ಕಾಂಗ್ರೆಸ್​ ಕಾರ್ಯಕರ್ತನ ಹತ್ಯೆ.. 24 ಗಂಟೆಯಲ್ಲಿ, 4 ಆರೋಪಿಗಳು ಅರೆಸ್ಟ್​

ಕಾಂಗ್ರೆಸ್​ ಕಾರ್ಯಕರ್ತನ ಹತ್ಯೆ.. 24 ಗಂಟೆಯಲ್ಲಿ, 4 ಆರೋಪಿಗಳು ಅರೆಸ್ಟ್​

ದಾವಣಗೆರೆ: ನಿನ್ನೆ ಕಾಂಗ್ರೆಸ್ ಕಾರ್ಯಕರ್ತ ಪರಮೇಶಿ ಎಂಬುವರ ತಲೆಯನ್ನ ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ ಮಾಡಲಾಗಿತ್ತು. ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ 24 ಗಂಟೆಯಲ್ಲಿ 4 ಜನ ಆರೋಪಿಗಳನ್ನ ಪೊಲೀಸ್ರು ಬಂಧಿಸಿದ್ದಾರೆ.

ಹನುಮಂತ, ಬಸವರಾಜ್, ನಿಯಾಜ್, ಕುಮಾರಿ ಸೇರಿ ನಾಲ್ವರನ್ನ ಗಾಂಧಿನಗರ ಪೊಲೀಸ್ರು ಬಂಧಿಸಿದ್ದಾರೆ. ಈ ಬಂಧಿತ ಆರೋಪಿಗಳು ಪಡಿತರ ಅಕ್ಕಿಯನ್ನ ಜನರಿಂದ ಖರೀದಿ ಮಾಡಿ ಅಕ್ರಮವಾಗಿ ಮಾರಾಟ ಮಾಡ್ತಿದ್ರು ಎನ್ನಲಾಗಿದೆ. ರೌಡಿ ಶೀಟರ್​ ಗಾರೆ ಮಂಜ ಬಸವರಾಜ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದನಂತೆ. ಹೀಗಾಗಿ ಬಸವರಾಜ್ ಪತ್ನಿಗೆ ಹಲ್ಲೆ ಮಾಡಿದ್ದ ಅಂತ ಗಾರೆ ಮಂಜನನ್ನ ಈ ನಾಲ್ವರು ಆರೋಪಿಗಳು ಹುಡುಕುತ್ತಿದ್ದರು. ಗಾರೆ ಮಂಜು ಸಿಗದೇ ಇದ್ದಾಗ ಹತ್ಯೆಯಾದ ಪರಮೇಶಿ, ಮಂಜನನ್ನ ಬಚ್ಚಿಟ್ಟಿದ್ದೀಯಾ ಅಂತ ಕೇಳುತ್ತಾ ನಿನ್ನೆ ರಾತ್ರಿ ಗಲಾಟೆ ಮಾಡಿಕೊಂಡಿದ್ರು ಎನ್ನಲಾಗಿದೆ.

Source: newsfirstlive.com Source link