ಮಕ್ಕಳಿಗೂ ಮಿಲಿಟರಿ ಟ್ರೈನಿಂಗ್.. ಟಿಬೆಟ್​ ಮೇಲೆ ವಕ್ರದೃಷ್ಠಿ ಬೀರಿದ ಕುತಂತ್ರಿ ಚೀನಾ ಮಾಡ್ತಿರೋದೇನು..?

ಮಕ್ಕಳಿಗೂ ಮಿಲಿಟರಿ ಟ್ರೈನಿಂಗ್.. ಟಿಬೆಟ್​ ಮೇಲೆ ವಕ್ರದೃಷ್ಠಿ ಬೀರಿದ ಕುತಂತ್ರಿ ಚೀನಾ ಮಾಡ್ತಿರೋದೇನು..?

ನೀ ಇನ್ನು ಏನೆಲ್ಲಾ ಮಾಡ್ಬೇಕು ಅಂದು ಕೊಂಡಿದ್ಯಾ ? ಈ ಪ್ರಶ್ನೆ ಈಗ ನಾವು ಕೇಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ತನ್ನ ಸ್ವಾರ್ಥಕ್ಕೆ., ಮುಂದಿನ ಮಕ್ಕಳ ಭವಿಷ್ಯಕ್ಕೆ.. ಚೀನಾದ ವಕ್ರ ದೃಷ್ಟಿ ಬಿದ್ದರೋದು ಅಮಾಯಕ ಟಿಬೆಟ್ ಮಕ್ಕಳ ಮೇಲೆ.. ಟಿಬೆಟ್​ನ ಎಳೆ ಮಕ್ಕಳು ತಮ್ಮ ಸಂಸ್ಕೃತಿ ಕಲಿಯೋದನ್ನು ಬಿಟ್ಟು ಚೀನಾ ರೂಪಿಸುತ್ತಿರುವ ಸೈನ್ಯಕ್ಕೆ ಮನಸಿಲ್ಲದಿದ್ದರು ಸೇರಿ ಅಭ್ಯಾಸ ಮಾಡ್ತಾ ಇದ್ದಾರೆ. ಈ ಮಕ್ಕಳ ಕಷ್ಟದ ಮಿಲಿಟರಿ ಸಮ್ಮರ್ ಕ್ಯಾಂಪ್ ಹೇಗಿದೆ ಗೊತ್ತಾ ?

ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತೆ. ಎಳೆ ವಯಸ್ಸಿನಲ್ಲಿ ಏನು ಹೇಳಿದರು.. ಆ ಮಕ್ಕಳು ಅದನ್ನು ಮರೆಯದ ಹಾಗೆ ಗಾಢವಾಗಿ ಗ್ರಹಿಸಿಬಿಡ್ತಾರೆ. 8 ರಿಂದ 16 ವಯಸ್ಸಿನಲ್ಲಿ ಏನೆಲ್ಲ ತಮ್ಮ ತಲೆಗೆ ಹೋಗುತ್ತದೋ. ಅದನ್ನು ಆ ಮಕ್ಕಳು ಅವರ ಮುಂದಿನ ಜೀವನಕ್ಕೆ ಅಳವಡಿಸಿಕೊಳ್ಳುವುದು ಉಂಟು. ಇದರಿಂದ ಕಿರಿ ವಯಸ್ಸಿಗೆ ಆದಷ್ಟು ಸಕಾರಾತ್ಮಕ ವಿಚಾರಗಳನ್ನು.. ಅವರ ಏಳಿಗೆಗೆ ಪೂರಕವಾಗುವಂತ ನಡವಳಿಕೆಗಳನ್ನು ತುಂಬ ಬೇಕಾಗುತ್ತದೆ. ಇದು ಆ ಮಕ್ಕಳ ಬೆಳವಣೆಗೆಗೆ ಪುಷ್ಟಿ ನೀಡುತ್ತದೆ. ಮುಗ್ಧ ಮಕ್ಕಳನ್ನು ಮುಂದಿನ ಪೀಳಿಗೆಯ ರತ್ನಗಳನ್ನಾಗಿ ಮಾಡೋದು ಸಹ ಕಿರಿ ವಯಸ್ಸಿನಲ್ಲಿ ಆ ಮಕ್ಕಳ ಮನಸ್ಸಿಗೆ ತುಂಬಿದ ವಿಚಾರಗಳೆ. ಯಾವಾಗ ಇದನ್ನು ಹೊರತು ಪಡಿಸಿ.. ಇಲ್ಲ ಸಲ್ಲದ, ಬೇಡದ ವಿಚಾರಗಳನ್ನು ತುಂಬುತ್ತಾರೋ.. ಅದು ಮುಂದಾಗುವ ತೊಂದರೆಗಳಿಗೆ ನಾಂದಿ ಹಾಡಿದಂತೆ..

