ಸಂಸದೆ ಸುಮಲತಾ ಹೇಳಿದ್ದು ನಿಜವಾಯ್ತಾ..? ಗಣಿಗಾರಿಕೆ ಸ್ಥಗಿತ ನಂತರವೂ ಕೆಆರ್​ಎಸ್​ ಬಳಿ ಭಾರೀ ಶಬ್ದ

ಸಂಸದೆ ಸುಮಲತಾ ಹೇಳಿದ್ದು ನಿಜವಾಯ್ತಾ..? ಗಣಿಗಾರಿಕೆ ಸ್ಥಗಿತ ನಂತರವೂ ಕೆಆರ್​ಎಸ್​ ಬಳಿ ಭಾರೀ ಶಬ್ದ

ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ಮಧ್ಯೆಯೇ ಬೇಬಿ ಬೆಟ್ಟ, ಚಿನಕುರುಳಿ ವ್ಯಾಪ್ತಿಯ ಹಲವೆಡೆ ಭಾರೀ ಶಬ್ದ ಕೇಳಿಬಂದಿದೆ. ಮಧ್ಯಾಹ್ನ 12:45 ರ ಸುಮಾರಿಗೆ ಇದಕ್ಕಿದ್ದ ಹಾಗೆ ಭಾರೀ ಶಬ್ದ ಕೇಳಿಬಂದಿದೆ. ಇದರಿಂದ ಸ್ಥಳೀಯ ಜನರು ಗಾಬರಿಗೊಂಡಿದ್ದಾರೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಯುದ್ಧ; ಅಮಿತ್ ಶಾ ಭೇಟಿಯಾಗಿ ತನಿಖೆಗೆ ಆಗ್ರಹಿಸಿದ ಸಂಸದೆ

ಗಣಿಗಾರಿಕೆ ಸ್ಥಗಿತಗೊಂಡ ಬಳಿಕವೂ ಶಬ್ದ ಕೇಳಿಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕದ್ದು ಮುಚ್ಚಿ ಗಣಿಗಾರಿಕೆ ನಡೆಯುತ್ತಿದೆಯೇ ಎಂಬ ಗುಮಾನಿ ಶುರುವಾಗಿದೆ. ಯಾವ ಕಾರಣಕ್ಕೆ ಶಬ್ದ ಕೇಳಿಬಂದಿದೆ ಎಂದು ನಿಖರವಾಗಿ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಪಡೆದು ಮಾಹಿತಿ ನೀಡಿತ್ತೇನೆ ಎಂದು ತಹಶಿಲ್ದಾರ್ ಪ್ರಮೋದ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

blank

 

ಇದನ್ನೂ ಓದಿ: ‘ಕೆಆರ್​ಎಸ್​ ಡ್ಯಾಂ ಉಳಿಸಿ’ ಕೇಂದ್ರ ಸಚಿವರಿಗೆ ಸಂಸದೆ ಸುಮಲತಾ ಮನವಿ

ಸುಮಲತಾ ಹಲವು ದಿನಗಳಿಂದಲೂ ಮಂಡ್ಯದ ಕೆಆರ್​ಎಸ್​ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ, ಕೇಂದ್ರ ಸಚಿವರು ಸೇರಿದಂತೆ ಹಲವು ನಾಯಕರಿಗೆ ಅಕ್ರಮ ಗಣಿಗಾರಿಕೆಯನ್ನು ಮಟ್ಟ ಹಾಕುವಂತೆ ಮನವಿಯನ್ನೂ ಮಾಡಿಕೊಂಡಿದ್ದಾರೆ.

Source: newsfirstlive.com Source link