ಚೀನಾದಲ್ಲಿ ಹೆಚ್ಚಾಯ್ತು ಕೊರೊನಾ: ದಿನಕ್ಕೆ 3 ಬಾರಿ ಬಾಗಿಲು ತೆರೆದ್ರೆ ಇಡೀ ಮನೆಯೇ ಲಾಕ್

ಚೀನಾದಲ್ಲಿ ಹೆಚ್ಚಾಯ್ತು ಕೊರೊನಾ: ದಿನಕ್ಕೆ 3 ಬಾರಿ ಬಾಗಿಲು ತೆರೆದ್ರೆ ಇಡೀ ಮನೆಯೇ ಲಾಕ್

ಚೀನಾದಲ್ಲಿ ಡೆಲ್ಟಾ ವೇರಿಯಂಟ್ ಕೊರೊನಾ ಕೇಸ್​ಗಳು ಹೆಚ್ಚಾಗಿರುವ ಮಧ್ಯೆಯೂ ವ್ಯಕ್ತಿಯೋರ್ವ ಮನೆಯಿಂದ ಹೊರಬಂದು ರಸ್ತೆಯಲ್ಲಿ ನಿಂತು ವಿಚಿತ್ರವಾಗಿ ಡ್ಯಾನ್ಸ್ ಮಾಡುತ್ತಿದ್ದ. ಅಲ್ಲಿಗೆ ಬಂದ ಅಧಿಕಾರಿಗಳು ವ್ಯಕ್ತಿಯನ್ನ ಮನೆಯೊಳಗೆ ಕಳುಹಿಸಿ ಆತ ಮತ್ತೆ ಮನೆಯಿಂದ ಹೊರಬಾರದ ಹಾಗೆ ಮನೆಯ ಬಾಗಿಲಿಗೆ ಕಬ್ಬಿಣದ ಸರಳುಗಳನ್ನು ಹೊಡೆದಿರುವ ಘಟನೆ ನಡೆದಿದೆ. ಈ ಘಟನೆಯ ಸಂಪೂರ್ಣ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ವ್ಯಕ್ತಿ ಒಂದಷ್ಟು ಮಾಹಿತಿಯನ್ನೂ ನೀಡಿದ್ದಾನೆ. ಯಾವುದೇ ಮನೆಯ ಬಾಗಿಲು ದಿನದಲ್ಲಿ ಮೂರು ಬಾರಿ ತೆರೆದರೆ ಆ ಮನೆಯನ್ನ ಅಧಿಕಾರಿಗಳು ಬಂದು ಲಾಕ್ ಮಾಡ್ತಾರೆ ಎಂದು ಬರೆದುಕೊಂಡಿದ್ದಾನೆ. ಹಲವು ಮನೆಗಳಿಗೆ ಕಬ್ಬಿಣದ ಸರಳುಗಳನ್ನು ಹೊಡೆಯಲಾಗಿದೆ ಅಂತಲೂ ಹೇಳಿಕೊಂಡಿದ್ದಾನೆ.

ಮತ್ತೊಂದು ಯುವತಿಯಲ್ಲಿ ಪುಟ್ಟ ಬಾಲಕಿಯೊಬ್ಬಳು ಮನೆಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಿದ್ದಾಗ ಅಧಿಕಾರಿಗಳು ಸ್ಥಳಕ್ಕೆ ಬಂದು ಬಾಲಕಿಯನ್ನ ಮನೆಯೊಳಗೆ ಕಳುಹಿಸಿದ್ದಾರೆ. ಅಲ್ಲದೇ ಮನೆಯೊಳಗೆ ಲಾಕ್ ಮಾಡಿದ್ದಾರೆ.

ಇದನ್ನೂ ಓದಿ: ಫುಟ್​ಬಾಲ್​ ಫೀಲ್ಡ್​ನಲ್ಲಿ ನಡೀತು ಅಮ್ಮ ಮಗನ ರೇಸ್.. ಮುಗ್ಗರಿಸಿದ ತಾಯಿ

Source: newsfirstlive.com Source link