blank

ಈಗ ಚೀನಾ ರೂಪಿಸಿರುವ ಹುನ್ನಾರವೇ ಇದು. ಟಿಬೆಟ್ ನಿಮಗೆ ಸಹಾಯ ಮಾಡ್ತಿವಿ ಅನ್ನೋ ಮಾತಲ್ಲಿ ಬೆನ್ನಿಗೆ ಚೂರಿ ಇರಿಯುವ ವಿಷಯವಿದು. ಇದು ನ್ನೆನ್ನೆ ಮೊನ್ನೆ ವಿಚಾರವಲ್ಲ, ಅದೆಷ್ಟೋ ವರ್ಷಗಳಿಂದ ಟಿಬೆಟ್ ಚೀನಾ ಅಡಿಯಾಳಾಗಿ ಬಿಟ್ಟಿದೆ.
ಬುದ್ಧನ ತತ್ವಗಳನ್ನು ಅನುಸರಿಸುವ ಟಿಬೇಟಿಗರು, ಶಾಂತಿ ಪಾಲನೆಯಲ್ಲಿ ಮುಂದಾಗಿರ್ತಾರೆ. ಅವರ ಸಂಸ್ಕೃತಿಯೂ ಶಾಂತಿ, ತಾಳ್ಮೆಯನ್ನೆ ಭೋದಿಸುತ್ತೆ. ಆದ್ರೆ ಚೀನಾದ ಸ್ವಾರ್ಥತೆಯ ನೆರಳು ಟಿಬೆಟ್ ಕಣ್ಣಿಗೆ ಬೀಳ್ತಾ ಇಲ್ಲ. ತಾನೊಬ್ಬ ಯಶಸ್ವಿಯಾಗಿ ಬದುಕಲು ಜಗತ್ತಿಗೆ ಏನೆಲ್ಲಾ ಮಾಡಿದೆ ಅನ್ನೋದರ ಅರಿವು ಎಲ್ಲರಿಗೂ ಇದ್ದರು, ಟಿಬೆಟ್ ಚೀನಾ ಕೈ ಕುಲುಕುತ್ತಿದೆ. ಇಂತಹ ಕುತಂತ್ರಿ ಕಮ್ಯುನಿಸ್ಟ್ ಪಾರ್ಟಿ ಈಗ ತನ್ನ ವಕ್ರದೃಷ್ಟಿಯನ್ನು ಟಿಬೆಟ್ ಮಕ್ಕಳ ಮೇಲೆ ಭೀರಿದೆ. ಆ ಮುಗ್ಧ ಮಕ್ಕಳಿಗೆ ಕಮ್ಯುನಿಸ್ಟ್ ಸಿದ್ಧಾಂತವನ್ನು ಭೋದಿಸಲು ಮುಂದಾಗಿದೆ.

