ದಳಪತಿ ವಿಜಯ್-ಎಂ.ಎಸ್. ಧೋನಿ ಭೇಟಿ​​​; ಕಾರಣ ಏನು ಗೊತ್ತಾ?

ದಳಪತಿ ವಿಜಯ್-ಎಂ.ಎಸ್. ಧೋನಿ ಭೇಟಿ​​​; ಕಾರಣ ಏನು ಗೊತ್ತಾ?

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಎಂ.ಎಸ್​ ಧೋನಿ, ತಮಿಳು ನಟ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ವಿಜಯ್​ ಅವರು ನಟಿಸುತ್ತಿರುವ ಬೀಸ್ಟ್​​ ಸಿನಿಮಾ ಚಿತ್ರೀಕರಣ ಚೆನ್ನೈನ ಗೋಕುಲಂ ಸ್ಟುಡಿಯೋದಲ್ಲಿ ಜರುಗುತ್ತಿದೆ. ಐಪಿಎಲ್​​ ಆರಂಭಕ್ಕೂ ಮುನ್ನ ಧೋನಿ ಕೂಡ ಜಾಹೀರಾತುಗಳ ಚಿತ್ರೀಕರಣಕ್ಕಾಗಿ ಇದೇ ಸ್ಟುಡಿಯೋದಲ್ಲಿ ಉಳಿದಿದ್ದಾರೆ. ಇಬ್ಬರು ಸ್ಟಾರ್‌ಗಳು ಒಂದೇ ಸ್ಟುಡಿಯೋದಲ್ಲಿ ಇರುವುದು ಗೊತ್ತಾದ ಕಾರಣ, ಅವರು ಪರಸ್ಪರ ಭೇಟಿಯಾಗಲು ನಿರ್ಧರಿಸಿದ್ರು.

ಸದ್ಯ ಇಬ್ಬರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಮತ್ತೊಂದು ವಿಶೇಷ ಅಂದರೆ, ವಿಜಯ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿ 2008ರ ಐಪಿಎಲ್ ಉದ್ಘಾಟನಾ ಋತುವಿನಲ್ಲಿ ನೇಮಕ ಮಾಡಲಾಗಿತ್ತು.

ಇದನ್ನೂ ಓದಿ: Mr & Mrs ರಾಮಾಚಾರಿ ಜೋಡಿಗೆ ಇಂದು ವಿಶೇಷ ದಿನ; ನಟ ಯಶ್​​ ಬಗ್ಗೆ ರಾಧಿಕಾ ಪಂಡಿತ್​​ ಹೇಳಿದ್ದೇನು?

ಇತ್ತೀಚೆಗಷ್ಟೆ ಎಂ.ಎಸ್​​. ಧೋನಿ 2ನೇ ಹಂತದ ಐಪಿಎಲ್​ ಪೂರ್ವ ಸಿದ್ಧತೆಗಾಗಿ ಚೆನ್ನೈಗೆ ಬಂದಿಳಿದಿದ್ದು, ಸಿಎಸ್​ಕೆ ತಂಡದ ಕ್ಯಾಂಪ್​​ಗೆ ಸೇರಿಕೊಂಡಿದ್ದಾರೆ. ದ್ವಿತಿಯಾರ್ಧ ಐಪಿಎಲ್​​ ಯುಎಇನಲ್ಲಿ ಜರುಗಲಿರುವ ಕಾರಣ, ನಾಳೆಯೇ ಸಿಎಸ್​ಕೆ ತಂಡ ಇಲ್ಲಿಗೆ ಪ್ರಯಾಣ ಬೆಳೆಸಲಿದೆ.

Source: newsfirstlive.com Source link