ಮಾಡಿದ ತ್ಯಾಗಕ್ಕೆ ಆನಂದ್​ ಸಿಂಗ್ ಕೇಳ್ತಿದ್ದಾರೆ ಕಮಾಯಿ! ಸವಾಲನ್ನ ಹೇಗೆ ನಿಭಾಯಿಸ್ತಿದ್ದಾರೆ ಬೊಮ್ಮಾಯಿ‌..?

ಮಾಡಿದ ತ್ಯಾಗಕ್ಕೆ ಆನಂದ್​ ಸಿಂಗ್ ಕೇಳ್ತಿದ್ದಾರೆ ಕಮಾಯಿ! ಸವಾಲನ್ನ ಹೇಗೆ ನಿಭಾಯಿಸ್ತಿದ್ದಾರೆ ಬೊಮ್ಮಾಯಿ‌..?

ಮುಖ್ಯಮಂತ್ರಿಯಾಗಿದ್ದು ದೊಡ್ಡ ಸವಾಲಲ್ಲ, ಮಂತ್ರಿ ಮಂಡಲ ರಚನೆ ಮಾಡಿದ್ದೂ ಸಹ ಮಹಾ ಸಮಸ್ಯೆ ಅಲ್ಲ. ಆದರೆ ಬೊಮ್ಮಾಯಿ‌ ಪಾಲಿಗೆ ಅಸಲೀ‌ ಸವಾಲು ಎದುರಾಗಿರೋದೇ ಈಗ. ಆನಂದ್ ಸಿಂಗ್ ಉರುಳಿಸಿದ ದಾಳಕ್ಕೆ ಉತ್ತರ ಕಂಡುಕೊಳ್ಳದಿದ್ದರೆ ಬೊಮ್ಮಾಯಿ‌ ಸರ್ಕಾರ ಮೊದಲ ಪೆಟ್ಟು ತಿಂದಂತಾಗಲಿದೆ.

ಇದನ್ನೂ ಓದಿ: ನನ್ನ ರಾಜಕೀಯ ಜೀವನ ಶುರುವಾಗಿದ್ದು ಇಲ್ಲಿ, ಇಲ್ಲಿಂದಲೇ ಅಂತ್ಯವಾಗಬಹುದು -ಆನಂದ್ ಸಿಂಗ್

ಆನಂದ್ ಸಿಂಗ್ ರಾಜೀನಾಮೆ ಕೊಟ್ಟರೆ ಬೊಮ್ಮಾಯಿ ಸರ್ಕಾರದ ಪಾಲಿಗೆ ಭರಿಸಲಾಗದ ಮುಜುಗರವಾಗಲಿದ್ದು ಅಸಲೀ‌ ಸವಾಲ್ ಎದುರಿಸಲು ಮುಖ್ಯಮಂತ್ರಿ ಬೊಮ್ಮಾಯಿ ಕೈಲಾದ ಎಲ್ಲಾ ಪ್ರಯತ್ನ ಮಾಡಿದ್ದಾರೆ. ಮಾತುಕತೆಯ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೊಮ್ಮಾಯಿ ಮುಂದಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಸಂಘ ಪರಿವಾರದ ಮುಖಂಡರು ಹಾಗೂ ಪಕ್ಷದ ವರಿಷ್ಠರ ಜೊತೆಗೆ ಏಕ ಕಾಲಕ್ಕೆ ಬೊಮ್ಮಾಯಿ ಮಾತನಾಡಿದ್ದಾರೆ ಎನ್ನಲಾಗಿದೆ.

blank

ಯಡಿಯೂರಪ್ಪ ಜೊತೆ ಬೊಮ್ಮಾಯಿ‌ ಬಾತ್: ನೀವು ಮುಂದೆ ನಿಂತು ಮಾತನಾಡಿ ನಿಭಾಯಿಸಿದರೆ ಮಾತ್ರ ಆನಂದ್ ಸಿಂಗ್ ಸಮಸ್ಯೆ ಇತ್ಯರ್ಥ ಸಾಧ್ಯ, ನೀವೇ ಆನಂದ್ ಸಿಂಗ್ ಕರೆಸಿ ಮಾತನಾಡಿ ಎಂದಿದ್ದಾರಂತೆ.

ಸಂಘದ ಪ್ರಮುಖರ ಜೊತೆ ಬೊಮ್ಮಾಯಿ‌ ಬಾತ್: ಸಂಘದ ರೀತಿ ನೀತಿಗೆ ಚ್ಯುತಿ ಬಾರದಂತೆ ಹಾಗೂ ಸಂಪುಟದ ವಿಚಾರದಲ್ಲಿ ನಿಮ್ಮ ತೀರ್ಮಾನಗಳಿಗೆ ಭಂಗವಾಗದಂತೆಯೇ ಆನಂದ್ ಸಿಂಗ್ ಪ್ರಕರಣ ನಿಭಾಯಿಸುವೆ, ಆದರೆ ನಿಮ್ಮ‌ ಪೂರ್ಣ ಸಹಕಾರ ಬೇಕು ಎಂದು‌ ಮನವಿ ಮಾಡಿದ್ದಾರಂತೆ.

ಇದನ್ನೂ ಓದಿ: ಬಿಜೆಪಿಗೆ ಬಿಸಿ ತುಪ್ಪ ಆದ್ರ ಆನಂದ್ ಸಿಂಗ್? ಸಚಿವ ಸ್ಥಾನಕ್ಕೆ ರಾಜೀನಾಮೆಯ ತಂತ್ರಗಾರಿಕೆ?

ಹೈಕಮಾಂಡ್ ನಾಯಕರ ಜೊತೆ ಬೊಮ್ಮಾಯಿ‌ ಬಾತ್ : ಪಕ್ಷದ ಹೈಕಮಾಂಡ್​ನ ಪಾಲಿಸಿ ಮ್ಯಾಟರ್​ಗೆ ಧಕ್ಕೆಯಾಗದಂತೆ ಹಾಗೂ ಯಾವುದೇ ರೀತಿಯ ತಪ್ಪು ಸಂದೇಶ ರವಾನೆ ಆಗದಂತೆ ಆನಂದ್ ಸಿಂಗ್ ಪ್ರಕರಣ ನಿಭಾಯಿಸುವೆ. ಅಂತಿಮ ನಿರ್ಧಾರಕ್ಕೆ ನಿಮಗೆ ವರದಿ ಕಳುಹಿಸುವೆ ಎಂದು ಹೇಳಿದ್ದಾರಂತೆ.

ಹೀಗೆ ಮಾತಿನ ಮೂಲಕವೇ ಮೂರೂ ಅಧಿಕಾರದ ಕೇಂದ್ರಗಳ ನಿಭಾಯಿಸುತ್ತ, ಇತ್ತ ಆನಂದ್ ಸಿಂಗ್ ರನ್ನೂ ಅದೇ ಮಾತಿನ ಮೂಲಕ ಸಂಭಾಳಿಸಲು ಮುಂದಾಗಿರೋ ಸಿಎಂ ಮಾತಿನ‌ ಆಯುಧ ಗೆಲ್ಲಿಸುತ್ತಾ ಮೊದಲ ಅಸಲೀ ಯುದ್ಧ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

Source: newsfirstlive.com Source link