ರಾಜ್ಯದಲ್ಲಿ ಜಾತ್ರೆ, ದೇವಾಲಯದ ಹಬ್ಬಗಳು, ಮೆರವಣಿಗೆ, ಸಭೆ-ಸಮಾರಂಭ ನಿಷೇಧ- ಗೈಡ್​ಲೈನ್ಸ್ ರಿಲೀಸ್

ರಾಜ್ಯದಲ್ಲಿ ಜಾತ್ರೆ, ದೇವಾಲಯದ ಹಬ್ಬಗಳು, ಮೆರವಣಿಗೆ, ಸಭೆ-ಸಮಾರಂಭ ನಿಷೇಧ- ಗೈಡ್​ಲೈನ್ಸ್ ರಿಲೀಸ್

ಬೆಂಗಳೂರು: ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೊರೊನಾ ಸೋಂಕುಗಳು ಹೆಚ್ಚದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ತಿದೆ. ಈ ಮಧ್ಯೆ ಮುಂಬರುವ ಗಣೇಶ ಚತುರ್ಥಿ, ಮೊಹರಂ ಇತರೆ ಹಬ್ಬಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದೆ.

ಆಗಸ್ಟ್, ಸೆಪ್ಟೆಂಬರ್​ ತಿಂಗಳಿನ ಹಬ್ಬ ಹರಿದಿನಗಳು ಬರುವ ಹಿನ್ನೆಲೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಹಬ್ಬಗಳಿಗೆ ಹೆಚ್ಚುವರಿ ನಿರ್ಬಂಧಗಳನ್ನ ವಿಧಿಸಿದೆ. ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆಯಲ್ಲಿ ಜನಸಂದಣಿ ತಡೆಟ್ಟಲು ನಿರ್ಬಂಧಗಳನ್ನ ಹೇರಿಕೆ ಮಾಡಲಾಗಿದೆ. ದೇವಸ್ಥಾನ , ಮಸೀದಿ, ಚರ್ಚ್​​, ಗುರುದ್ವಾರ ಇತರೆ ಧಾರ್ಮಿಕ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಕೋವಿಡ್​ ನಿಮಯಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ಹೊರಡಿಸಲಾಗಿದೆ. ಜಾತ್ರೆ, ದೇವಾಲಯದ ಹಬ್ಬಗಳು, ಮೆರವಣಿಗೆ, ಸಭೆ ಸಮಾರಂಭ ನಿಷೇಧ ಮಾಡಲಾಗಿದೆ.

ಇನ್ನು ಮೊಹರಂ ಹಬ್ಬದಲ್ಲಿ ಆಲಂಗಳನ್ನು, ಪಂಜಾಗಳನ್ನ ಸ್ಥಾಪಿಸದಂತೆ ನಿಷೇಧ ಹೇರಲಾಗಿದೆ. ಆಗಸ್ಟ್​​ 12ರಿಂದ 20ರವರೆಗೆ ನಿಷೇಧ ಜಾರಿಯಲ್ಲಿರಲಿದ್ದು ಆಲಂ ಪೀರ್​ಗಳನ್ನು ದೂರದಿಂದಲೇ ನೋಡತಕ್ಕದ್ದು ಎಂದಿದೆ. ಸಾರ್ವಜನಿಕವಾಗಿ ಹಬ್ಬ ಆಚರಿಸದಂತೆ ಸರ್ಕಾರ ಮಾರ್ಗಸೂಚಿಯಲ್ಲಿ ಹೇಳಿದೆ.

 

Source: newsfirstlive.com Source link