ಇಡೀ ವಿಮಾನ ನಿಲ್ದಾಣದಲ್ಲೂ ಒಬ್ಬರೇ..ವಿಮಾನದಲ್ಲೂ ಒಬ್ಬರೇ -ನಟ ಮಾಧವನ್​ ಬೇಸರ

ಇಡೀ ವಿಮಾನ ನಿಲ್ದಾಣದಲ್ಲೂ ಒಬ್ಬರೇ..ವಿಮಾನದಲ್ಲೂ ಒಬ್ಬರೇ -ನಟ ಮಾಧವನ್​ ಬೇಸರ

ದೇಶದಲ್ಲಿ ಮತ್ತೆ ಕೋವಿಡ್ ಜಾಸ್ತಿಯಾಗ್ತಾಯಿದ್ದು, ಅಂತರರಾಷ್ಟ್ರೀಯ ಪ್ರಯಾಣಕ್ಕೆ, ಈಗಾಗ್ಲೇ ವಿವಿಧ ನಿಯಮಗಳು ಜಾರಿಯಲ್ಲಿವೆ. ಇದೇ ಸಂದರ್ಭದಲ್ಲಿ ನಟ ಆರ್. ಮಾಧವನ್ ದುಬೈಗೆ ಹೋಗಬೇಕಾದ್ರೇ, ಇಡೀ ವಿಮಾನದಲ್ಲಿ ಅವರೊಬ್ಬರೇ ಪ್ರಯಾಣಿಸಿರೋ ಬಗ್ಗೆ ತಿಳಿಸಿದ್ದಾರೆ.

ದುಬೈಗೆ ಹೋಗಬೇಕಂದ್ರೆ, ಕೋವಿಡ್ ವರದಿ ನೆಗೆಟಿವ್ ಇದ್ದು ಮತ್ತು ಪ್ರಯಾಣಿಸುವ ವ್ಯಕ್ತಿ ಲಸಿಕೆಯ ಪ್ರಮಾಣಪತ್ರವನ್ನ ಕಡ್ಡಾಯವಾಗಿ ಹೊಂದಿರಬೇಕು. ಇವು ಇಲ್ಲದಿದ್ದರೆ, ಪ್ರಯಾಣಕ್ಕೆ ಅನುಮತಿ ಇರುವುದಿಲ್ಲ. ನಟ ಮಾಧವನ್ ಪ್ರಯಾಣಿಸಿದ ಸಂದರ್ಭದಲ್ಲಿ, ಇಡೀ ಏರ್​ಪೋರ್ಟ್​ ಖಾಲಿಯಾಗಿದ್ದಿದ್ದು, ಇಡೀ ವಿಮಾನದಲ್ಲಿ ಅವರೊಬ್ಬರೇ ಇದ್ದಿದ್ದು, ಎಲ್ಲವೂ ಖಾಲಿ ಖಾಲಿಯಾಗಿ ಇರುವುದನ್ನ ಕಂಡು ಅಚ್ಚರಿ ಜತೆಗೆ ಬೇಸರವಾಗಿದೆ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಈ ದೃಶ್ಯ ಜುಲೈ 26ರದ್ದು, ಈ ರೀತಿ ಕಂಡು ನಿಜಕ್ಕು ಬೇಜಾರಾಗಿದೆ, ಆದಷ್ಟು ಬೇಗ ಕೊರೊನಾ ಹೋಗಿ, ಎಲ್ಲವೂ ಮೊದಲಿನಂತೆ ಆಗಲಿ ಅಂತ ಬರೆದುಕೊಂಡಿದ್ದಾರೆ.

 

Source: newsfirstlive.com Source link