Mr & Mrs ರಾಮಾಚಾರಿ ಜೋಡಿಗೆ ಇಂದು ವಿಶೇಷ ದಿನ; ನಟ ಯಶ್​​ ಬಗ್ಗೆ ರಾಧಿಕಾ ಪಂಡಿತ್​​ ಹೇಳಿದ್ದೇನು?

Mr & Mrs ರಾಮಾಚಾರಿ ಜೋಡಿಗೆ ಇಂದು ವಿಶೇಷ ದಿನ; ನಟ ಯಶ್​​ ಬಗ್ಗೆ ರಾಧಿಕಾ ಪಂಡಿತ್​​ ಹೇಳಿದ್ದೇನು?

ಸ್ಯಾಂಡಲ್​​ವುಡ್​​ನ ಮುದ್ದಾದ ಜೋಡಿ ಎಂದರೆ ಅದು ಯಶ್​​​ ಮತ್ತು ರಾಧಿಕಾ. ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಈ ಜೋಡಿ ಇಂದಿಗೂ ಹಲವರಿಗೆ ಪ್ರೇರಣೆ. ಹೀಗಿರುವಾಗ ರಾಧಿಕಾ ಪಂಡಿತ್​​​ ತನ್ನ ಪತಿ ದೇವರು ರಾಕಿಂಗ್​​ ಸ್ಟಾರ್​​ ಯಶ್​​​ ಬಗ್ಗೆ ಸೋಷಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಹೌದು, ಯಶ್ & ರಾಧಿಕಾ ಪಂಡಿತ್​​​ ಜೋಡಿ ಆಗಾಗ ಕಲರ್​ಫುಲ್ ಸುದ್ದಿಗಳ ಮೋಡಿ ಮಾಡ್ತಾನೇ ಇರ್ತಾರೆ. ಚಂದನವನದ ಚೆಂದದ ಅಂದದ ರೀಲ್ ಕಮ್ ರಿಯಲ್ ಜೋಡಿ ಯಶ್ ಮತ್ತು ರಾಧಿಕಾ. ಜೊತೆಯಾಗೇ ಬಣ್ಣದ ಬದುಕಿಗೆ ಬಂದವರು ಈಗ ಜೊತೆಯಾಗೇ ಬಾಳ ಬದುಕಿನ ಬಂಡಿಯನ್ನ ಎಳೆಯುತ್ತಿದ್ದಾರೆ.

blank

ಮೊಗ್ಗಿನ ಮನಸಿನ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಅಂದು ಕೊಂಡಂಗೆ ಪ್ರೀತಿಸಿ ಮದುವೆಯಾಗಿ ಆದರ್ಶ ದಂಪತಿಗಳಂತೆ ಬದುಕುತ್ತಿದ್ದಾರೆ. ಈ ಜೋಡಿಗೆ ಈಗ ಆರ್ತಿಗೊಬ್ಬಳು ಕೀರ್ತಿಗೊಬ್ಬ ಅನ್ನೋಂಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಆಗಾಗ ರಾಕಿಂಗ್ ಫ್ಯಾಮಿಲೀ ಜೊತೆ ನಟಿ ರಾಧಿಕಾ ಪಂಡಿತ್​​ ಸೋಷಿಯಲ್​​ ಸಮುದ್ರದಲ್ಲಿ ಕಂಗೊಳಿಸುತ್ತಿರುತ್ತಾರೆ.. ಆದ್ರೆ ಈ ಬಾರಿ ತನ್ನ ಪತಿ ದೇವರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ರಾಧಿಕಾ ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಸಾಧ್ಯವಾದ ವ್ಯಕ್ತಿಯ ಜೊತೆಗೆ ನಿಶ್ಚಿತಾರ್ಥವಾಗಿ ಇವತ್ತಿಗೆ ಐದು ವರ್ಷ ಎಂದು ಸ್ಯಾಂಡಲ್​ವುಡ್ ಸಿಂಡ್ರೆಲ ಬರೆದುಕೊಂಡಿದ್ದಾರೆ. ಹಂಗ್ ನೋಡೊಕ್ಕೆ ಹೋದ್ರೆ ಯಶ್ ನಿಜಕ್ಕೂ ಅಸಾಧ್ಯವಾದ ವ್ಯಕ್ತಿನೇ.. ಅಸಾಧ್ಯವಾದನ್ನ ಈಗಾಗಲೇ ಸಿನಿಮಾ ಮೂಲಕ ಸಾಧಿಸಿ ತೋರಿಸುತ್ತಿದ್ದಾರೆ ಎಂದಿದ್ದಾರೆ.

blank

ಗೋವಾದಲ್ಲಿ ಐದು ವರ್ಷದ ಹಿಂದೆ ಇದೇ ದಿನ ರಾಧಿಕಾ ಮತ್ತು ಯಶ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.. ಕನ್ನಡದ ಅನೇಕ ತಾರೆಯರು ಅಂದಿನ ಯಶ್​-ರಾಧಿಕಾ ಎಂಗೆಜ್​ಮೆಂಟ್​​​​​​ಗೆ ಸಾಕ್ಷಿಯಾಗಿದ್ದರು. ಈ ದಿನವನ್ನ ಮರೆಲಾಗದು ಎಂದು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಸಂಭ್ರಮಿಸಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

Source: newsfirstlive.com Source link