ವಿಷ ಸೇವಿಸಿ ‘ಅಯ್ಯೋ ನನ್ನ ಬದುಕಿಸಿ’ ಅಂತ ಬಂದವನಿಂದ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ

ವಿಷ ಸೇವಿಸಿ ‘ಅಯ್ಯೋ ನನ್ನ ಬದುಕಿಸಿ’ ಅಂತ ಬಂದವನಿಂದ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ

ಶಿವಮೊಗ್ಗ: ಡಿ ದರ್ಜೆ ನೌಕರನ ಮೇಲೆ ರೋಗಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಸಾಗರದ ಉಪ ವಿಭಾಗದ ಆಸ್ಪತ್ರೆಯಲ್ಲಿ ನಡೆದಿದೆ.

ತಾಲೂಕಿನ ಕಾರ್ಗಲ್ ನಿವಾಸಿ ಮಂಜುನಾಥ ಎಂಬ ಯುವಕ ವಿಷ ಸೇವಿಸಿದ್ದು , ಸಾಗರ ಉಪ ವಿಭಾಗದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆಸ್ಪತ್ರೆಗೆ ಆಗಮಿಸಿದ ರೋಗಿಗೆ ಆಸ್ಪತ್ರೆಯ ತುರ್ತು ಘಟಕದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ರೋಗಿ ಡಿ ದರ್ಜೆ ನೌಕರ ಮಧು ಎನ್ನುವವರ ಮೇಲೆ ಅಲ್ಲೇಯಿದ್ದ ಚೇರ್ ತೆಗೆದುಕೊಂಡು ಹಲ್ಲೆ ನಡೆಸಿದ್ದಾನೆ. ತುರ್ತು ಘಟಕದಲ್ಲಿರುವ ಶೌಚಾಲಯದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಿ ವಿಷವನ್ನು ತೆಗಿಯಲು ವಾಮಿಟ್ ಮಾಡಲು ಮಧು ರೋಗಿಗೆ ತಿಳಿಸಿದ್ದಾರೆ. ಆದರೆ ರೋಗಿ ಶೌಚಾಲಯದಲ್ಲಿ ಇದ್ದ ಕಬ್ಬಿಣದ ಚೇರ್ ಎತ್ತುಕೊಂಡು ಏಕಾಏಕಿ ಮಧು ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಹೇಳಲಾಗ್ತಿದೆ. ಸದ್ಯ ಮಧುರವರಿಗೆ ಬಲವಾದ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Source: newsfirstlive.com Source link