Big Breaking: ಇದೇ ಶನಿವಾರ ಮತ್ತೆ ಶುರುವಾಗ್ತಿದೆ ಬಿಗ್​​ಬಾಸ್; ಯಾರೆಲ್ಲ ಸ್ಪರ್ಧಿಗಳು ಗೊತ್ತಾ?!

Big Breaking: ಇದೇ ಶನಿವಾರ ಮತ್ತೆ ಶುರುವಾಗ್ತಿದೆ ಬಿಗ್​​ಬಾಸ್; ಯಾರೆಲ್ಲ ಸ್ಪರ್ಧಿಗಳು ಗೊತ್ತಾ?!

ಜನ ಮನ ಸೂರೆಗೊಂಡ ಬಿಗ್​​ಬಾಸ್ ಕಾರ್ಯಕ್ರಮ ಮೊನ್ನೆ ತಾನೇ ಮುಕ್ತಾಯವಾಗಿದ್ದು.. ವಿನ್ನರ್ ಮಂಜು ಪಾವಗಡ ಇನ್ನೂ ಆ ಗೆಲುವನ್ನ ಎಂಜಾಯ್​ ಮಾಡ್ತಿದ್ದಾರೆ. ಈ ನಡುವೆ ಬಿಗ್​ ಮನೆ ಮತ್ತೆ ಬ್ಯೂಸಿ ಆಗಿದ್ದು.. ಸ್ಪರ್ಥಿಗಳಿಗಾಗಿ ಸಿದ್ಧವಾಗ್ತಿದೆ. ಹೌದು.. ಇದೇ ಶನಿವಾರ ಬಿಗ್​ ಬಾಸ್​ ಶೋ ಲಾಂಚ್​ ಆಗಲಿದ್ದು, ಕಿಚ್ಚಾ ಸುದೀಪ್ ಅವರೇ ನಿರೂಪಣೆಯನ್ನೂ ಮಾಡಲಿದ್ದಾರೆ. ಜೊತೆಗೆ ವಿನ್ನರ್ ಕೂಡ ಘೋಷಣೆ ಮಾಡಲಾಗುತ್ತೆ.

blank

ಏನೀ ಬಿಗ್​ಬಾಸ್ ವಿಶೇಷ? ಎಷ್ಟು ಜನ ಸ್ಪರ್ಧಿಗಳಿರ್ತಾರೆ?

ಈ ಬಾರಿ ಶುರುವಾಗ್ತಿರೋ ಬಿಗ್​​ಬಾಸ್ ಫುಲ್​ ಫ್ಲೆಡ್ಜ್ ಅಲ್ಲ. ಬದಲಿಗೆ ಇದು ಮಿನಿ ಬಿಗ್​ಬಾಸ್ ಆಗಿದ್ದು.. ಸೀರಿಯಲ್​ ಸ್ಟಾರ್​ಗಳು ಇದ್ರಲ್ಲಿ ಸ್ಪರ್ಧಿಗಳಾಗಿರ್ತಾರೆ. ಬರೋಬ್ಬರಿ 15 ಸ್ಪರ್ಧಿಗಳಿರಲಿದ್ದು, ಇದೇ ತಿಂಗಳ 28ನೇ ತಾರೀಖಿನ ತನಕ ಈ ಕಾರ್ಯಕ್ರಮ ಟೆಲಿಕಾಸ್ಟ್​ ಆಗುತ್ತೆ. ಇನ್ನೂ ವಿಶೇಷ ಅಂದ್ರೆ ಈ ಕಾರ್ಯಕ್ರಮದಲ್ಲೂ ವಾರಾಂತ್ಯದ ಸಂಚಿಕೆಯನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡ್ತಾರೆ. ಇನ್ನು ಪ್ರತಿ ದಿನ ರಾತ್ರಿ 10.30 ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗುತ್ತೆ. ಆದ್ರೆ ಶನಿವಾರ ಮತ್ತು ಭಾನುವಾರ ಮಾತ್ರ ಇದರ ಸಮಯ ಬೇರೆಯಾಗಿರಲಿದೆ. ಹೌದು.. ಶನಿವಾರ ಮತ್ತು ಭಾನುವಾರ ಈ ಮಿನಿ ಬಿಗ್​ಬಾಸ್ ಶೋ ಸಂಜೆ 4 ಗಂಟೆಗೆ ಪ್ರಸಾರವಾಗುತ್ತೆ. ಇದೇ ಮೊದಲ ಬಾರಿಗೆ ಮಿನಿಬಿಗ್​ ಬಾಸ್ ಪ್ರಯೋಗ ಮಾಡಲಾಗುತ್ತಿದ್ದು, ಅಭಿಮಾನಿಗಳಿಗೆ ಥ್ರಿಲ್ ನೀಡಲು ಬಿಗ್​ಬಾಸ್ ತಂಡ ತುದಿಗಾಲ ಮೇಲೆ ನಿಂತಿದೆ.

ಇದನ್ನೂ ಓದಿ:  ‘ನಿಮ್ಗೆಲ್ಲ ಒಂದು ಪ್ರಾಮೀಸ್’ -ಬಿಗ್​​​ಬಾಸ್ ವಿನ್ನರ್​ ಮಂಜು ಪಾವಗಡ ಮೊದಲ ಮಾತು

Source: newsfirstlive.com Source link