ಸಮ್ಮರ್ ಕ್ಯಾಂಪ್ ಹೆಸರಲ್ಲಿ ಮಕ್ಕಳಿಗೆ ಮಿಲಿಟರಿ ಟ್ರೈನಿಂಗ್
ಕಮ್ಯುನಿಸ್ಟ್ ಸಿದ್ಧಾಂತ ಬೋಧಿಸುವ ಟಿಬೆಟ್ ಮಕ್ಕಳ ಕ್ಯಾಂಪ್

ಎಳೆ ಮಕ್ಕಳು.. ಯೋಧರಾಗಲು ನಡೆಯುತ್ತಿರುವ ತಯಾರಿ. ಆ ಪುಟ್ಟ ಮೃದು ದೇಹಕ್ಕೆ ಕಠಿಣ ಯುದ್ಧಭ್ಯಾಸ. ಮಿಲಿಟರಿ ವಸ್ತ್ರ.. ಬೆನ್ನೆಗಿ ಭಾರವಾದ ಆಯುಧಗಳು. ಇಲ್ಲಿ ಇರುವ ಮಕ್ಕಳೆಲ್ಲ ಕೇವಲ 8 ರಿಂದ 16 ಹರೆಯದವರು. ಇಂಡಿಯಾದಲ್ಲೂ ಮಕ್ಕಳಿಗೆ ಶಿಸ್ತು ರೂಪಿಸಲು, ಎನ್ ಸಿ ಸಿ ಎನ್ನವ ಟ್ರೈನಿಂಗ್ ನೀಡಲಾಗುತ್ತೆ. ಆದ್ರೆ ಅದು ಪ್ರೌಢಾವಸ್ಥೆಗೆ ಬಂದಾಗ, ಮತ್ತು ದೇಶ ಸೇವೆಗಾಗಿ. ಈ ಹಿಂದೆ ಶಾಲೆಯ ಸಮಯವನ್ನು ಹೊರತು ಪಡಿಸಿ, ಟಿಬೆಟ್ ಮಕ್ಕಳಿಗೆ ತಮ್ಮ ಸಂಸ್ಕೃತಿ, ಭಾಷೆ, ಸಂಗೀತವನ್ನು ಹೇಳಿ ಕೊಡುವ ಸಮ್ಮರ್ ಕ್ಯಾಂಪ್ ಗಳು ನಡೆಯುತ್ತಿದ್ದವು,. ಈ ಕ್ಯಾಂಪ್ ಶಾಂತಿಯುತವಾಗಿರುತ್ತಿದ್ದವು..

blank

ಇಲ್ಲಿ ಟಿಬೆಟ್ ಮಕ್ಕಳಿಗೆ, ಬುದ್ಧ ಭೋದನೆ, ಟಿಬೇಟಿಯನ್ ಕಲೆ ಹಾಗೂ ಸಂಸ್ಕೃತಿ, ಸಂಗೀತ ನೃತ್ಯ ಹೀಗೆ ಕಲೆಗಳ ಸಂಗಮದ ಜೊತೆ, ಟಿಬೇಟಿಯನ್ ರ ಭಾಷೆ ಬೋಡಿಕ್ ಅನ್ನು ಮಕ್ಕಳಿಗೆ ಕಲಿಸಲಾಗ್ತಾ ಇದೆ. ಇಂಡಿಯಾ ಹಾಗೂ ನೇಪಾಳದಿಂದ ಕೆಲ ಸಂಸ್ಕೃತಿಗಳು ಟಿಬೆಟ್ ಭೂಮಿಯಲ್ಲಿ ಹೇಳಿಕೊಡಲಾಗುತ್ತೆ. ಟಿಬೇಟಿಯನ್ ರ ವಿಶೇಷ ಅಂಶವೇನೆಂದರೆ ಅವರು ರಾಜಕೀಯ ಮತ್ತು ಆಧ್ಯಾತ್ಮವನ್ನು ಒಟ್ಟುಗೂಡಿಸಿ ಶಾಂತತೆಯ ಸರ್ಕಾರವನ್ನು ನಡೆಸುತ್ತಾರೆ. ಇದರ ಅರಿವೂ ಕೂಡ ಮಕ್ಕಳಿಗೆ ಈ ಸಮ್ಮರ್ ಕ್ಯಾಂಪ್ ಗಳಲ್ಲಿ ನಡೆಯುತ್ತದೆ. 2 ತಿಂಗಳ ಸಮ್ಮರ್ ಕ್ಯಾಂಪ್ ಅನ್ನು ನಗುನಗುತ್ತಾ, ಮಕ್ಕಳ ಗುಂಪಾಗಿ ಎಲ್ಲರ ನಡುವೆ ಒಂದಾಗಿ ಬಂದಿರುತ್ತಾರೆ ಟಿಬೆಟ್ ಮಕ್ಕಳು. ಆದರೆ ಈ ಸಂಸ್ಕೃತಿಗೆ ಬ್ರೇಕ್ ಹಾಕ್ತಾ ಇದೆ ಚೀನಾ..

