ಎರಡೇ ವಾರದ ಮರಿ.. 6 ಅಡಿ ಎತ್ತರ.. 70 ಕೆ.ಜಿ. ತೂಕ.. ಜಗತ್ತನ್ನೇ ನಿಬ್ಬೆರಗಾಗಿಸಿದ ಡಾಲಿ

ಎರಡೇ ವಾರದ ಮರಿ.. 6 ಅಡಿ ಎತ್ತರ.. 70 ಕೆ.ಜಿ. ತೂಕ.. ಜಗತ್ತನ್ನೇ ನಿಬ್ಬೆರಗಾಗಿಸಿದ ಡಾಲಿ

ಮನುಷ್ಯರಿಗೆ ಪ್ರಾಣಿಗಳು ಅಂದ್ರೆ ಸ್ವಲ್ಪ ಪ್ರೀತಿ ಜಾಸ್ತಿನೇ ಇರುತ್ತೆ. ಮುದ್​ ಮಾಡೋದು, ಪ್ರೀತಿ ಮಾಡೋದು, ತಬ್ಕೊಳ್ಳೋದು ಇವೆಲ್ಲಾ ಪ್ರಾಣಿಗಳಿಗೂ ಇಷ್ಟ!. ಸುಮ್ನೆ ಅಲ್ಲ ಪ್ರಾಣಿಗಳು ಅಂದ್ರೆ. ಅವುಗಳಿಗೂ ಮನುಷ್ಯರು ಅಂದ್ರೆ ಒಂದು ಬಾಂಧವ್ಯವಿರುತ್ತೆ. ಅದ್ರಲ್ಲೂ, ಈ ರೀತಿ ಸಾಕು ಪ್ರಾಣಿಗಳಿಗೆ ಮಾಡ್ತೀವಿ. ಆದ್ರೆ, ಸಾಕು ಪ್ರಾಣಿಗಳನ್ನ ಬಿಟ್ಟು ಬೇರೆ ಪ್ರಾಣಿಗಳನ್ನ ನಾವು ಮುಟ್ಟೋದಕ್ಕೂ ಹೆದರ್ತೀವಿ. ಹಾಗಾಗಿ, ಅಂಥ ಪ್ರಾಣಿಯನ್ನ ನಾವು ದೂರದಿಂದ ನೋಡಿ ಮುದ್ದಾಡ್ತೀವಿ. ಇಂಥ ಲಿಸ್ಟ್​ಗೆ ಸೇರೋದು, ಜಿರಾಫೆ. ಹೌದು ಅಷ್ಟ್​ ಎತ್ತರಕ್ಕಿರೋ ಈ ಪ್ರಾಣಿಯನ್ನ ನಾವು ಮುದ್ದಾಡೋದಕ್ಕೆ ಹೆದರ್ತೀವಿ. ಆದ್ರೆ ಈಗ ಈ ಸ್ಟೋರಿನಲ್ಲಿರೋ ಜಿರಾಫೆ ನೋಡಿದ್ರೆ ಖಂಡಿತಾ ನಿಮಗೆ ಮುದ್ದಾಡ್ಬೇಕು ಅಂತ ಅನ್ಸುತ್ತೆ.

blank

ಜಿರಾಫೆ ಹುಟ್ಟಿದಾಗ ಗಿಡ್ಡವಾಗಿದ್ದು ಬೆಳೆದ ಮೇಲೆ ದೊಡ್ಡದಾಗುತ್ತೆ. ಆದ್ರೆ, ಅಮೆರಿಕಾದಲ್ಲಿ, ಎರಡು ವಾರದ ಹಿಂದೆ ಹುಟ್ಟಿದ ಹೆಣ್ಣು ಜಿರಾಫೆ ಡಾಲಿ ಆಗ್ಲೇ 6 ಅಡಿ ಎತ್ತರವಿದ್ದು, 70 ಕೆಜಿಯಷ್ಟು ತೂಕವನ್ನ ಹೊಂದಿದೆ. ಸಾಮಾನ್ಯವಾಗಿ ಗಂಡು ಜಿರಾಫೆ 4 ವರ್ಷಕ್ಕೆ 6 ಅಡಿಗೆ ಬೆಳೆದು 1,930 ಕೆಜಿಯಷ್ಟು ತೂಕವಿರುತ್ತೆ, ಹಾಗೆ ಹೆಣ್ಣು ಜಿರಾಫೆ 1,860 ಕೆಜಿಯಷ್ಟು ತೂಕವಿರುತ್ತೆ. ಆದ್ರೀಗ, ಎರಡೇ ವಾರದಲ್ಲಿ ಈ ಮರಿ ಜಿರಾಫೆ ಬರೋಬ್ಬರಿ 70ಕೆಜಿ ತೂಕವಿದ್ದು, 6 ಅಡಿ ಎತ್ತರ ಬೆಳೆದಿದ್ದು ಇಡೀ ಜಗತ್ತೆ ಆಶ್ಚರ್ಯ ಪಡುವಂತೆ ಮಾಡಿದೆ.

blank

Source: newsfirstlive.com Source link