ಶಾಸಕರ ಕಾಲಿಗೆರಗಿ ಅಳಲು ತೋಡಿಕೊಂಡ ಉಪನ್ಯಾಸಕ.. ನಡೆದಿದ್ದೇನು..?

ಶಾಸಕರ ಕಾಲಿಗೆರಗಿ ಅಳಲು ತೋಡಿಕೊಂಡ ಉಪನ್ಯಾಸಕ.. ನಡೆದಿದ್ದೇನು..?

ಮಂಡ್ಯ: ಪ್ರಾಂಶುಪಾಲರ ಕಿರಿಕಿರಿ ತಪ್ಪಿಸುವಂತೆ ಕಾಲೇಜು ಉಪನ್ಯಾಸಕನೋರ್ವ ಶಾಸಕರ ಕಾಲಿಗೆ ಬಿದ್ದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಮದ್ದೂರು ಶಾಸಕ ಡಿ.ಸಿ ತಮ್ಮಣ್ಣ ಇಂದು ಕಾಲೇಜಿಗೆ ಭೇಟಿ ನೀಡಿದ್ದ ಸಮಯದಲ್ಲಿ ಕಾಲಿಗೆರಗಿದ ಉಪನ್ಯಾಸಕ ಶಿವಾನಂದ. ಕಾಲೇಜಿನ ಪ್ರಾಂಶುಪಾಲ ಪಾಪಯ್ಯ ಜಾತೀಯತೆ ಮಾಡ್ತಿದ್ದಾರೆ, ಚಿಕ್ಕಪುಟ್ಟ ವಿಚಾರಗಳಿಗೆ ಅಟ್ರಾಸಿಟಿ ಕೇಸ್ ದಾಖಲಿಸ್ತಾರೆ, ಇದರಿಂದ ಹೇಗಾದ್ರೂ ಮಾಡಿ ನಮ್ಮನ್ನ ಪಾರು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:  ಸಂಸದೆ ಸುಮಲತಾ ಹೇಳಿದ್ದು ನಿಜವಾಯ್ತಾ..? ಗಣಿಗಾರಿಕೆ ಸ್ಥಗಿತ ನಂತರವೂ ಕೆಆರ್​ಎಸ್​ ಬಳಿ ಭಾರೀ ಶಬ್ದ

ಕಾಲಿಗೆ ಬಿದ್ದ ಉಪನ್ಯಾಸಕನನ್ನ ಸಂತೈಸಿದ ಶಾಸಕ ಡಿ.ಸಿ.ತಮ್ಮಣ್ಣ ಶಿಕ್ಷಣಕ್ಕೆ ತೊಂದ್ರೆ ಕೊಡೊರನ್ನ ಹೊರಗೆ ಹಾಕ್ತಿನಿ, ಅವರಿಂದ ನನಗೇನು ಲಕ್ಷಾಂತರ ಓಟು ಬರಬೇಕಿಲ್ಲ ನನಗೆ ಅಧಿಕಾರ ಮುಖ್ಯವಲ್ಲ ಎಂದಿದ್ದು, ಸಮಸ್ಯೆಯನ್ನ ಸರಿಯಾಗಿ ಹೇಳಬೇಕಲ್ವಾ ಎಂದು ಉಪನ್ಯಾಸಕನಿಗೆ ಸಾಂತ್ವನ ಹೇಳಿದ್ದಾರೆ..

Source: newsfirstlive.com Source link