ಕಿರುತೆರೆ ನಟಿ ಅಮೃತಾ ರಾಮಮೂರ್ತಿಗೆ ಸೀಮಂತದ ಸಂಭ್ರಮ

ಬೆಂಗಳೂರು: ಕನ್ನಡದ ಸಿರಿಯಲ್‍ಗಳಲ್ಲಿ ಅಭಿನಯಿಸುತ್ತಿದ್ದ ನಟಿ ಅಮೃತಾ ರಾಮಮೂರ್ತಿ ಸೀಮಂತವನ್ನು ಆಚರಿಸಿಕೊಂಡಿದ್ದಾರೆ. ಸೀಮಂತದ ವೇಳೆ ಪತಿ ರಾಘವೇಂದ್ರ ಗೌಡ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಅಮೃತಾ ರಾಮಮೂರ್ತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ಶೇರ್ ಮಾಡಿಕೊಂಡಿದ್ದಾರೆ.

ಕಿರುತೆರೆ ನಟ ರಾಘವೆಂದ್ರ ಗೌಡ ಹಾಗೂ ನಟಿ ಅಮೃತಾ ರಾಮಮೂರ್ತಿ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಅಮೃತಾ ರಾಮಮೂರ್ತಿಯವರ ಸೀಮಂತ ಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿದೆ. ಸೀಮಂತ ಸಮಾರಂಭದ ಫೋಟೋಗಳನ್ನು ಗುರುವಾರ ಅಮೃತಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಒಂದು ಫೋಟೋದಲ್ಲಿ ಕೆಂಪು ಬಣ್ಣದ ಸೀರೆಯುಟ್ಟು ಅಮೃತಾ ಕಾಣಿಸಿಕೊಂಡಿದ್ದರೆ, ಮತ್ತೊಂದರಲ್ಲಿ ಪತಿ ರಾಘವೇಂದ್ರ ಪತ್ನಿಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಪತ್ನಿ ಹಣೆಗೆ ಪ್ರೀತಿಯಿಂದ ಚುಂಬಿಸುತ್ತಿರುವುದನ್ನು ಕಾಣಬಹುದಾಗಿದೆ.

ಫೋಟೋ ಜೊತೆಗೆ ಅಮೃತಾ, ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ, ಹಾಗೆ ನನ್ನ ಬಹು ದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು (ತಾಯಿ ಮಗುವಿನ ಹಿತಕ್ಕಾಗಿ ಮಾಡುವ ಶಾಸ್ತ್ರ) ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಮೊದಲಿಗೆ ನನ್ನ ಜೀವ ರಾಘವೇಂದ್ರ, ಅತ್ತೆ, ಮಾವ, ಅತ್ತಿಗೆ, ಅಣ್ಣ, ಅಮ್ಮ, ಅಪ್ಪ, ಅಕ್ಕ, ಬಾವ, ಸ್ನೇಹಿತರು ಹಾಗೆ ನನ್ನ ಆತ್ಮೀಯರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ರಾಘವೇಂದ್ರ ಹಾಗೂ ಅಮೃತಾ ಮೇ ತಿಂಗಳಿನಲ್ಲಿ ತಮ್ಮ 2ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಇಬ್ಬರೂ ತಾವು ತಂದೆ-ತಾಯಿಯಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಳ್ಲುವ ಮೂಲಕ ಹಂಚಿಕೊಂಡಿದ್ದರು. ಜೊತೆಗೆ ನಾವಿಬ್ಬರು ಈಗ ಮೂವರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು.

ಅಮೃತಾ ಹಾಗೂ ರಾಘವೇಂದ್ರ ಕಿರುತೆರೆಯ ಸಿರಿಯಲ್‍ವೊಂದರಲ್ಲಿ ಒಟ್ಟಾಗಿ ಅಭಿನಯಿಸಿದ್ದರು. ಈ ನಡುವೆ ಇಬ್ಬರಿಗೂ ಪ್ರೀತಿಗೆ ಶುರುವಾಗಿತ್ತು ಎಂದು ತಿಳಿಸಿದ್ದರು.  ಇದನ್ನೂ ಓದಿ:ಮಾಸ್ಟರ್ ವಿಜಯ್‍ರೊಂದಿಗೆ ಕಾಣಿಸಿಕೊಂಡ ಬ್ಲಾಸ್ಟರ್ ಧೋನಿ

Source: publictv.in Source link