ಮಧ್ಯರಾತ್ರಿ ಭೀಕರ ಅಪಘಾತ; ಹೊತ್ತಿದ ಬೆಂಕಿಯ ಜ್ವಾಲೆಗೆ 2 ಲಾರಿಗಳು ಭಸ್ಮ

ಮಧ್ಯರಾತ್ರಿ ಭೀಕರ ಅಪಘಾತ; ಹೊತ್ತಿದ ಬೆಂಕಿಯ ಜ್ವಾಲೆಗೆ 2 ಲಾರಿಗಳು ಭಸ್ಮ

ಬೀದರ್: ತಡರಾತ್ರಿ ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿ ಹೊತ್ತಿ ಉರಿದ ಘಟನೆ ಬಸವಕಲ್ಯಾಣ ತಾಲೂಕಿನ ಹಳ್ಳಿ ಗ್ರಾಮದ ಡಾಬಾ ಬಳಿ ನಡೆದಿದೆ.

ಒಂದು ಲಾರಿ ಸುಟ್ಟು ಸಂಪೂರ್ಣ ಭಸ್ಮವಾದರೆ ಇನ್ನೊಂದು ಲಾರಿ ಭಾಗಶಃ ಸುಟ್ಟು ಕರಕಲಾಗಿದೆ. ಮಹಾರಾಷ್ಟ್ರದ ಪು‌ಣೆಯಿಂದ ಹೈದ್ರಾಬಾದ್​ಗೆ ಲಾರಿಗಳು ತೆರಳುತ್ತಿದ್ದವು. ಮುಂದೆ ಸಾಗುತ್ತಿದ್ದ ಕಂಟೇನರ್​​ಗೆ ಹಿಂಬದಿಯಿಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.

ಸಿಮೆಂಟ್ ತುಂಬಿದ್ದ ಲಾರಿ ಸಂಪುರ್ಣ ಭಸ್ಮ ಆಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಸವಕಲ್ಯಾಣ ಅಗ್ನಿಶಾಮಕ ತಂಡ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಸಂಚಾರಿ ಪಿಎಸ್ ಐ ಪುಷ್ಪಾ ಭೇಟಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ದುರ್ಘಟನೆ ನಡೆದಿದ್ದು, ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಿಜೆಪಿ ಜೊತೆ ಟ್ವಿಟರ್​ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ -ಪ್ರಿಯಾಂಕಾ ಗಾಂಧಿ ವಾಗ್ದಾಳಿ

Source: newsfirstlive.com Source link