ಕೊರೊನಾ ಕರಿಛಾಯೆ: ದೇಶದಲ್ಲಿ ನಿನ್ನೆ 41,195 ಮಂದಿಗೆ ಪಾಸಿಟಿವ್ ; ರಾಜ್ಯದಲ್ಲೂ 1,857 ಕೇಸ್​!

ಕೊರೊನಾ ಕರಿಛಾಯೆ: ದೇಶದಲ್ಲಿ ನಿನ್ನೆ 41,195 ಮಂದಿಗೆ ಪಾಸಿಟಿವ್ ; ರಾಜ್ಯದಲ್ಲೂ 1,857 ಕೇಸ್​!

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆಯ ಭೀತಿ ಶುರುವಾಗಿದೆ. 2ನೇ ಅಲೆಯಲ್ಲಿ ಜನರನ್ನ ಹೈರಾಣಾಗಿಸಿದ್ದ ಕೊರೊನಾ ಮಹಾಮಾರಿ ಮತ್ತೆ ಅಬ್ಬರಿಸೋಕೆ ಮುಂದಾಗಿದೆ. ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.

ಇದನ್ನೂ ಓದಿ: ಚಪ್ಪರ.. ಪೆಂಡಾಲ್.. ಶಾಮಿಯಾನ ವೇದಿಕೆಗಳಲ್ಲಿ ಗಣೇಶ ಕೂರಿಸುವಂತಿಲ್ಲ-ಹೊಸ ಗೈಡ್​ಲೈನ್ಸ್ ರಿಲೀಸ್

ಹೋದ್ಯ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅಂತ ಕೊರೊನಾ ವೈರಸ್ ಮತ್ತೆ ಅಟ್ಟಹಾಸ ಮೆರೆಯೋಕೆ ಶುರು ಮಾಡಿದೆ. ಇದೀಗ ದೇಶದಲ್ಲಿ ಕೊರೊನಾ ಮೂರನೇ ಅಲೆಯ ಬಿರುಗಾಳಿ ಎದ್ದಿದೆಯಾ ಎಂಬ ಭೀತಿ ಶುರುವಾಗಿದೆ. 2ನೇ ಅಲೆಯಲ್ಲಿ ದೇಶದ ಜನರನ್ನ ಹುರಿದು ಮುಕ್ಕಿದ್ದ ಕಾಣದ ಕ್ರಿಮಿ ಮತ್ತೆ ತನ್ನ ಆಟಾಟೋಪವನ್ನ ಮುಂದುವರಿಸುವ ಲಕ್ಷಣಗಳು ಕಾಣುತ್ತಿವೆ.

blank

ಕೇರಳದಲ್ಲಿ ಮುಂದುವರಿದ ಕೊರೊನಾ ಕಾಟ
ಮಹಾರಾಷ್ಟ್ರದಲ್ಲೂ ಹೆಚ್ಚಾದ ಕೊರೊನಾ ವೈರಸ್ ಆರ್ಭಟ

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಎಂಬ ಕಾಣದ ಜೀವಿ ಮತ್ತೆ ಜನರನ್ನ ಆವರಿಸಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಪಾಶವನ್ನ ಬೀಸಿ ಜನರನ್ನ ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಕೇರಳದಲ್ಲಿ ಕಳೆದ ಹಲವು ದಿನಗಳಿಂದ ಸತತವಾಗಿ 20 ಸಾವಿರ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಮಹಾರಾಷ್ಟ್ರದಲ್ಲೂ ಕೂಡಾ 6 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೇ ಕರ್ನಾಟಕದಲ್ಲಿ ನಿನ್ನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. 2 ಸಾವಿರದ ಹತ್ತಿರಕ್ಕೆ ಕೊರೊನಾ ಕೇಸ್‌ ಬಂದು ನಿಂತಿದೆ. ಇದು ದೇಶದಲ್ಲಿ ಕೊರೊನಾ ವೈರಸ್‌ನ ಶಕೆ ಮುಗಿದಿಲ್ಲ ಎಂಬ ಆತಂಕ ಸಂದೇಶವನ್ನು ನೀಡಿದೆ.

ಇದನ್ನೂ ಓದಿ: ಮೊಹರಂ ಹಬ್ಬಕ್ಕೆ ಪ್ರತ್ಯೇಕ ಮಾರ್ಗಸೂಚಿ ರಿಲೀಸ್.. ಯಾವುದಕ್ಕೆಲ್ಲಾ ನಿರ್ಬಂಧ..?

ದೇಶಕ್ಕೆ ಮತ್ತೆ ಕೊರೊನಾ ಕಾಟ

  • ದೇಶದಲ್ಲಿ ನಿನ್ನೆ ಒಂದೇ ದಿನ 41,195 ಕೇಸ್‌ಗಳು ಪತ್ತೆಯಾಗಿವೆ
  • ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ
  • ನಿನ್ನೆ ಒಂದೇ ದಿನ ಕೇರಳದಲ್ಲಿ 21,445 ಕೊರೊನಾ ಕೇಸ್‌ ಪತ್ತೆ
  • ಕಳೆದ ಹಲವು ದಿನಗಳಿಂದ 20 ಸಾವಿರಕ್ಕೂ ಹೆಚ್ಚು ಕೇಸ್‌ ವರದಿ
  • ನಿನ್ನೆ ಒಂದೇ ದಿನ 6,388 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ
  • ಕರ್ನಾಟಕದಲ್ಲೂ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳ
  • ನಿನ್ನೆ ಒಂದೇ 1,857 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ

blank

ಒಟ್ಟಾರೆ, ದೇಶದ ಜನರನ್ನ ಬಿಟ್ಟು ಬಿಡದೇ ಕಾಡ್ತಿರೋ ಕೊರೊನಾ ತನ್ನ ಕಬಂಧಬಾಹುವನ್ನ ಮತ್ತೆ ವಿಸ್ತರಿಸಲು ಮುಂದಾಗಿದೆ. ಇದನ್ನ ಕಟ್ಟಿಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನ ಕೈಗೊಳ್ಳುವ ಅಗತ್ಯವಿದೆ.

ಇದನ್ನೂ ಓದಿ: ಜರ್ಮನಿಯಲ್ಲಿ ಸುಮಾರು 8,600 ಮಂದಿಗೆ ನಕಲಿ ಲಸಿಕೆ ನೀಡಿದ್ರಾ ನರ್ಸ್​​​? ನಡೆದಿದ್ದೇನು?

Source: newsfirstlive.com Source link