ದುನಿಯಾ ವಿಜಯ್​​​​​ ‘ಸಲಗ’ ಸಿನಿಮಾ ರಿಲೀಸ್ ಮುಂದೂಡಿಕೆ; ಮತ್ಯಾವಾಗ ತೆರೆ ಮೇಲೆ..?

ದುನಿಯಾ ವಿಜಯ್​​​​​ ‘ಸಲಗ’ ಸಿನಿಮಾ ರಿಲೀಸ್ ಮುಂದೂಡಿಕೆ; ಮತ್ಯಾವಾಗ ತೆರೆ ಮೇಲೆ..?

ಅದ್ಯಾಕೋ ಗೊತ್ತಿಲ್ಲ.. ಗೊತ್ತಿದ್ರೂ ಏನೂ ಮಾಡಕ್ಕೆ ಆಗಲ್ಲ; ಕನ್ನಡ ಚಿತ್ರರಂಗದ ಟೈಮೇ ಚೆನ್ನಾಗಿಲ್ಲ.. ಇನ್ನೇನು ಮತ್ತೆ ಒಳ್ಳೆ ದಿನ ಬರುತ್ತೆ, ದೊಡ್ಡ ದೊಡ್ಡ ಸಿನಿಮಾಗಳು ಥಿಯೇಟರ್​ ಬೆಳ್ಳಿ ಪರದೆಯನ್ನ ಬೆಳಗುತ್ತಾವೆ ಅನ್ನೋಷ್ಟರಲ್ಲಿ ಸೀನೇ ಚೇಂಜ್ ಆಗ್ತಿದೆ.. ಈ ಬಾರಿ ಲಕ್ಷ್ಮೀ ಪೂಜೆ ನಮ್ದೇ ಎಂದಿದ್ದ ಸಲಗ.. ರಿಲೀಸ್​ ಆಗ್ತಿಲ್ಲ.

blank

ದುನಿಯಾ ವಿಜಯ್ ನಿರ್ದೇಶನದ ಮೊಟ್ಟ ಮೊದಲ ಸಿನಿಮಾ ಸಲಗ.. ಮೂರ್ ಮೂರು ವರ್ಷ ಸಲಗ ಸಿನಿಮಾದ ಬಗ್ಗೆ ಚಿಂತಿಸಿ ಧ್ಯಾನಿಸಿ ತನ್ನನ್ನ ತಾನು ಅರ್ಪಿಸಿಕೊಂಡಿದ್ದಾರೆ ದುನಿಯಾ ವಿಜಯ್.. ದುನಿಯಾ ವಿಜಯ್ ಮತ್ತು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಶ್ರಮಕ್ಕೆ ತಕ್ಕಂಗೆ ಪ್ರತಿಫಲ ಸಿಗುತ್ತಿದೆ.. ಸಲಗ ಬಳಗದಿಂದ ಹೊರ ಬಂದ ಪ್ರತಿಯೊಂದು ಕಂಟೆಂಟ್​​​​ಗಳು ಚಿತ್ರಪ್ರೇಮಿಗಳನ್ನ ಮುಟ್ಟಿವೆ ಮನಸ್ಸನ್ನ ತಟ್ಟಿವೆ..
ಮೊನ್ ಮೊನ್ನೆ ಪ್ರಮೋಷನಲ್ ಸಾಂಗ್ ಒಂದನ್ನ ಹೊರ ಬಿಟ್ಟು ಸ್ಯಾಂಡಲ್​ವುಡ್ ತುಂಬ ಸೌಂಡ್ ಮಾಡಿತ್ತು ಸಲಗ ಸಿನಿಮಾ ತಂಡ..

blank

ಸಿದ್ಧಿ ಜನಾಂಗ ಮಹಿಳೆಯರ ಧ್ವನಿಯಲ್ಲಿ ಟಿನಿಂಗ ಮಿನಿಂಗ ಟಿಶ್ಯಾ ಹಾಡು ಸಖತ್ ವೈರಲ್ ಆಗಿ ಹಿಟ್ ಆಗಿದೆ. ಈ ಹಾಡಿನ ಮೂಲಕ ರಿಲೀಸ್ ಡೇಟ್ ಅನ್ನೂ ಕೂಡ ಫೈನಲ್ ಮಾಡಿಕೊಂಡಿತ್ತು ಸಲಗ ಸಿನಿ ಬಳಗ. ಆದ್ರೆ ಸಲಗ ಸಿನಿ ಬಳಗ ಆಸೆಗೆ ಮತ್ತೊಮ್ಮೆ ಬೇಸರವಾಗೋ ಸೂಚನೆ ಸಿಕ್ತಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಸಲಗ ರಿಲೀಸ್ ಆಗ್ತಿಲ್ಲ..

blank

ಅಷ್ಟಕ್ಕೂ ಯಾಕೆ ಸಲಗ ಸಿನಿಮಾ ಹೇಳಿದ ಟೈಮ್​ಗೆ ರಿಲೀಸ್ ಆಗ್ತಿಲ್ಲ ಅನ್ನೋದಕ್ಕೆ ಕಾರಣ ಹಂಡ್ರೆಡ್ ಪರೆಸೆಂಟ್ ಸೀಟು ಭರ್ತಿಗೆ ಅವಕಾಶ ಸಿಗದೆ ಇರೋದು.. ಸರ್ಕಾರ ನೂರು ಪರ್ಸೆಂಟ್ ಸೀಟು ಭರ್ತಿಗೆ ಅವಕಾಶಕ್ಕೆ ಇನ್ನೂ ಕೂಡ ಅಸ್ತು ಎನ್ನುತ್ತಿಲ್ಲ.. ಕೊರೊನಾ 3ನೇ ಅಲೆ ಬರಬಹುದು ಎನ್ನೋ ಕಾರಣದಿಂದಾಗಿ ಸರ್ಕಾರದ ನಿಯಮಾವಳಿಗಳು ಈ ತಿಂಗಳು ಸಡಿಲವಾಗುತ್ತಿಲ್ಲ..

blank

ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಳಿ ಮಾತನಾಡಿದ್ದು ಸಿ.ಎಮ್​ ಕಡೆಯಿಂದ ಮಂದಿನ ತಿಂಗಳು ಸೆಪ್ಟೆಂಬರ್​ನಿಂದ ಸಡಿಲಿಕೆ ಮಾಡುತ್ತೇವೆ ಅನ್ನೋ ಭರವಸೆ ಸಿಕ್ಕಿದೆಯಂತೆ.. ಈ ಕಾರಣಕ್ಕೆ ಸಲಗ ಸಿನಿಮಾ ಆಗಸ್ಟ್ 20ನೇ ತಾರೀಖು ರಿಲೀಸ್ ಆಗ್ತಿಲ್ಲ.

Source: newsfirstlive.com Source link