ಟೆಸ್ಟ್​ ಸರಣಿ ಬಳಿಕ ಹಲವರ ‘ಭವಿಷ್ಯ ಅತಂತ್ರ’ ಪಕ್ಕಾ: ಏನಾಗ್ತಿದೆ ಟೀಂ ಇಂಡಿಯಾದಲ್ಲಿ..?

ಟೆಸ್ಟ್​ ಸರಣಿ ಬಳಿಕ ಹಲವರ ‘ಭವಿಷ್ಯ ಅತಂತ್ರ’ ಪಕ್ಕಾ: ಏನಾಗ್ತಿದೆ ಟೀಂ ಇಂಡಿಯಾದಲ್ಲಿ..?

ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದೊಂದಿಗೆ ಹಲವು ಆಟಗಾರರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅನುಭವಿ ಆಟಗಾರರ ಕರಿಯರ್​ ಅಂತ್ಯದ ಸೂಚನೆಯಾ ಎಂಬ ಚರ್ಚೆ ನಡೀತಾ ಇದೆ. ಅಷ್ಟಕ್ಕೂ ಈ ಚರ್ಚೆಗೆ ಕಾರಣ ಏನು.? ಯಾವೆಲ್ಲಾ ಆಟಗಾರರ ಭವಿಷ್ಯ ಅತಂತ್ರವಾಗಿದೆ.

blank

ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯ ನಿನ್ನೆಯಿಂದ ಆರಂಭವಾಗಿದ್ದು, ಪ್ರವಾಸದ ಅಂತ್ಯಕ್ಕೆ ಇನ್ನು 3 ಟೆಸ್ಟ್​ಗಳು ಬಾಕಿ ಉಳಿದಿವೆ. ಸೆಪ್ಟೆಂಬರ್​​ 14ಕ್ಕೆ 5ನೇ ಟೆಸ್ಟ್ ಪಂದ್ಯ ಅಂತ್ಯ ಕಾಣೋದ್ರೊಂದಿಗೆ ಕ್ರಿಕೆಟ್​​ ಲೋಕದ ಚಿತ್ತ ಚುಟಕು ಮಾದರಿಯತ್ತ ತಿರುಗಲಿದೆ. ಮೊದಲು IPL, ಆ ಬಳಿಕ ಟಿ20 ವಿಶ್ವಕಪ್​ ಪಂದ್ಯವನ್ನಾಡೋ ಭಾರತ ಮರಳಿ ಟೆಸ್ಟ್​ ಸರಣಿಯನ್ನಾಡೋದು ನವೆಂಬರ್​​ನಲ್ಲಿ..! ಈ 3 ತಿಂಗಳುಗಳ ಅಂತರದಲ್ಲಿ ಹಲವು ಆಟಗಾರರು ಕಳೆದು ಹೋದ್ರೂ ಅಚ್ಚರಿಯಿಲ್ಲ.

blank

ಇಂಗ್ಲೆಂಡ್​​ ವಿರುದ್ಧದ ಮೊದಲ ಪಂದ್ಯದಲ್ಲಿ ಅನುಭವಿಗಳಿಗೆ ವಿಶ್ರಾಂತಿ ನೀಡಿದ್ದ ಕೊಹ್ಲಿ, 2ನೇ ಟೆಸ್ಟ್​ ಪಂದ್ಯದಲ್ಲಿ ಅನಿವಾರ್ಯವಾಗಿ ಇಶಾಂತ್​ ಶರ್ಮಾಗೆ ಮಣೆ ಹಾಕಿದ್ದಾರೆ. ಇದರೊಂದಿಗೆ ಅಶ್ವಿನ್​​ಗೆ ಸ್ಥಾನ ಸಿಗುತ್ತೆ ಎಂಬ ಎಲ್ಲರ ಪ್ರಿಡಿಕ್ಷನ್​ಗಳು ತಲೆ ಕೆಳಗಾಗಿವೆ. ಜೊತೆಗೆ ಭವಿಷ್ಯದಲ್ಲಿ ಅಶ್ವಿನ್​ ಮತ್ತೆ ಟೆಸ್ಟ್​ ತಂಡದಲ್ಲಿ ಸ್ಥಾನ ಸಿಗುತ್ತಾ ಇಲ್ವಾ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.

blank

ಕೇವಲ ಅಶ್ವಿನ್​ ಮಾತ್ರವಲ್ಲ.. ತಂಡದಲ್ಲಿದ್ದು, ಬೆಂಚ್​ಗೆ ಸೀಮಿತವಾಗಿರುವ ಉಮೇಶ್​ ಯಾದವ್​, ಹನುಮ ವಿಹಾರಿ, ವೃದ್ಧಿಮಾನ್​ ಸಾಹ ಭವಿಷ್ಯವೂ ಅತಂತ್ರವಾಗಿದೆ. ಈಗಿರೋ ಕಾಂಪಿಟೇಶನ್​ನ ಪರಿಣಾಮ ಮುಂದಿನ ಸರಣಿಗಳಲ್ಲೂ ಈ ಆಟಗಾರರು ಬ್ಯಾಕ್​ಅಪ್​ ಪ್ಲೇಯರ್​ ಆಗೇ ಉಳಿತಾರಾ ಎಂಬ ಚರ್ಚೆಯೂ ಹುಟ್ಟಿದೆ. ಜೊತೆಗೆ ಕುಲ್ದೀಪ್​​ ಯಾದವ್​, ಭುವನೇಶ್ವರ್​ ಕುಮಾರ್ ಕೂಡ ಟೆಸ್ಟ್​ ತಂಡಕ್ಕೆ ಕಮ್​​​ಬ್ಯಾಕ್​​ ಮಾಡೋದು ಅನುಮಾನ.

blank

ಇವರೆಲ್ಲರೊಂದಿಗೆ 2ನೇ ಟೆಸ್ಟ್​ನಲ್ಲಿ ಅದೃಷ್ಟದ ಅವಕಾಶ ಗಿಟ್ಟಿಸಿಕೊಂಡಿರುವ ಇಶಾಂತ್​ ಶರ್ಮಾಗೂ ಭವಿಷ್ಯದಲ್ಲಿ ಸ್ಥಾನ ಅನುಮಾನವೇ. ಈಗಾಗಲೇ ಇಶಾಂತ್​ ಶರ್ಮಾ ಸ್ಥಾನವನ್ನ ತುಂಬುವ ಸಾಮರ್ಥ್ಯವನ್ನ ಸಿರಾಜ್​, ತೋರಿಸಿದ್ದಾರೆ. ಅದಲ್ಲದೇ 32 ವರ್ಷದ ಇಶಾಂತ್​ ಫಿಟ್​ನೆಸ್​​ ಕಾಯ್ದುಕೊಳ್ಳುವಲ್ಲೂ ಎಡವುತ್ತಿರೋದು ಕೂಡ ಕರಿಯರ್​​ಗೆ ಮೈನಸ್ ಪಾಯಿಂಟ್​ ಆಗಲಿದೆ.

Source: newsfirstlive.com Source link