ತಾಲಿಬಾನಿಗಳ ಅಟ್ಟಹಾಸ; ‘ನನ್ನ ದೇಶ ಉಳಿಸಿಕೊಡಿ’ ಎಂದು ಆಫ್ಘನ್ ಕ್ರಿಕೆಟರ್ ಮನವಿ

ತಾಲಿಬಾನಿಗಳ ಅಟ್ಟಹಾಸ; ‘ನನ್ನ ದೇಶ ಉಳಿಸಿಕೊಡಿ’ ಎಂದು ಆಫ್ಘನ್ ಕ್ರಿಕೆಟರ್ ಮನವಿ

ಅಫ್ಘಾನಿಸ್ತಾನದ ಬಹುತೇಕ ಭಾಗವನ್ನು ತಾಲಿಬಾನ್​ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ತಾಲಿಬಾನ್​ ಕಿರುಕುಳ ತಾಳಲಾರದೇ ಅನೇಕರು ತಮ್ಮ ನೆಲವನ್ನು ತೊರೆದು ಬೇರೆ ಬೇರೆ ಪ್ರದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಆಫ್ಘಾನ್​ ಕ್ರಿಕೆಟಿಗ ರಶೀದ್​ ಖಾನ್​, ಜನರನ್ನು ಗೊಂದಲದಲ್ಲಿ ಬಿಡಬೇಡಿ ಎನ್ನುವ ಮೂಲಕ ವಿಶ್ವ ನಾಯಕರ ನೆರವನ್ನು ಕೋರಿದ್ದಾರೆ.

ಈ ಬಗ್ಗೆ ಟ್ವಿಟರ್​ನಲ್ಲಿ ಮನವಿ ಮಾಡಿರುವ ರಶೀದ್ ಖಾನ್,  ಪ್ರೀತಿಯ ವಿಶ್ವ ನಾಯಕರೇ, ನನ್ನ ದೇಶ ಗೊಂದಲದಲ್ಲಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಅಮಾಯಕ ಜನರು ಪ್ರತಿದಿನ ಹುತಾತ್ಮರಾಗುತ್ತಿದ್ದಾರೆ. ಮನೆಗಳು, ಆಸ್ತಿಗಳು ಸರ್ವನಾಶವಾಗುತ್ತಿವೆ. ಸಾವಿರಾರು ಕುಟುಂಬ ಸ್ಥಳಾಂತರವಾಗಿದೆ. ನಮ್ಮನ್ನು ಗೊಂದಲದಲ್ಲಿ ಬಿಡಬೇಡಿ. ಆಫ್ಘಾನ್ನರನ್ನು ಕೊಲ್ಲುವುದನ್ನು ಹಾಗೂ ಅಫ್ಘಾನಿಸ್ತಾನದ ಧ್ವಜ ನಾಶಮಾಡುವುದನ್ನು ತಡೆಯಿರಿ. ನಮಗೆ ಶಾಂತಿ ಬೇಕಿದೆ. ಅದನ್ನು ದೊರಕಿಸಿ ಕೊಡಿ ಎಂದು ಟ್ವೀಟ್​​ ಮೂಲಕ ಜಾಗತಿಕ ಮುಖಂಡರಲ್ಲಿ ರಶೀದ್​ ಮನವಿ ಮಾಡಿದ್ದಾರೆ.

Source: newsfirstlive.com Source link