ಜಗಪತಿ ಬಾಬುಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​.. ಸಲಾರ್​ನಲ್ಲೂ ಸ್ಟಾರ್ ವಿಲನ್ ಕಮಾಲ್

ಜಗಪತಿ ಬಾಬುಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​.. ಸಲಾರ್​ನಲ್ಲೂ ಸ್ಟಾರ್ ವಿಲನ್ ಕಮಾಲ್

ಸಲಾರ್​.. ಸೌಥ್ ಸಿನಿ ದುನಿಯಾ ನಿರೀಕ್ಷಿತ ಸಿನಿಮಾ.. ಕಳೆದ ವಾರದಿಂದ ದಿನಕ್ಕೊಂದು ದಿಲ್ಕಿ ಮಿಲ್ಕಿ ನ್ಯೂಸ್ ಸಲಾರ್ ಬಳಗದಿಂದ ಬರುತ್ತಲೇ ಇದೆ.. ನಿರ್ದೇಶಕ ಪ್ರಶಾಂತ್ ನೀಲ್ ಏನಾದ್ರೊಂದು ಧಮಾಕೇಧಾರ್ ಸಮಾಚಾರ ಆಗುವಂತ ಕೆಲಸ ಮಾಡ್ತಿದ್ದಾರೆ.. ಈಗ ಸಲಾರ್ ಸಿನಿಮಾ ಬಳಗಕ್ಕೆ ಸೌಥ್ ಸಿನಿ ದುನಿಯಾ ಸ್ಟಾರ್ ವಿಲನ್​ವೊಬ್ಬರ ಎಂಟ್ರಿಯಾಗಿದೆ.

ಸಲಾರ್​ನಲ್ಲಿ ಜಗಪತಿ ಬಾಬು ವಿಲನ್​

ವೀರಮಾಚನೇನಿ ಜಗಪತಿ ಚೌದ್ರಿ , ಅಲಿಯಾಸ್ ಜಗಪತಿ ಬಾಬು.. ಸೌಥ್​ ಸಿನಿ ದುನಿಯಾದ ಬಹುಬೇಡಿಕೆಯ ಸ್ಟಾರ್ ವಿಲನ್ ಜಗಪತಿ ಬಾಬು.. ಅದ್ರಲ್ಲೂ ತೆಲುಗು ರಂಗದಲ್ಲಂತೂ ಟಾಪ್ ಸ್ಟಾರ್ಸ್​​​ ಸಿನಿಮಾಗಳಿಗೆ ಇವರಿದ್ರೆನೇ ಸುಗ್ಗಿ ಪ್ಲಸ್​​ ರಂಜನೆಯ ಹುಗ್ಗಿ.. ಕಳೆದ ಮೂವತ್ತು ವರ್ಷಗಳಿಂದ ಬಹುಭಾಷೆಗಳಲ್ಲಿ ಅದ್ರಲೂ ತೆಲುಗು ರಂಗದಲ್ಲಿ ಝಗಮಗಿಸುತ್ತಿರುವ ಪ್ರತಿಭೆ ಇವ್ರು.. ಅಂದಕಾಲದಲ್ ಸ್ಮಾರ್ಟ್ ಹೀರೋ , ಈಗ ಈ ಫೈವ್​ ಜಿ ಕಾಲ​ದಲ್ಲಿ​​ ಖಡಕ್ ದಡಕ್ ವಿಲನ್.

ಟಾಲಿವುಡ್​ಡು ಸ್ಯಾಂಡಲ್​ವುಡ್​ 

ಟಾಲಿವುಡ್​​ನಲ್ಲಿ ಗುಡುಗುತ್ತಿದ್ದವರು ಸ್ಯಾಂಡಲ್​ವುಡ್​​ನಲ್ಲೂ ಅರ್ಭಟಿಸಿದ್ದಾರೆ.. ಕಿಚ್ಚ ಸುದೀಪ್ ಅಭಿನಯ ಬಚ್ಚನ್ ಸಿನಿಮಾದ ಮೂಲಕ ಕನ್ನಡ ಸಿನ್ಮಾರಂಗದಲ್ಲೂ ಜಗಪತಿ ಬಾಬು ಹವಾ ಶುರುವಾಗಿದೆ. ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಎದುರು ಅದ್ಭುತವಾಗಿ ನಾನಾ ಭಾಯ್ ಅನ್ನೋ ಪಾತ್ರವನ್ನ ಮಾಡಿ ಕನ್ನಡಿಗರ ಮನಸು ಕದ್ದಿದ್ದಾರೆ. ಇಷ್ಟೆಲ್ಲ ಸಿನಿ ರೆಕಾರ್ಡ್ ಅನ್ನ ತನ್ನ ಹೆಸರಿಗೆ ಬರೆಸಿಕೊಂಡಿರುವ ಜಗಪತಿ ಬಾಬು ಫಸ್ಟ್ ಟೈಮ್ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪನೆಯ ಸಲಾರ್ ಸಿನ್ಮಾದಲ್ಲಿ ಖಡಕ್ ಪಾತ್ರ ಮಾಡುತ್ತಿದ್ದಾರೆ.

ಸಲಾರ್​.. ಸೌಥ್​ ಸಿನಿ ದುನಿಯಾ ಮತ್ತೊಂದು ನಿರೀಕ್ಷಿತ ಸಿನಿಮಾ.. ಕೆಜಿಎಫ್ ಸಿನಿಮಾವನ್ನ ಅದ್ಭುತವಾಗಿ ಸೃಷ್ಟಿಸಿದ , ಬಾಹುಬಲಿಯಲ್ಲಿ ಅದ್ಭುತವಾಗಿ ಘರ್ಜಿಸಿದ ಇಬ್ಬರು ಪ್ರತಿಭಾವಂತರು ಸಲಾರ್ ಸಿನಿಮಾಕ್ಕಾಗಿ ಒಂದಾಗಿದ್ದಾರೆ.. ನಿರ್ದೇಶಕ ಪ್ರಶಾಂತ್ ನೀಲ್ ಕೆಲಸ ಬಾಹುಬಲಿ ಪ್ರಭಾಸ್​​ಗೆ ಇಷ್ಟ , ಡಾರ್ಲಿಂಗ್ ಪ್ರಭಾಸ್ ಆ್ಯಕ್ಟಿಂಗ್ ಡೈರೆಕ್ಟರ್​​​ ಪ್ರಶಾಂತ್ ನೀಲ್​ಗೂ ಇಷ್ಟ.. ಈ ಇಷ್ಟ ಪ್ಲಸ್ ಇಷ್ಟ ಸೇರಿ ಆಗ್ತಾ ಇರೋದು ಸಲಾರ್ ಅನ್ನೋ ಸಿನಿಮಾ.. ಈ ನಿರೀಕ್ಷಿತ ಸಿನಿಮಾದಲ್ಲಿ ಜಗಪತಿ ಬಾಬು ಮಾಡ್ತಿದ್ದಾರೆ ಹಂಗಾಮ.

 

 

Source: newsfirstlive.com Source link