ಸತೀಶ್​ ರೆಡ್ಡಿ ಕಾರು ಧ್ವಂಸ ಪ್ರಕರಣ: 50-60 ಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳ ಬೆನ್ನತ್ತಿದ CCB

ಸತೀಶ್​ ರೆಡ್ಡಿ ಕಾರು ಧ್ವಂಸ ಪ್ರಕರಣ: 50-60 ಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳ ಬೆನ್ನತ್ತಿದ CCB

ಬೆಂಗಳೂರು: ತಮ್ಮ ನಿವಾಸದ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ರೆಡ್ಡಿ ನಿವಾಸಕ್ಕೆ ಸಿಸಿಬಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪ್ರಕರಣ ಸಂಬಂಧಿಸಿ ಬೊಮ್ಮನಹಳ್ಳಿ ಪೊಲೀಸ್ ಇನ್ಸ್​ಪೆಕ್ಟರ್​ಗೆ ಸತೀಶ್ ರೆಡ್ಡಿ ಡ್ರೈವರ್ ಸೆಲ್ವಂ ದೂರು ನೀಡಿದ್ದು, ಬೆಳಗಿನ ಜಾವ ನಾಲ್ಕು ಗಂಟೆಗೆ ಎಫ್ಐಆರ್ ದಾಖಲು ಮಾಡಿ IPC ಸೆಕ್ಷನ್ 436 ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಘಟನೆಯ ಸಂಪೂರ್ಣ ವಿವರ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

blank

ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿಯ ಫಾರ್ಚೂನರ್ ಸೇರಿ 2 ಕಾರಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

ತಡರಾತ್ರಿ 1:27 ನಿಮಿಷದಲ್ಲಿ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡು ಐದು ನಿಮಿಷಗಳ ಬಳಿಕ ಮನೆಯವರಿಗೆ ಮಾಹಿತಿ ತಿಳಿದಿದೆ. ಬೆಂಕಿ ಹೊತ್ತಿಕೊಂಡ ಅರೆ ಕ್ಷಣದಲ್ಲೆ ಅರೋಪಿಗಳು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ವಿಷಯ ತಿಳಿಯುತ್ತಿದ್ದಂತೆ 1:35 ರ ವೇಳೆಗೆ ಮೊದಲು ಹೊಯ್ಸಳ ಗಸ್ತು ವಾಹನ ಸ್ಥಳಕ್ಕೆ ಬಂದಿದ್ದು‌ ಬಳಿಕ ಇನ್ಸ್ಪೆಕ್ಟರ್, ಎಸಿಪಿ, ಡಿಸಿಪಿ, ಸೇರಿ ಹಿರಿಯ ಅಧಿಕಾರಿಗಳು ಅಗಮಿಸಿದ್ದಾರೆ ಎನ್ನಲಾಗಿದೆ.

blank

 

ಇದನ್ನೂ ಓದಿ:ಸತೀಶ್​ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಕೇಸ್: ಕೇವಲ 3 ನಿಮಿಷದಲ್ಲಿ ಬೆಂಕಿಯಿಟ್ಟು ದುಷ್ಕರ್ಮಿಗಳು ಎಸ್ಕೇಪ್

ಪ್ರಕರಣವನ್ನು ಶೀಘ್ರವಾಗಿ ಭೇದಿಸುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ನೇತೃತ್ವದಲ್ಲಿ ಐದು ತಂಡಗಳಿಂದ ತನಿಖೆ ಆರಂಭಿಸಲಾಗಿದ್ದು, ಮತ್ತೆರಡು ತಂಡಗಳನ್ನ ಹೆಚ್ಚುವರಿಯಾಗಿ ರಚಿಸಲಾಗಿದೆ. ಇನ್ನು ಸುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಬರೋಬ್ಬರಿ 50-60 ಸಿಸಿ ಕ್ಯಾಮೆರಾ ಗಳ ಪರಿಶೀಲನೆ ನಡೆಸಿದ್ದಾಗಿ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link