ಭಾರತ vs ಇಂಗ್ಲೆಂಡ್​: ಕ್ರಿಕೆಟ್​ ಕಾಶಿಯಲ್ಲಿ ಶತಕ ಸಿಡಿಸಿ ಮಿಂಚಿದ ಕನ್ನಡಿಗ

ಭಾರತ vs ಇಂಗ್ಲೆಂಡ್​: ಕ್ರಿಕೆಟ್​ ಕಾಶಿಯಲ್ಲಿ ಶತಕ ಸಿಡಿಸಿ ಮಿಂಚಿದ ಕನ್ನಡಿಗ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಶತಕ ಸಿಡಿಸಿದ್ದಾರೆ.

ಇದನ್ನೂ ಓದಿ: ತಾಯಿಗೆ ಒಲಿಂಪಿಕ್ ಪದಕ ತೊಡಿಸಿದ ಕ್ಯಾಪ್ಟನ್; ಮಡಿಲಲ್ಲಿ ಮಗುವಾದ ಮನ್​ಪ್ರೀತ್..!

ಎರಡನೇ ಟೆಸ್ಟ್​​ ಪಂದ್ಯದಲ್ಲಿ ಇಂಗ್ಲೆಂಡ್​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 210 ಎಸೆತಗಳಲ್ಲಿ ಶತಕ ಬಾರಿಸಿದರು. 2ನೇ ಟೆಸ್ಟ್​ನ ಮೊದಲ​ ದಿನದಾಂತ್ಯಕ್ಕೆ ಕೆಎಲ್​ ರಾಹುಲ್ 248 ಎಸೆತಗಲ್ಲಿ 127 ರನ್​ ಸಿಡಿಸಿದ್ದು, ಭಾರತ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್​ ಕಳೆದುಕೊಂಡು 276 ರನ್​ ಗಳಿಸಿದೆ.

ಇದನ್ನೂ ಓದಿ: ದಳಪತಿ ವಿಜಯ್-ಎಂ.ಎಸ್. ಧೋನಿ ಭೇಟಿ​​​; ಕಾರಣ ಏನು ಗೊತ್ತಾ?

ಇನ್ನು 248 ಬಾಲ್​ಗಳನ್ನ ಎದುರಿಸಿರುವ ಕೆಎಲ್ ರಾಹುಲ್ 12 ಬೌಂಡರಿ, ಒಂದು ಸಿಕ್ಸರ್ ಬಾರಿಸಿ ಆಡುತ್ತಿದ್ದಾರೆ. ಇನ್ನು ರೋಹಿತ್ ಶರ್ಮಾ 83, ಪೂಜಾರ 9, ಕ್ಯಾಪ್ಟನ್ ಕೊಹ್ಲಿ 42 ರನ್​ ಗಳಿಸಿ ಔಟಾಗಿದ್ದಾರೆ. ರಹಾನೆ ಸದ್ಯ ಕ್ರೀಸ್​ನಲ್ಲಿದ್ದು ಒಂದು ರನ್​ಗಳಿಸಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ; ‘ನನ್ನ ದೇಶ ಉಳಿಸಿಕೊಡಿ’ ಎಂದು ಆಫ್ಘನ್ ಕ್ರಿಕೆಟರ್ ಮನವಿ

Source: newsfirstlive.com Source link