ಟಿಬೆಟ್ ಯುವಕರಿಗೆ ಬೋಧನಾ ಶಿಬಿರ ನಡೆಸಿದ್ದ ಚೀನಾ
ಬೋಧನೆ ಹೆಸರಲ್ಲಿ ಕಮ್ಯುನಿಸ್ಟ್ ಸಿದ್ಧಾಂತದ ಪ್ರಚಾರ

ಟಿಬೆಟ್ ಮಕ್ಕಳ ಕಠಿಣ ಮಿಲಿಟರಿ ಬೇಸಿಗೆ ಶಿಬಿರಕ್ಕೂ ಮುಂಚೆ, ಚೀನಾ ತನ್ನ ಟ್ರೋಪ್ ಅನ್ನು ಟಿಬೆಟ್ ಯುವಕರ ಮನಪರಿವರ್ತನೆಗೆ ಕಳಿಸಿತ್ತು. ಟಿಬೆಟ್ ನ ಕೈದಿಗಳನ್ನು ಸೇರಿ ಹಲವಾರು ಯುವಕರ ದೃಷ್ಟಿಯನ್ನು ಬದಲಿಸಲು ಚೀನಾ ಬೋಧನಾ ಶಿಬಿರಗಳನ್ನು ಟಿಬೆಟ್ ನಲ್ಲಿ ನೆರೆವೇರಿಸಿತ್ತು. ಇಲ್ಲಿ ಟಿಬೆಟ್ ಯುವಕರ ಯೋಚನೆಗಳನ್ನು ಬದಲಿಸಿ, ಅವರ ತಲೆಗಳಲ್ಲಿ ಕಮ್ಯುನಿಸ್ಟ್ ಸಿದ್ಧಾಂತದ ರುಚಿಯನ್ನು ತುಂಬಿ ಅದರ ಪ್ರಚಾರ ನೆರೆವೇರಿಸಲಾಗಿತ್ತು. ಈ ಕೆಲಸವನ್ನು ಮಾಡಲು ಚೀನಾ ರೂಪಿಸಿದ್ದ ಪ್ಲಾನ್ ಹೇಗಿತ್ತು ಅಂದ್ರೆ.. ಟಿಬೆಟ್ ಸಂಸ್ಕೃತಿಯ ಮಾರ್ಗದಲ್ಲೆ ತೆರಳಿ, ನಡುವೆ ಕಮ್ಯುನಿಸ್ಟ್ ಸಿದ್ಧಾಂತದ ಆಕರ್ಶಕ ವಿಷಯಗಳನ್ನು ತಿಳಿಸಿ.. ಯುವಕರ ಮನವಲಿಸಿಕೊಂಡಿತ್ತು.

