ನಾವೇನು ಪಾಕಿಸ್ತಾನದವರಾ..? ಚೀನಾದವರಾ..? ಸಿ.ಟಿ ರವಿ ವಿರುದ್ಧ HDK ಕೆಂಡಾಮಂಡಲ

ನಾವೇನು ಪಾಕಿಸ್ತಾನದವರಾ..? ಚೀನಾದವರಾ..? ಸಿ.ಟಿ ರವಿ ವಿರುದ್ಧ HDK ಕೆಂಡಾಮಂಡಲ

ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ನನ್ನದು ಭಾರತದ ನಿಲುವು ಎಂಬ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ..ನಾವೇನು ಪಾಕಿಸ್ತಾನದವರಾ? ಚೈನಾದವರಾ? ಅಮೆರಿಕಾದವರಾ? ನಾವು ಕೂಡ ಭಾರತೀಯರೇ.. ಬಿಜೆಪಿಯವರಿಗೆ ಮಾತ್ರ ಭಾರತೀಯರು ಅನ್ನೋ ಗುತ್ತಿಗೆ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಮೇಕೆದಾಟು ಜಟಾಪಟಿ: ಈ ಯೋಜನೆ ವಿಚಾರದಲ್ಲಿ ನಾನು ‘ಭಾರತದ ಪರ’ ಎಂದ ಸಿ.ಟಿ. ರವಿ

ನಾವು ಹುಟ್ಟಿರೋದು ಈ ಮಣ್ಣಿನಲ್ಲಿ.. ನಾನು ಭಾರತೀಯ ಅನ್ನೋದಕ್ಕಿಂತ ಮುಂಚೆ ನಾನು ಮೊದಲು ಕನ್ನಡಿಗ. ಕನ್ನಡಿಗನಾಗಿ ಕರ್ನಾಟಕಕ್ಕೆ ಆಗಿರೋ ಅನ್ಯಾಯದ ವಿರುದ್ಧ ಧ್ವನಿ ಎತ್ತೋದು ನನ್ನ ಕರ್ತವ್ಯ. ಅದನ್ನ ನಾನು ಮೇಕೆದಾಟು ವಿಚಾರದಲ್ಲಿ ಎತ್ತಿದ್ದೇನೆ. ಸಿಟಿ ರವಿ ಭಾರತೀಯರು ಇರಬಹುದು.. ಮೊದಲು ಕರ್ನಾಟಕ, ನನ್ನ ತಾಯಿ ನನಗೆ ಮೊದಲು ಮುಖ್ಯ. ನನ್ನ ತಾಯಿಯನ್ನ ಕಾಪಾಡಬೇಕಾದದ್ದು ನನ್ನ ಕರ್ತವ್ಯ.. ಅವ್ರು ಭಾರತೀಯರ ರೋಲ್ ಮಾಡೋದು ಬೇರೆ.. ನನ್ನ ತಾಯಿ ಉಳಿದುಕೊಂಡ್ರೆ ತಾನೆ ಭಾರತೀಯ ತಾಯಿ ಉಳಿಸಿಕೊಳ್ಳೋದು. ಸಿಟಿ ರವಿ ಇದನ್ನ ಅರ್ಥ ಮಾಡಿಕೊಳ್ಳಲಿ ಎಂದು ಕೆಂಡಾಮಂಡಲರಾಗಿದ್ದಾರೆ.

Source: newsfirstlive.com Source link