಿತ ವಿರೋಧಿ ಎನ್ನುವವರಿಗೆ ನಮ್ಮ ಸರ್ಕಾರ ಸರಿಯಾದ ಉತ್ತರ ನೀಡಿದ್ದು, ಮೋದಿ ಸಂಪುಟದಲ್ಲಿ 27 ಒಬಿಸಿ ವರ್ಗಕ್ಕೆ ಸಚಿವ ಸ್ಥಾನ ಸಿಕ್ಕಿದೆ. ಜೊತೆಗೆ ರಾಜಕೀಯ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯವೂ ಸಿಕ್ಕಿದೆ. ಎಂದರು.

ಇಂದಿರಾ ಕ್ಯಾಂಟೀನ್ ನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಲಿ

ಇಂದಿರಾ ಕ್ಯಾಂಟೀನ್​ ಹೆಸರು ಬದಲಾಯಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಈಗ ಇಂದಿರಾ ಕ್ಯಾಂಟೀನ್​ನನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಲಿ. ಆಮೇಲೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ಮಾಡಲಿ. ಅದೇ ಕಚೇರಿಯಲ್ಲಿ ನೆಹರು ಹೆಸರಿನ ಮೇಲೆ ಹುಕ್ಕ ಬಾರ್​ ಕೂಡ ತೆರೆಯಲಿ ಎಂದು ತೀವ್ರ ವಾಗ್ದಾಳಿ ಮಾಡಿದ್ದಾರೆ.

 

Source: newsfirstlive.com Source link