blank

ಟಿಬೆಟ್ ಮನೆಯಿಂದ ಒಬ್ಬ ಯೋಧ ಚೀನಾ ಸೇನೆಗೆ
ಗಡಿ ಕಾಯಲು ಚೀನಾದ ಪೀಪಲ್ ಲಿಬರೇಷನ್ ಆರ್ಮಿ

ಚೀನಾ ಹೀಗೆ ನಿಧಾನವಾಗಿ ಟಿಬೆಟ್ ನೆಲವನ್ನು ಆಕ್ರಮಿಸಿಕೊಳ್ಳುತ್ತಿದೆ. ಟಿಬೆಟ್ ನ ಪ್ರತಿ ಮನೆಯಿಂದ ಒಬ್ಬ ಯೋಧನನ್ನು ಚೀನಾದ ಪೀಪಲ್ ಲಿಬರೇಷನ್ ಆರ್ಮಿಗೆ ಸೇರಿಸಿ ಎಂದು ಹೇಳಿತ್ತು ಚೀನಾ ಸರ್ಕಾರ. ಇದರಿಂದ ಭಾರತ ಹಾಗೂ ಚೀನಾ ಗಢಿ ಭಾಗವಾದ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ ಅನ್ನು ಟಿಬೆಟ್ ಯುವಕರು ಚೀನಾ ಪರ ಸೇನೆಯಲ್ಲಿ ನಿಂತು ಕಾಯಬೇಕು ಎನ್ನುವ ಪ್ಲಾನ್ ಚೀನಾದು.
ಇದರ ಹಿಂದೆ ದೊಡ್ಡ ಯೋಚನೆ ಇದೆ. ಲೈನ್ ಆಫ್ ಆಕ್ಚಿಯಲ್ ಕಂಟ್ರೋಲ್ ಹಿಮ ಬರಿತ ಪ್ರದೇಶ. ಟಿಬೆಟ್ ಯುವಕರು ಹುಟ್ಟಿನಿಂದಲೂ ಹಿಮ ರಾಶಿಗಳ ನಡುವೆ ಬೆಳೆದು ಅಭ್ಯಾಸ ಇರುವವರು. ಈ ಗಡಿ ಭಾಗಗಳಲ್ಲಿ ಯಶಸ್ವಿಯಾಗಿ ಟಿಬೆಟ್ ಯೋಧರು ಸೇವೆ ಸಲ್ಲಿಸ ಬಹುದು ಎನ್ನುವ ಪ್ಲಾನ್ ಪೀಪಲ್ ಲಿಬರೇಷನ್ ಆರ್ಮಿದು.

ಟಿಬೆಟ್ ಜನರು, ಮನೆಯಿಂದ ಒಬ್ಬ ಯೋಧನನ್ನು ದೇಶ ಸೇವೆಗೆ ಕೊಡಲೇ ಬೇಕು ಎನ್ನುವ ಪದ್ಧತಿಗೆ ಫಿಕ್ಸ್ ಆಗಿಬಿಟ್ಟಿದ್ದಾರೆ. ಮಕ್ಕಳಿಗಾಗಿ ಮಿಲಿಟರಿ ಟ್ರೈನಿಂಗ್ ಸಮ್ಮರ್ ಕ್ಯಾಂಪ್ ಎಂದು ಘೋಷಿಸಿದ ಕೂಡಲೇ ಅದೆಷ್ಟೊ ಸಾವಿರ ಮಕ್ಕಳನ್ನು ಕ್ಯಾಂಪ್ ಗೆ ಸೇರಿಸಿದ್ದಾರೆ ಪೋಷಕರು. ಇಲ್ಲಿ ಮಕ್ಕಳು ಬೆಳಗ್ಗಿನ ಜಾವದಲ್ಲೆ ಎದ್ದು, ಶಿಸ್ತಿನ ಸಮವಸ್ತ್ರವನ್ನು ಧರಿಸಿ, ಡ್ರಿಲ್, ಪೆರೇಡ್ ಹಾಗೂ ಮಿಲಿಟರಿ ಅಭ್ಯಾಸದ ಶ್ರಮವನ್ನು ಹಾಕುತ್ತಿದ್ದಾರೆ. ಟಿಬೆಟ್ ನ ಬೇರೆ ಬೇರೆ ಪ್ರದೇಶದಿಂದ ಮಕ್ಕಳನ್ನು ಆಯ್ಕೆ ಮಾಡಲಾಗಿದೆ, ಇದರಲ್ಲಿ ಟಿಬೆಟ್ ರಾಜಧಾನಿ ಲಾಷದಿಂದಲೂ ಹಲವಾರು ಮಕ್ಕಳು ಭಾಗಿಯಾಗಿದ್ದಾರೆ.

