ತಾಲಿಬಾನ್​ ಹಿಂಸೆಗೆ ಬೇಸತ್ತ ಅಫ್ಘಾನ್: ಕಾಬೂಲ್​ನಲ್ಲಿ ಉಗ್ರರೊಂದಿಗೆ ಅಧಿಕಾರ ಹಂಚಿಕೊಳ್ಳಲು ಆಫರ್

ತಾಲಿಬಾನ್​ ಹಿಂಸೆಗೆ ಬೇಸತ್ತ ಅಫ್ಘಾನ್: ಕಾಬೂಲ್​ನಲ್ಲಿ ಉಗ್ರರೊಂದಿಗೆ ಅಧಿಕಾರ ಹಂಚಿಕೊಳ್ಳಲು ಆಫರ್

ನವದೆಹಲಿ: ಅಫ್ಗಾನಿಸ್ತಾನದಲ್ಲಿ ಅಮೆರಿಕಾ ಸೇವೆ ವಾಪಸ್ಸಾದ ಬೆನ್ನಲ್ಲೇ ತಾಲಿಬಾಮ್ ಉಗ್ರರ ಅಟ್ಟಹಾಸ ತಾರಕ್ಕೇರಿದೆ. ತಾಲಿಬಾನ್ ಉಗ್ರರು ಅಫ್ಗಾನಿಸ್ತಾನದ ಬಹುತೇಕ ಪ್ರದೇಶಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಹಿಂಸಾಚಾರಕ್ಕೆ ಕೊನೆ ಹಾಡಲು ಇದೀಗ ಅಫ್ಗಾನ್ ಸರ್ಕಾರ ಅಧಿಕಾರ ಹಂಚಿಕೆಯ ಮೂಲಕ ಒಪ್ಪಂದಕ್ಕೆ ಮುಂದಾಗಿದೆಯಂತೆ.

ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ; ಅಫ್ಘಾನಿಸ್ತಾನಕ್ಕೆ ಭಾರತ ಕೊಟ್ಟಿದ್ದ ಹೆಲಿಕಾಪ್ಟರ್ ವಶಕ್ಕೆ ಪಡೆದ ಉಗ್ರರು

ಕತಾರ್​ನಲ್ಲಿರುವ ಅಫ್ಗಾನ್ ಸರ್ಕಾರದ ಮಧ್ಯವರ್ತಿಗಳು ತಾಲಿಬಾನ್​ನಲ್ಲಿ ಅಧಿಕಾರ ಹಂಚಿಕೆಯ ಆಫರ್ ನೀಡಿದ್ದಾರಂತೆ. ಮಧ್ಯವರ್ತಿಯಾಗಿ ಕತಾರ್​ನಲ್ಲಿ ತಾಲಿಬಾನ್ ಮುಂದೆ ಅಫ್ಘಾನಿಸ್ತಾನ ಸರ್ಕಾರ ಈ ಪ್ರಸ್ತಾವವನ್ನಿಟ್ಟಿದೆ ಎನ್ನಲಾಗಿದೆ. ತಾಲಿಬಾನ್​ನಲ್ಲಿ ಅಧಿಕಾರ ಹಂಚಿಕೆ ಪಡೆದುಕೊಂಡು ದೇಶದಾದ್ಯಂತ ಹಿಂಸಾಚಾರ ನಿಲ್ಲಿಸುವಂತೆ ಪ್ರಸ್ತಾಪದಲ್ಲಿ ಉಲ್ಲೇಖಿಸಲಾಗಿದೆಯಂತೆ. ಕಾಬೂಲ್ ಅಫ್ಘಾನಿಸ್ತಾನದ ರಾಜಧಾನಿಯಾಗಿದೆ.

ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ; ಭಾರತೀಯರಿಗೆ ತತ್​ಕ್ಷಣವೇ ಅಫ್ಘಾನ್​ ತೊರೆಯುವಂತೆ ರಾಯಭಾರಿ ಕಚೇರಿ ಸೂಚನೆ

ಅಫ್ಘಾನಿಸ್ತಾನದಾದ್ಯಂತ ಹಿಂಸಾಚಾರಕ್ಕೆ ಮುಂದಾಗಿರುವ ತಾಲಿಬಾನಿ ಉಗ್ರರ ವಿರುದ್ಧವಾಗಿ ಅಲ್ಲಿನ ಸರ್ಕಾರ ಸಹ ಸಮರ ಸಾರಿತ್ತು. ಅಫ್ಘಾನ್ ಯೋಧರು ನೂರಾರು ಉಗ್ರರನ್ನು ಹತ್ಯೆಯನ್ನೂ ಮಾಡಿದ್ದಾರೆ. ಆದರೆ ಉಗ್ರರ ಕೃತ್ಯ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇದೀಗ ಸರ್ಕಾರ ಅಧಿಕಾರ ಹಂಚಿಕೆಯ ಮಾರ್ಗ ಹಿಡಿದಿದೆ ಎನ್ನಲಾಗಿದೆ.

Source: newsfirstlive.com Source link