‘ಅವರ ಆಸಕ್ತಿಗೆ ತಕ್ಕ ಹಾಗೆ ಹುಕ್ಕಾ ಬಾರ್ ನೆನಪಾಗಿದೆ’- ಸಿ.ಟಿ. ರವಿಗೆ ಸಿದ್ದರಾಮಯ್ಯ ತಿರುಗುಬಾಣ

‘ಅವರ ಆಸಕ್ತಿಗೆ ತಕ್ಕ ಹಾಗೆ ಹುಕ್ಕಾ ಬಾರ್ ನೆನಪಾಗಿದೆ’- ಸಿ.ಟಿ. ರವಿಗೆ ಸಿದ್ದರಾಮಯ್ಯ ತಿರುಗುಬಾಣ

ಬೆಂಗಳೂರು: ಇಂದಿರಾ ಕ್ಯಾಂಟೀನ್ ವಿಚಾರವಾಗಿ ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಕಾಂಗ್ರೆಸ್​ನವರು ಬೇಕಿದ್ದರೆ ಅವರ ಕಚೇರಿಯಲ್ಲಿ ನೆಹರೂ ಹುಕ್ಕಾ-ಬಾರ್ ತೆರೆಯಲಿ ಯಾರು ಬೇಡ ಅಂದೋರು ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ.. ಯಾರಿಗೆ ಏನು ಪ್ರಿಯವೋ ಅದೇ ನೆನಪಾಗುತ್ತೆ. ಸಿ ಟಿ ರವಿ ಅವರಿಗೆ ಅವರ ಆಸಕ್ತಿ ಸಂಸ್ಕೃತಿಗೆ ತಕ್ಕ ಹಾಗೆ ಬಾರ್-ಹುಕ್ಕಾಬಾರ್ ನೆನಪಾಗಿದೆ. ಸಿಎಂ ಬೊಮ್ಮಾಯಿಯವರು ಅವರನ್ನು ಅಬಕಾರಿ ಸಚಿವರಾಗಿ ಮಾಡಿ ಅವರ ಆಸೆ ಈಡೇರಿಸಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.

ಮುಂದುವರೆದು..ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ಗಳು ಬಿಜೆಪಿ ನಾಯಕರ ಕಣ್ಣು ಕುಕ್ಕುತ್ತಿರುವುದು ಯಾಕೆ.? ಅನ್ನಭಾಗ್ಯದ ಅಕ್ಕಿ ಕಡಿಮೆ ಮಾಡಿದಿರಿ, ಇಂದಿರಾ ಕ್ಯಾಂಟೀನ್ ಮುಚ್ಚಲು ನೋಡಿದಿರಿ. ಈಗ ಹೆಸರಿನ ವಿವಾದ. ಇವರ ಕೋಪ ನೆಹರೂ- ಇಂದಿರಾಗಾಂಧಿ ಮೇಲೆಯೋ..? ಈ ಯೋಜನೆಗಳ ಫಲಾನುಭವಿಗಳಾದ ಬಡವರ ಮೇಲೆಯೋ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Source: newsfirstlive.com Source link