ಹನುಮಂತನ ಸ್ಮರಣೆಯಲ್ಲಿ ಪ್ರೇಮ್​.. ‘ಏಕ್​​ ಲವ್ ಯಾ’ನ ಹಾಡಿಗೂ, ಆಶೀರ್ವಾದಕ್ಕೂ ಹನುಮಂತನೇ ಬೇಕಂತೆ

ಹನುಮಂತನ ಸ್ಮರಣೆಯಲ್ಲಿ ಪ್ರೇಮ್​.. ‘ಏಕ್​​ ಲವ್ ಯಾ’ನ ಹಾಡಿಗೂ, ಆಶೀರ್ವಾದಕ್ಕೂ ಹನುಮಂತನೇ ಬೇಕಂತೆ

ನಿರ್ದೇಶಕ ಜೋಗಿ ಪ್ರೇಮ್ ಹಗಲಿರುಳು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಕಾಲ ಕಳೆಯುತ್ತಿದ್ದಾರೆ.. ಜೊತೆಗೆ ಹನುಮನ ಸ್ಮರಣೆಯನ್ನೂ ಜೋರಾಗಿ ಮಾಡ್ತಿದ್ದಾರೆ.. ನಮ್ಮ ಪ್ರೇಮ್ ಅಣ್ಣಂಗೆ ಇಷ್ಟೆಲ್ಲ ಹನುಮನ ಮೇಲೆ ಭಕ್ತಿ ಯಾಕೆ ಬಂದಿದೆ.. ಈಗ ಏಕ್ ಲವ್ ಯಾ ಏನ್ ಮಾಡ್ತಿದ್ದಾರೆ..?

ಜೋಗಿ ಪ್ರೇಮ್ ತನ್ನ ಬಾವಮೈದನ ರಾಣ ಅವ್ರನ್ನ ಹೀರೋ ಆಗಿ ನಿಲ್ಲಿಸಲು ಕನ್ನಡ ಪ್ರೇಕ್ಷಕರಿಗೆ ಒಂದು ನವಿರಾದ ಪ್ರೇಮ ಕಾವ್ಯವನ್ನ ಅರ್ಪಿಸಲು ‘ಏಕ್​​ ಲವ್ ಯಾ’ ಸಿನಿಮಾವನ್ನ ಮಾಡ್ತಿದ್ದಾರೆ.. ಪ್ರಚಾರದ ವಿಚಾರದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಒಂಥರಾ ಪಿಎಚ್​ಡಿ ಮಾಡಿದ್ದಾರೆ.. ಒಂದು ಸಿನಿಮಾವನ್ನ ಟೈಟಲ್​ನಿಂದ ಜನಮನಕ್ಕೆ ಮುಟ್ಟಿಸ ಬೇಕು ಅನ್ನೋದನ್ನ ಪ್ರೇಮ್ ಅವರಿಂದ ಕಲಿಯಬೇಕು..

blank

ಟೈಟಲ್​​ನಿಂದ ಗಮನ ಸೆಳೆದಿರುವ ಏಕ್ ಲವ್ ಯಾ ಸಿನಿಮಾ ಈಗ ಹಾಡುಗಳಿಂದಲೂ ಚಿತ್ರಪ್ರೇಮಿಗಳನ್ನ ಇಂಪ್ರೆಸ್ ಮಾಡುತ್ತಿದೆ..
ಅರ್ಜುನ್ ಜನ್ಯ ಸ್ವರ ಸಂಯೋಜನೆಯಲ್ಲಿ ಏಕ್ ಲವ್ ಯಾ ಸಿನಿಮಾದ ಹಾಡುಗಳು ಮೂಡಿ ಬರುತ್ತಿವೆ.. ಸಂಚಿತ್ ಹೆಗ್ಡೆ ಅವರಿಂದ ಮೊನ್ ಮೊನ್ನೆ ಸೋನು ನಿಗಮ್ ಹಾಗೂ ರಾಬರ್ಟ್ ಮಂಗ್ಲಿ ಖ್ಯಾತಿಯ ಸತ್ಯವತಿ ಮಂಗ್ಲಿ ಅವರಿಂದ ಹಾಡನ್ನ ಹಾಡಿಸಿ ಪ್ರಚಾರ ಪಡಸಾಲೆಯ ಮುನ್ನೆಲೆಗೆ ಬಂದಿದ್ದ ಏಕ್ ಲವ್ ಯಾ ಟೀಮ್ ಈಗ ಹನುಮಂತನ ಮೊರೆ ಹೋಗಿದೆ..

ಹನುಮಂತನ ಸ್ಮರಣೆಯಲ್ಲಿ ಏಕ್ ಲವ್ ಯಾ..

ಹನುಮಂತನ ಮೊರೆ ಹೋದ ಏಕ್ ಲವ್ ಯಾ ಪ್ರೇಮ್ ಅನ್ನೋ ವಾಕ್ಯಕ್ಕೆ ಎರಡು ಒಳಾರ್ಥವಿದೆ. ಒಂದು ಈ ತಿಂಗಳ 18 ತಾರೀಕು ಏಕ್ ಲವ್ ಯಾ ಸಿನಿಮಾದ ಕುಂಬಳ ಕಾಯಿ ಹೊಡೆದು ಶೂಟಿಂಗ್ ಮುಗಿಸೋ ಸಂಪ್ರದಾಯ ಮುತ್ತತ್ತಿ ಹನುಮಂತರಾಯನ ಕ್ಷೇತ್ರದಲ್ಲಿ ಆಗಲಿದೆ. ಪ್ರೇಮ್ ಅವ್ರ ಹಿಂದಿನ ಸಿನಿಮಾದ ಶೂಟಿಂಗ್ ಗಳೆಲ್ಲ ಮುತ್ತತ್ತಿಯಲ್ಲೇ ಕುಂಬಳ ಕಾಯಿ ಹೊಡೆದು ಎಂಡ್ ಆಗಿರೋದು.. ಮತ್ತೊಂದು ಅರ್ಥವೇನು ಗೊತ್ತ.. ಏಕ್ ಲವ್ ಯಾ ಸಿನಿಮಾದಲ್ಲಿ ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತ ಹಾಡೊಂದನ್ನ ಹಾಡ್ತಿದ್ದಾರೆ..

blank

ಜೋಗಿ ಪ್ರೇಮ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಸಿಂಗರ್ ಹನುಮಂತ ಜೊತೆ ಹಾಡುತ್ತಿರೋ ವಿಡಿಯೋ ಈಗ ಸದ್ದು ಮಾಡ್ತಿದೆ.. ಒಟ್ಟಿನಲ್ಲಿ ಪ್ರೇಮ್ಸ್ ಏಕ್ ಲವ್ ಯಾ ಸಿನಿಮಾ ಮ್ಯೂಸಿಕಲಿ ಸೌಂಡ್ ಮಾಡ್ತಿದೆ.

Source: newsfirstlive.com Source link