ಸ್ನೋ ಹಾಕ್ ಸಮ್ಮರ್ ಮಿಲಿಟರಿ ಕ್ಯಾಂಪ್ ಎಂದು ನಾಮಕರಣ
ಭಾರತದ ಗಡಿ ಅರುಣಾಚಲ ಪ್ರದೇಶದ ಸಮೀಪ ಕ್ಯಾಂಪ್ ಸೆಟ್ ಅಪ್

ದಿ ಯಂಗ್ ಟಿಬೇಟಿಯನ್ನ ಸ್ನೋ ಹಾಕ್ ಮಿಲಿಟರಿ ಸಮ್ಮರ್ ಕ್ಯಾಂಪ್ ಮತ್ತು ಟಿಬೆಟ್ ರಾಂಗ್ ಹೀ ಮಿಲಿಟರಿ ಟ್ರೈನಿಂಗ್ ಸೆಂಟರ್ ಇದು ಈ ಮಕ್ಕಳ ಕ್ಯಾಂಪ್ ನ ಹೆಸರು. ಈ ವರ್ಷದ ಸಮ್ಮರ ಕ್ಯಾಂಪ್ 100 ಮಕ್ಕಳೊಂದಿಗೆ ಯಶಸ್ವಿಯಾಗಿದೆ. ಈ ಕ್ಯಾಂಪ್ ನ ಸೆಟ್ ಅಪ್ ಭಾರತದ ಗಡಿ ಅರುಣಾಚಲ್ ಪ್ರದೇಶದ ಸಮೀಪವೇ ರೂಪಿಸಲಾಗಿದೆ. ಇದು ಮುಂದಿನ ವರ್ಷ ಇನ್ನಷ್ಟು ಹೆಚ್ಚಿಸಿ.. ಇನ್ನು ಹೆಚ್ಚು ಸೈನಿಕರನ್ನು ಇಲ್ಲಿ ರೆಡಿ ಮಾಡುವುದು ಚೀನಾ ಪ್ಲಾನ್. ಜೊತೆಗೆ ಭಾರತದ ವಿರುದ್ಧ ಟಿಬೆಟ್ ಬಾಣ ಬೀಸಲು ಚೀನಾ ಸಿದ್ಧ ಮಾಡಿಕೊಂಡಿರುವ ಅಸ್ತ್ರ. ಇಷ್ಟು ಯೋಜನೆ ರೂಪಿಸಿರೋದು, ಚೀನಾದ ಯಂಗ್ ವಿಂಗ್ ಆರ್ಮಿ

ಮಕ್ಕಳ ಕ್ಯಾಂಪ್ ವಿರೋಧಿಸುತ್ತಿರುವ ಕೆಲ ಟಿಬೇಟಿಗರು
ಇದು ಟಿಬೆಟಿಯನ್ ಸಂಸ್ಕೃತಿಯನ್ನು ನಾಶ ಮಾಡುವ ಅಸ್ತ್ರ

ಚೀನಾ ಹಾಗೂ ಟಿಬೆಟ್ ನ ಒಪ್ಪಂದ ಹೀಗೆ ಇದೆ. ಈಗಾಗಲೇ ಟಿಬೆಟ್ ಚೀನಿಯರ ಅಡಿಯಾಳಾಗಿರೊದ್ರಲ್ಲಿ ಸಂಶಯವೇ ಇಲ್ಲ. ಆದರೆ ಈ ನಡೆಗಳನ್ನು ವಿರೋಧಿಸುವ ಕೆಲ ಟಿಬೇಟಿಗರು ಸಹ ಇದ್ದಾರೆ. ಚೀನಾ ಕಮ್ಯೂನಿಸ್ಟ್ ಸಿದ್ಧಾಂತವನ್ನು ಬೋಧಿಸುವ ಮುಂಗಾಲಿನಲ್ಲಿ, ಟಿಬೆಟ್ ಭಾಷೆ ಸಂಸ್ಕೃತಿಯನ್ನು ಕಡೆಗಣಿಸುತ್ತಿದೆ. ಟಿಬೇಟಿಯನ್ ಸಂಸ್ಕೃತಿ ವಿಶೇಷವಾದ್ದದ್ದು, ಹಾಗೂ ಬೋಡಿಕ್ ಭಾಷೆಯಲ್ಲೂ ಶಾಂತಿ ಸಾರುತ್ತದೆ. ಆದ್ರೆ ಮಕ್ಕಳನ್ನು ಹೀಗೆ ಆರ್ಮಿ ತರಬೇತಿಗೆ ಕಳುಹಿಸಿದರೆ, ಅವರುಗಳಿಗೆ ತಮ್ಮ ಸಂಸ್ಕೃತಿಯಾಗಲೀ., ಭಾಷೆಯ ಜ್ಞಾನವಾಗಲಿ ಕಲಿಸುವುದು ಹೇಗೆ.. ಈ ನಡೆ ಟಿಬೆಟ್ ಸಂಸ್ಕೃತಿಯನ್ನು ಕೊನೆಗೊಳಿಸುವ ನಡೆಯಾಗದೆ ಎಂದು ಅಲ್ಲಿನ ಹಿರಿಯರು ವಿರೋಧಿಸುತ್ತಿದ್ದಾರೆ. ಆದ್ರೆ ಚೀನಾ ಸಂಪೂರ್ಣ ಸಾರ್ವಭೌಮತ್ವವನ್ನು ಸಾಧಿಸಲು ಹುನ್ನಾರ ನಡೆಸುತ್ತಲೇ ಇದೆ.

