ನನಗೆ ಕೆಲಸ ಮಾಡೋದಕ್ಕೆ ಬಿಡ್ತಿಲ್ಲ, ಜಾತಿ ನಿಂದನೆ ಅಂತ ವಿಷ ಸೇವಿಸಿದ ಬಿಲ್​ ಕಲೆಕ್ಟರ್​

ನನಗೆ ಕೆಲಸ ಮಾಡೋದಕ್ಕೆ ಬಿಡ್ತಿಲ್ಲ, ಜಾತಿ ನಿಂದನೆ ಅಂತ ವಿಷ ಸೇವಿಸಿದ ಬಿಲ್​ ಕಲೆಕ್ಟರ್​

ಬಳ್ಳಾರಿ: ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ನಂಗೆ ಕೆಲ್ಸಾ ಮಾಡೋಕೆ ಬಿಡ್ತಿಲ್ಲ, ಜಾತಿ ನಿಂದನೆ ಮಾಡ್ತಿದ್ದಾರೆ ಅಂತ ಬಿಲ್​ ಕಲೆಕ್ಟರ್​ಹೆಚ್​ ಶಿವಪ್ಪ ಕಣ್ಣೀರು ಹಾಕಿದ್ದಾರೆ.

ಜಾತಿ ನಿಂದನೆ‌‌ ಮಾಡ್ತಿದ್ದಾರೆ ಅಂತಾ ಕಣ್ಣೀರು ಹಾಕಿರೋ ವಿಡಿಯೋವನ್ನ ಸಾಮಾಜಿ ಜಾಲತಾಣದಲ್ಲಿ ವಿಡಿಯೋ ಹರಿ ಬಿಟ್ಟು ವಿಷ ಸೇವಿಸಿರೋ ಘಟನೆ ಕಂಪ್ಲಿ ತಾಲೂಕಿನ ಮೇಟ್ರಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಆಗಿರೋ ಶಿವಪ್ಪ ತನಗೆ ಅಧ್ಯಕ್ಷರು, ಸದಸ್ಯರು ಜಾತಿ ನಿಂದನೆ ಮಾಡ್ತಿದ್ದಾರೆ. ಕೆಲ್ಸಾ ಮಾಡೋಕೆ ಬಿಡ್ತಿಲ್ಲ, ನಾನು ಸಾಯೋದಕ್ಕೆ  ಗಿರಿ, ಜರಿಗೌಡ, ಚಿದಾನಂದಪ್ಪ ಸದಸ್ಯರೇ ಕಾರಣ ಅಂತ ವಿಡಿಯೋ ಮಾಡಿದ್ದಾರೆ. ಈ ಘಟನೆ ಎರಡು ದಿನದ ಹಿಂದೆ ನಡೆದಿದದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ, ಶಿವಪ್ಪ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Source: newsfirstlive.com Source link