ಬಿಜೆಪಿ ಜೊತೆ ಟ್ವಿಟರ್​ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ -ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಬಿಜೆಪಿ ಜೊತೆ ಟ್ವಿಟರ್​ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ -ಪ್ರಿಯಾಂಕಾ ಗಾಂಧಿ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್​ನ ಕೆಲ ಮುಖಂಡರ ಖಾತೆಗಳನ್ನು ಅಮಾನತು ಮಾಡಿರುವ ಹಿನ್ನೆಲೆಯಲ್ಲಿ ಟ್ವಿಟರ್‌ ವಿರುದ್ಧ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮಾಡಿ ಗುಡುಗಿರುವ ಪ್ರಿಯಾಂಕ ಗಾಂಧಿ.. ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಪ್ರಜಾತಂತ್ರವನ್ನು ಹತ್ತಿಕ್ಕುವ ಕೃತ್ಯದಲ್ಲಿ ಟ್ವಿಟರ್‌ ಭಾಗಿಯಾಗಿದೆ ಅಂತ ಆರೋಪಿಸಿ ಟ್ವೀಟ್‌ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಖಾತೆಗಳನ್ನು ಅಮಾನತು ಮಾಡಿರುವ ಟ್ವಿಟರ್‌ ತನ್ನದೇ ನಿಯಮ ಪಾಲಿಸುತ್ತಿದೆಯಾ ಅಥವಾ ಮೋದಿ ಸರ್ಕಾರದ ನೀತಿ ಅನುಸರಿಸುತ್ತಿದೆಯಾ? ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಮನೆಗೆ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ ಭೇಟಿ ನೀಡಿದ್ದರು. ಈ ಕುರಿತು ತನ್ನ ಬಾಲಕಿಯ ಪೋಷಕರ ಜತೆಗಿನ ಚಿತ್ರ ಹಂಚಿಕೊಂಡು ಟ್ವೀಟ್​​ ಮಾಡಿದ್ದರು. ಇದರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಟ್ವಿಟರ್​​ಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯ ಕುರಿತು ಮಾಹಿತಿ ನೀಡಿ ಪೋಕ್ಸೋ ಕಾಯ್ದೆ ಉಲ್ಲಂಘಿಸಿ ಟ್ವೀಟ್​​ ಮಾಡಿದ್ದಾರೆ ಎಂದು ರಾಹುಲ್​​ ಗಾಂಧಿ ಖಾತೆಯನ್ನು ಸಸ್ಪೆಂಡ್​​ ಮಾಡಿದ್ದೇವೆ ಎಂದು ಟ್ವಿಟರ್ ತಿಳಿಸಿತ್ತು. ರಾಹುಲ್​​​ ಬೆನ್ನಲ್ಲೀಗ ಕಾಂಗ್ರೆಸ್​ ಅಧಿಕೃತ ಟ್ವಿಟ್ಟರ್​​ ಖಾತೆಯೂ ಲಾಕ್​​ ಆಗಿದೆ. ಹೀಗೆಂದು ತನ್ನ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್​ ಟ್ವಿಟ್ಟರ್​​ ಸಂಸ್ಥೆ ವಿರುದ್ಧ ಕೆಂಡಕಾರಿದೆ.

ಇದನ್ನೂ ಓದಿ: ಧಂ ಇದ್ರೆ ನಮ್​​ ಅಕೌಂಟೂ​ ಲಾಕ್ ಮಾಡಿ ಎಂದ ‘ಕೈ’ ನಾಯಕರ ಟ್ವಿಟರ್ ಅಕೌಂಟ್ ಲಾಕ್; ಮುಂದ?

Source: newsfirstlive.com Source link