ಚೀನಾ ಬಳಿ ಈಗಾಗಲೇ, ಯುವಕ ಯುವತಿಯರ ರಿಸರ್ವ್ ಆರ್ಮಿ ಇದೆ. ತುರ್ತು ಪರಿಸ್ಥಿತಿಯಲ್ಲಿ ಇವರಿಂದ ಬಹಳ ಸಹಾಯವಾಗುತ್ತದೆ. ಇದೇ ರೀತಿ ಟಿಬೆಟ್ ನಲ್ಲೂ ತನ್ನ ರಿಸರ್ವ್ ಆರ್ಮಿಯನ್ನು ಸಿದ್ಧ ಪಡಿಸಲು ಇಷ್ಟೆಲ್ಲಾ ಮುಂದಾಗಿದೆ. ಚೀನಾದ ಆರ್ಮಿ ಯುದ್ಧಗಾಡಿನಲ್ಲಿ ಯುದ್ಧವನ್ನಾಡಿ 40 ವರ್ಷಗಳು ಕಳೆದಿದೆ. ಹೊಸ ಯುವಕರ ಮಿಲಿಟರಿ ಫೋರ್ಸ್ ಗಳಿಗೆ ಯುದ್ಧದ ಅನುಭವ ಕಡಿಮೆ. ಈ ಕಾರಣದಿಂದ ಆರ್ಮಿಯನ್ನು ಹೆಚ್ಚೆಚ್ಚು ಸೈನಿಕರಿಂದ ಬಲಗೊಳಿಸಿಕೊಳ್ಳಲು ಪ್ರಯತ್ನ ಚೀನಾದು. ಇದಕ್ಕೆ ಅಮಾಯಕರಂತೆ ಬಲಿಯಾಗುತ್ತಿರುವುದು ಮಾತ್ರ ಟಿಬೆಟ್ ಸಹೋದರರು.

ಎಂದಿನಂತೆ ಚೀನಾ ನಡೆ ಅತಿರೇಕವಾಗೆ ಇದೆ. ಮಕ್ಕಳು ಸೇನೆಗೆ ಸೇರಲು ಕನಸು ಕಂಡ ಅಭ್ಯಾಸ ಮಾಡುವುದೇ ಬೇರೆ, ಒತ್ತಾಯ ಪೂರಕವಾಗಿ ಅವರುಗಳನ್ನು ಸೇನೆಗೆ ಸೇರಿಸುವುದೇ ಬೇರೆ. ಇಲ್ಲಿ ಖಂಡಿತವಾಗಿಯೂ ಮಕ್ಕಳು ಚೀನಾದ ಸಿದ್ಧಾಂತಕ್ಕೆ ಬಲಿಪಶುಗಳು. ಚೀನಾ ನಿಮ್ಮ ಕುತಂತ್ರ ಬುದ್ಧಿ ಏನಾದರಾಗಿರಲಿ, ಮಕ್ಕಳನ್ನು ಇದರಿಂದ ದೂರವಿಡಿ ಅಷ್ಟೆ..

Source: newsfirstlive.com Source link