ಶ್ರಾವಣ ಝೂಲಾ ಉತ್ಸವ; ಶ್ರೀರಾಮನಿಗಾಗಿ 21 ಕೆ.ಜಿ ಬೆಳ್ಳಿ ಉಯ್ಯಾಲೆ

ಶ್ರಾವಣ ಝೂಲಾ ಉತ್ಸವ; ಶ್ರೀರಾಮನಿಗಾಗಿ 21 ಕೆ.ಜಿ ಬೆಳ್ಳಿ ಉಯ್ಯಾಲೆ

ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದಲ್ಲಿ ಶ್ರಾವಣ ಝೂಲಾ ಉತ್ಸವ ನಡೆಸಲಾಗುತ್ತದೆ. ಈ ಉತ್ಸವದ ಪ್ರಯುಕ್ತ ಶ್ರೀರಾಮನಿಗಾಗಿ 21 ಕೆ.ಜಿ ಬೆಳ್ಳಿಯ ಉಯ್ಯಾಲೆ ಕಟ್ಟಲಾಗಿದೆ. ಈ ಕುರಿತು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಅಧಿಕೃತ ಟ್ವಿಟರ್​​ ಖಾತೆಯಿಂದಲೇ ಪೋಸ್ಟ್​​ ಮಾಡಿ ಮಾಹಿತಿ ನೀಡಲಾಗಿದೆ.

ಸದ್ಯದಲ್ಲೇ ಶ್ರಾವಣ ಝೂಲಾ ಉತ್ಸವ ಇದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಶ್ರೀರಾಮನ ದರ್ಶನ ಆಗಲಿದೆ. ಝೂಲಾ ಪ್ರಯುಕ್ತ ರಾಮನಿಗಾಗಿ ಈ ಬೆಳ್ಳಿ ಉಯ್ಯಾಲೆ ಕಟ್ಟಿದ್ದೇವೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಖಾತೆಯಿಂದ ಮಾಡಲಾಗಿರುವ ಟ್ವೀಟ್​​ನಲ್ಲಿ ಬರೆಯಲಾಗಿದೆ.

ಇನ್ನು, ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ಝೂಲಾ ಉತ್ಸವ ನಡೆಸುತ್ತಿದ್ದೇವೆ. ಕೊರೊನಾ ನೆಗೆಟಿವ್​​ ರಿಪೋರ್ಟ್​ ತಂದವರಿಗೆ ಮಾತ್ರ ಶ್ರೀರಾಮನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಸಾಮಾಜಿಕ ಅಂತರ, ಮಾಸ್ಕ್​ ಧರಿಸುವುದು ಕಡ್ಡಾಯ ಮಾಡಲಾಗಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​​​ ಅನೂಜ್​​ ಝಾ ಹೇಳಿದರು.

Source: newsfirstlive.com Source link