ಫುಟ್​ಬಾಲ್​ ಫೀಲ್ಡ್​ನಲ್ಲಿ ನಡೀತು ಅಮ್ಮ ಮಗನ ರೇಸ್.. ಮುಗ್ಗರಿಸಿದ ತಾಯಿ

ಫುಟ್​ಬಾಲ್​ ಫೀಲ್ಡ್​ನಲ್ಲಿ ನಡೀತು ಅಮ್ಮ ಮಗನ ರೇಸ್.. ಮುಗ್ಗರಿಸಿದ ತಾಯಿ

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಡಿಯೋ, ಫೋಟೋ, ಸುದ್ದಿಗಳು ವೈರಲ್​ ಆಗ್ತಾನೇಯಿರುತ್ತೆ. ಸಾಮಾಜಿಕ ಜಾಲತಾಣ ಅನ್ನೋ ಆಳ ಸಮುದ್ರದಲ್ಲಿ ಅದೆಷ್ಟೋ ಜನ ಮುಳುಗಿ ಎದ್ದು ಬಂದಿರ್ತಾರೆ. ಒಂದಲ್ಲ ಒಂದು ಸುದ್ದಿಯಾಗ್ತಾನೇಯಿರುತ್ತೆ. ಅದೇ ರೀತಿ, ಇದೀಗ, ತಾಯಿಯೊಬ್ಬಳು ತನ್ನ ಎರಡು ವರ್ಷದ ಮಗುವನ್ನ ಹಿಂಬದಿಯಿಂದ ಅಟ್ಟಾಡಿಸಿ ಹಿಡಿಯೋದಕ್ಕೆ ಅಂತ ಓಡಿರೋ ವಿಡಿಯೋ ವೈರಲ್​ ಆಗ್ತಾಯಿದೆ.

ಹೌದು, ಸಿನ್​ಸಿನಾಟಿ ಫುಟ್​ಬಾಲ್​ ಮ್ಯಾಚ್​ ವೇಳೆ, ಎರಡು ವರ್ಷ ಬಾಲಕ, ಪಿಚ್​ ದಾಟಿ, ಆಟಗಾರರ ಬಳಿ ಓಡಿ ಹೋಗಲು ಯತ್ನಿಸ್ತಾನೆ. ಇದನ್ನ ಗಮನಿಸಿದ ತಾಯಿ, ಅಯ್ಯೋ ನನ್ನ ಮಗು ಆಟಗಾರರ ಬಳಿ ಹೋಗ್ತಿದೆ ಅಂತ ಹಿಂಬದಿಯಿಂದ ಬಿರ ಬಿರನೇ ಓಡಿ ಮಗುವನ್ನ ಹಿಡಿಯಲು ಹೋಗ್ತಾರೆ. ಈ ವೇಳೆ, ಮಗು, ತಾಯಿ ಓಡಿ ಬರೋದನ್ನ ನೋಡಿ, ತಾನು ಇನ್ನೂ ಬೇಗ ಓಡಲು ಶುರು ಮಾಡ್ತಾನೆ, ಆದ್ರೆ ತಾಯಿ ಹಿಡಿದ, ಮಗುವನ್ನ ಎತ್ತಿ ಇನ್ನೂ ಫಾಸ್ಟಾಗಿ ಓಡಿ ಬಂದು ತನ್ನ ಸೀಟಲ್ಲಿ ಕೂತು ಮ್ಯಾಚ್​ ನೋಡಲು ಮುಂದುವರೆಯುತ್ತಾಳೆ.

Source: newsfirstlive.com Source link