ಗಾಂಜಾ ಮಾರಾಟ ಆರೋಪ; ಇಬ್ಬರು BMTC ಸಿಬ್ಬಂದಿ ಅರೆಸ್ಟ್​

ಗಾಂಜಾ ಮಾರಾಟ ಆರೋಪ; ಇಬ್ಬರು BMTC ಸಿಬ್ಬಂದಿ ಅರೆಸ್ಟ್​

ಬೆಂಗಳೂರು: ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಗಾಂಜಾ ತಂದು ಮಾರಾಟ ಮಾಡ್ತಿದ್ದ ಆರೋಪದ ಮೇಲೆ ಇಬ್ಬರು ಬಿಎಂಟಿಸಿ ಸಿಬ್ಬಂದಿಯನ್ನ ಕೆಂಗೇರಿಯಲ್ಲಿ ಬಂಧಿಸಲಾಗಿದೆ.

ವಿಠ್ಠಲ್ ಭಜಂತ್ರಿ ಮತ್ತು ಶರಣಬಸಪ್ಪ ಬಂಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು. ಇವರು  ಬಿಎಂಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡ್ತಿದ್ದರು ಎನ್ನಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಇವರು ಕಳೆದ ಮೂರು ವರ್ಷಗಳಿಂದ ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದರು ಅಂತಾ ಹೇಳಲಾಗಿದೆ.

ಸರ್ಕಾರಿ ಬಸ್​ಗಳಲ್ಲಿ ಮುಕ್ತ ಓಡಾಟಕ್ಕೆ ಅವಕಾಶ ಇಲ್ಲದ, ಹಿನ್ನೆಲೆ ದುರ್ಬಳಕೆ ಮಾಡಿ‌ ಕೃತ್ಯ ಎಸೆಗುತ್ತಿದ್ದರು. ಸದ್ಯ, ಬಂಧಿತ ಆರೋಪಿಗಳಿಂದ 9.800 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ. ವಿಜಯಪುರ ಮತ್ತು ಕಲಬುರಗಿಯಿಂದ ಗಾಂಜಾ ತಂದು ಕೆ.ಜಿ ಗೆ 40-50 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ,  ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನ ಎನ್​ಡಿಪಿಎಸ್ ಌಕ್ಟ್ ಅಡಿ ಕೇಸ್ ದಾಖಲು ಮಾಡಲಾಗಿದೆ.

Source: newsfirstlive.com Source link