ಟೈಟು ಟೈಟು ಫುಲ್ಲು ಟೈಟು.. ATM ದರೋಡೆ ಮಾಡಲು ಹೋಗಿ ಮಷಿನ್-ಗೋಡೆ ಮಧ್ಯೆ ಸಿಕ್ಕಿಬಿದ್ದ

ಟೈಟು ಟೈಟು ಫುಲ್ಲು ಟೈಟು.. ATM ದರೋಡೆ ಮಾಡಲು ಹೋಗಿ ಮಷಿನ್-ಗೋಡೆ ಮಧ್ಯೆ ಸಿಕ್ಕಿಬಿದ್ದ

ಚೆನ್ನೈ: ದರೋಡೆಗೆಂದು ಎಟಿಎಂಗೆ ನುಗ್ಗಿದ್ದ ಕಳ್ಳನೊಬ್ಬನಿಗೆ ಎಟಿಎಂ ಮಷಿನ್ ಒಡೆಯಲು ಸಾಧ್ಯವಾಗದೇ, ಮಷಿನ್​ ಹಾಗೂ ಗೋಡೆಯ ಮಧ್ಯೆ ಸಿಕ್ಕಾಕಿಕೊಂಡ ಘಟನೆ ನಡೆದಿದೆ.

ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಕಳ್ಳ ಒದ್ದಾಡಿರೋ ವಿಡಿಯೋ ಸೆರೆಯಾಗಿದ್ದು ಫುಲ್​ ವೈರಲ್​ ಆಗಿದೆ. 28 ವರ್ಷದ ಉಪೇಂದ್ರ ರಾಯ್ ಎಂಬ ಬಿಹಾರ ಮೂಲದ ಕಳ್ಳ ಎಟಿಎಂ ದರೋಡೆ ಮಾಡಲು ಬಂದು ಸಿಕ್ಕಿಹಾಕಿಕೊಂಡಿದ್ದಾನೆ. ಕಂಠಪೂರ್ತಿ ಕುಡಿದಿದ್ದ ಉಪೇಂದ್ರ ರಾಯ್​ ಎಟಿಎಂ ಒಡೆದು ದರೋಡೆ ಮಾಡಲು ಹೋಗಿದ್ದ. ಆದರೆ, ಅಲ್ಲಿ ತಾನೇನು ಮಾಡುತ್ತಿದ್ದೇನೆ ಎಂದು ಗೊತ್ತಾಗದಷ್ಟು ಅಮಲಿನಲ್ಲಿದ್ದ. ಎಟಿಎಂ ಮಷಿನ್ ಹಿಂದೆ ಹೋಗಿ ನಿಂತ ಕಳ್ಳ ಗೋಡೆಯ ಬಳಿ ಸಿಕ್ಕಿಹಾಕಿಕೊಂಡಿದ್ದಾನೆ. ಕುಡಿದು ಕೆಳಗೆ ಬೀಳುವಂತಾಗಿದ್ದರಿಂದ ಆತನಿಗೆ ಅಲ್ಲಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಅಲ್ಲಿಂದಲೇ ಎಟಿಎಂ ಒಡೆದು ಆತ ಹಣ ದೋಚಲು ಮುಂದಾಗಿದ್ದ. ಆ ಶಬ್ದ ಕೇಳಿದ ಪಕ್ಕದ ಮನೆಯವರು ಪೊಲೀಸರಿಗೆ ತಕ್ಷಣ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಎಟಿಎಂ ಸೆಂಟರ್​ನಲ್ಲಿ ಸಿಕ್ಕಿಬಿದ್ದಿದ್ದ ಕಳ್ಳನನ್ನು ಅಲ್ಲಿಂದ ಬಿಡಿಸಿ ವಶಕ್ಕೆ ಪಡೆದಿದ್ದಾರೆ. ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಕಳ್ಳತನ ಮಾಡಲು ಹೋದ ದರೋಡೆಕೋರ ತಾನೇ ತಾನಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

Source: newsfirstlive.com Source link