ಸತೀಶ್ ರೆಡ್ಡಿ ಕಾರ್​ಗೆ ಬೆಂಕಿ; ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು

ಸತೀಶ್ ರೆಡ್ಡಿ ಕಾರ್​ಗೆ ಬೆಂಕಿ; ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು 25 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದು ಇಬ್ಬರನ್ನ ವಶಕ್ಕೆ ಪಡದುಕೊಂಡಿದ್ದಾರೆ.

ಅಜ್ಞಾತ ಸ್ಥಳದಲ್ಲಿ ಬೊಮ್ಮನಹಳ್ಳಿ ಪೊಲೀಸರು ಘಟನೆ ನಡೆದ ಸಂದರ್ಭದಲ್ಲಿ ಟವರ್ ಲೋಕೇಶನ್ ನಲ್ಲಿ ಇದ್ದವರ ವಿಚಾರಣೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯ ಮತ್ತು ಸ್ಥಳಿಯರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಆರೋಪಿಗಳನ್ನ ಸದ್ಯ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಸಂಜೆ ಶಾಸಕ ಎಂ ಸತೀಶ್ ರೆಡ್ಡಿ ಮನೆಯ ಬಳಿ ಸಚಿವ ಆರ್.ಅಶೋಕ್ ಹೇಳಿಕೆ ನೀಡಿ.. ದುಷ್ಕರ್ಮಿಗಳು ಎರಡು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಯಾರು ಮಾಡಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ. ರಾತ್ರಿ ಹತ್ತು ಘಂಟೆಯ ಒಳಗೆ ಬಂಧಿಸಲು ಸೂಚಿಸಿದ್ದೇನೆ. ಅಖಂಡ ಶ್ರೀನಿವಾಸ್ ಮೂರ್ತಿ‌ ಮನೆ ಮೇಲೂ ದಾಳಿ‌ಮಾಡಲಾಗಿತ್ತು. ಸತೀಶ್ ರೆಡ್ಡಿ ಹುಟ್ಟಿ ಬೆಳೆದ ಜಾಗದಲ್ಲಿ ಮಾಡಿದ್ದಾರೆ. ನಾಲ್ಕು ತಂಡದಿಂದ ಹುಡುಕಾಟ ನಡೆದಿದೆ. ಬೆಂಗಳೂರಿನಲ್ಲಿ ಇಂತಹ ಘಟನೆ ನಡೆದರೆ ಸುಮ್ಮನಿರಲು ಸಾಧ್ಯವಿಲ್ಲ. ಗಾಂಜಾ ಹೊಡೆದು ರಸ್ತೆಯಲ್ಲಿ ಹೊಡೆದಾಡುವವರಿಗೆ ಬುದ್ದಿ ಕಲಿಸುತ್ತೇವೆ. ಮೂರು ಜನ ನೇರವಾಗಿ ಭಾಗಿಯಾಗಿದ್ದಾರೆ. ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ತಂದಿರುವವರೇ ಮಾಡಿದ್ದಾರೆ. ಪಾತಾಳದಲ್ಲಿದ್ದರೂ ಅವರನ್ನು ಬಿಡುವ ಪ್ರಶ್ನೆ ಇಲ್ಲ ಎಂದಿದ್ದರು.

Source: newsfirstlive.com Source link