‘ನನಗೆ ನನ್ನ ಹುಟ್ಟಿದ ತಾರೀಖೂ ಗೊತ್ತಿಲ್ಲ’- ಹುಟ್ಟುಹಬ್ಬದಂದು ಸಿದ್ದರಾಮಯ್ಯ ಹೇಳಿದ ಮಾತು

‘ನನಗೆ ನನ್ನ ಹುಟ್ಟಿದ ತಾರೀಖೂ ಗೊತ್ತಿಲ್ಲ’- ಹುಟ್ಟುಹಬ್ಬದಂದು ಸಿದ್ದರಾಮಯ್ಯ ಹೇಳಿದ ಮಾತು

ಬೆಂಗಳೂರು: ಇವತ್ತು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಹುಟ್ಟುಹಬ್ಬದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವ್ರು, ನಾನು ಯಾವತ್ತೂ ಹುಟ್ಟು ಹಬ್ಬದ ಆಚರಣೆ ಮಾಡಿಕೊಂಡಿಲ್ಲ ಎಂದಿದ್ದಾರೆ.

blank

ನಾನು ಕೇಕ್ ಸಹ ಕಟ್ ಮಾಡಿಲ್ಲ. ಅಲ್ದೇ ನನಗೆ ಹುಟ್ಟಿದ ತಾರೀಖೂ ಗೊತ್ತಿಲ್ಲ, ಮೇಸ್ಟ್ರು ಬರೆದುಕೊಂಡ ದಿನಾಂಕವೇ ನನ್ನ ಜನ್ಮ ದಿನ ಅಂತ ಖುಷಿಯಾಗಿ ಹೇಳಿದ್ದಾರೆ. ನಾನು ಇವತ್ತು ಎಪ್ಪತ್ತೈದು ವರ್ಷಕ್ಕೆ ಕಾಲಿಟ್ಟಿದ್ದೇನೆ, ಈ ವರ್ಷ ಯಾವುದೇ ಸಂಕಲ್ಪ ಇಲ್ಲ ಅಂತ ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಅಭಿಮಾನಿಗಳು ಸರ್ಪ್ರೈಸ್; ‘ಟಗರು ಸಿದ್ದರಾಮಯ್ಯ’ ಸಾಂಗ್ ರಿಲೀಸ್

ಇನ್ನು ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಸ್ವಪಕ್ಷದ ನಾಯಕರು ಟ್ವೀಟ್ ಮಾಡುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಕೆಲವು ನಾಯಕರು ಸಿದ್ದರಾಮಯ್ಯನವರ ಮನೆಗೇ ತೆರಳಿ ಹೂಗುಚ್ಛ ನೀಡಿ ಶುಭಾಶಯ ಕೋರಿದ್ದಾರೆ.

Source: newsfirstlive.com Source link