ಕಾಂಗ್ರೆಸ್ ಕಚೇರಿಯಲ್ಲಿ ‘ನೆಹರೂ ಹುಕ್ಕಾ-ಬಾರ್’ ತೆರೆಯಲಿ.. ಯಾರು ಬೇಡ ಅಂತಾರೆ..?- ಸಿ.ಟಿ. ರವಿ

ಕಾಂಗ್ರೆಸ್ ಕಚೇರಿಯಲ್ಲಿ ‘ನೆಹರೂ ಹುಕ್ಕಾ-ಬಾರ್’ ತೆರೆಯಲಿ.. ಯಾರು ಬೇಡ ಅಂತಾರೆ..?- ಸಿ.ಟಿ. ರವಿ

ಬೆಂಗಳೂರು: ಇಂದಿರಾ ಕ್ಯಾಂಟೀನ್ ವಿಚಾರವಾಗಿ ಪ್ರತಿಕ್ರಿಯಿಸಿದ ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಸಿ.ಟಿ.ರವಿ.. ನೆಹರೂ ಅವರು ಮೊದಲ ಪ್ರಧಾನಮಂತ್ರಿ.. ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ ಒಪ್ಪಿಕೊಳ್ಳೋಣ.. ಅದರ ಜೊತೆಗೆ ಕೆಲವು ಎಡಬಿಡಂಗಿ ಕೆಲಸಗಳನ್ನೂ ಮಾಡಿದ್ದಾರೆ. ಅದನ್ನ ಆರ್ಟಿಕಲ್ 370 ಮೂಲಕ ಸರಿಪಡಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಜಟಾಪಟಿ: ಈ ಯೋಜನೆ ವಿಚಾರದಲ್ಲಿ ನಾನು ‘ಭಾರತದ ಪರ’ ಎಂದ ಸಿ.ಟಿ. ರವಿ

ಇಂದಿರಾಗಾಂಧಿಯವರ ಹತ್ಯೆಯಾಗಿದ್ದು 1984. ಅವರ ಕ್ಯಾಂಟೀನ್ ಮಾಡಿದ್ದು 2017-18 ರಲ್ಲಿ. ಯಾತಕ್ಕೆ ಮಾಡಿದ್ದು..? ಇಂದಿರಾ ಗಾಂಧಿ ಅವರ ಮೇಲಿನ ಪ್ರೇಮಕ್ಕಾ..? ಮಾಡಿದ್ದು ರಾಜಕಾರಣ ಮಾಡೋಕೆ. ಬದ್ಧತೆ ಇದ್ದಿದ್ರೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮಾಡಬೇಕಿತ್ತು. ಇಂದಿರಾ ಕ್ಯಾಂಟೀನ್ ಮಾಡಿದ್ದು ದುಡ್ಡು ಹೊಡೆಯೋಕೆ.. ನಾಲ್ಕು ಕಾಂಕ್ರೀಟ್ ಕಂಬ ನೆಡೋದಕ್ಕೆ 1 ಕೋಟಿ 30 ಲಕ್ಷ ಖರ್ಚು ಮಾಡಿದ್ದಾರೆ. ಅದೇನು ಫೈವ್​ ಸ್ಟಾರ್ ಹೋಟೆಲ್ಲಾ..? ಇದಕ್ಕಾಗಿ ನಾವು ವಿರೋಧಿಸುತ್ತೇವೆ. ಹಾಗಂತ ಇಂದಿರಾಗಾಂಧಿ ಅವರ ಎಲ್ಲ ಕೆಲಸಗಳನ್ನೂ ನಾವು ವಿರೋಧಿಸಲ್ಲ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​​​ಗೆ ‘ಅನ್ನಪೂರ್ಣೇಶ್ವರಿ ಕ್ಯಾಂಟೀನ್’ ಎಂದು ಹೆಸರಿಡಿ; ಸಿಎಂಗೆ ಸಿ.ಟಿ ರವಿ ಮನವಿ

217 ಯೋಜನೆಗಳಿಗೆ ಹೆಸರುಗಳನ್ನಿಟ್ಟಿದ್ದಾರೆ. ದೇಶಕ್ಕೆ ಬೇರೆಯವರ ಕೊಡುಗೆ ಇಲ್ಲವೇ..? ಅದಕ್ಕೆ ಅನ್ನಪೂರ್ಣೇಶ್ವರಿ ಹೆಸರು ಹೇಳಿಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಬಾರ್, ನೆಹರೂ ಹುಕ್ಕಾ ಬಾರ್ ಅಂತ ತೆರೆಯಲಿ. ಯಾರು ಬೇಡ ಅಂತಾರೆ..? ಎಂದು ಸಿಟಿ ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ‘ನಾವ್ಯಾರೂ ಕೈಗೆ ಬಳೆ ತೊಟ್ಟುಕೊಂಡಿಲ್ಲ.. ಇಂದಿರಾ ಕ್ಯಾಂಟೀನ್ ಹೆಸರು ಮುಟ್ಟಲಿ ಗೊತ್ತಾಗುತ್ತೆ’

Source: newsfirstlive.com Source link