ಜಮೀರ್‌ಗಾಗಿ ಡಿಕೆಶಿ, ಸಿದ್ದರಾಮಯ್ಯ ಬಣದ ತಂತ್ರ ಪ್ರತಿತಂತ್ರ – ವಾರದ ಮುನಿಸಿನ ಬಳಿಕ ಇಂದು ಭೇಟಿಯಾಗ್ತಾರಾ?

ಬೆಂಗಳೂರು: ಪಕ್ಷದ ಮೇಲೆ ಹಿಡಿತ ಸಾಧಸಲು ಕೈ ನಾಯಕರಿಬ್ಬರ ನಡುವೆ ಆರಂಭವಾದ ಫೈಟ್ ಈಗ ಹೊಸ ರೂಪ ಪಡೆದುಕೊಳ್ತಾ ಎಂಬ ಪ್ರಶ್ನೆಯೊಂದು ಮೂಡಿದೆ. ಈ ಮೂಲಕ ಆ ಶಾಸಕನನ್ನ ತಮ್ಮ ಪಾಳಯಕ್ಕೆ ಸೆಳೆಯುವ ವಿಚಾರದಲ್ಲಿ ದೊಡ್ಡ ಮಟ್ಟದ ಫೈಟ್ ಆರಂಭವಾಗುತ್ತಾ ಅನ್ನೋ ಅನುಮಾನ ಎದ್ದಿದೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಮುಂದಿನ ರಾಜಕೀಯ ಭವಿಷ್ಯಕ್ಕೆ ಶಾಸಕ ಜಮೀರ್ ಅನಿವಾರ್ಯವಾದ್ರಾ..?, ಇದುವರೆಗೆ ಪಕ್ಣದಲ್ಲಿ ಸುಪ್ರೀಂ ಸ್ಥಾನಕ್ಕಾಗಿ ನಡೆದ ಫೈಟ್ ಮಾದರಿಯಲ್ಲಿ ಆ ಶಾಸಕನ ವಿಚಾರದಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಫೈಟ್ ಶುರುವಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಹೌದು ಇಡಿ ದಾಳಿಯ ನಂತರ ಸಿದ್ದರಾಮಯ್ಯ ಬಣದಿಂದ ದೂರವಾದ ಜಮೀರ್ ಗಾಗಿ ಫೈಟ್ ನಡೆಯುತ್ತಿದೆ. ತಮ್ಮ ಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದು ಜಮೀರ್ ಮುನಿಸಿಕೊಂಡು ಸಿದ್ದರಾಮಯ್ಯರಿಂದ ದೂರಾಗಿದ್ದಾರೆ. ಸಿದ್ದರಾಮಯ್ಯ ಆಪ್ತರಾಗಿದ್ದ ಜಮೀರ್, ಡಿಕೆಶಿ ಪಾಳಯ ಸೇರುವುದನ್ನ ತಡೆಯಲು ಸಿದ್ದರಾಮಯ್ಯ ಬಣ ತೆರೆ ಮರೆಯಲ್ಲಿ ದೊಡ್ಡ ಪ್ರತಿತಂತ್ರವನ್ನೇ ಮಾಡಿದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಆಪ್ತರಿಂದ 2 ದಿನಗಳ ಕಾಲ ಆಪರೇಷನ್ ಜಮೀರ್ ಅಹಮ್ಮದ್ ತೆರೆಮರೆಯಲ್ಲಿಯೇ ನಡೆದಿದೆ. ಅವನದೇನಂತೆ ನಾನ್ಯಾಕೆ ಮಾತಾಡಲಿ. ಅವನೇ ಬರಲಿ ಎಂದು ಗರಂ ಆಗಿದ್ದ ಸಿದ್ದರಾಮಯ್ಯ, ಕೊನೆಗೂ ‘ಹಲೋ ಜಮೀರ್ ಬಾ ಮನೆಗೆ’ ಎನ್ನುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಆಪ್ತ ಬಣ ಯಶಸ್ವಿಯಾಗಿದೆ.

ಸಿದ್ದರಾಮಯ್ಯ ಜೊತೆ ಮುನಿಸಿಕೊಂಡು ಕಳೆದ 1 ವಾರದಿಂದ ಜಮೀರ್ ದೂರಾಗಿದ್ದಾರೆ. ಈ ನಡುವೆ ಡಿಕೆಶಿಯವರು ಜಮೀರ್ ಅವರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವ ಪ್ರಯತ್ನವನ್ನ ಮಾಡಿದ್ದಾರೆ. ಇದರಿಂದ ಎಚ್ಚೆತ್ತ ಸಿದ್ದರಾಮಯ್ಯ ಬಣದ ಕೆಲವು ಶಾಸಕರು, 2 ದಿನಗಳಿಂದ ಜಮೀರ್ ಅಹಮ್ಮದ್ ಮನವೊಲಿಕೆ ಕೆಲಸ ಮಾಡಿದ್ದಾರೆ.

blank

ಸುಮ್ನಿರಿ ಸಾರ್ ನಿಮಗೆ ಗೊತ್ತಾಗಲ್ಲ ಎಲ್ಲರೂ ಬೇಕು ನಿಮ್ಮ ಜೊತೆಗೆ ಎಂದು ಸೈಲೆಂಟಾಗಿ ಆಪರೇಷನ್ ಜಮೀರ್ ಅಹಮ್ಮದ್ ಖಾನ್ ಮಾಡಿದ್ದಾರೆ. ನೀವು ಸಿಎಂ ಆಗಬೇಕು ಅಂತ ಫಸ್ಟ್ ಹೇಳಿದ್ದೆ ಜಮೀರ್, ಅಂತವರು ನಮ್ಮ ಜೊತೆ ಇರಬೇಕು ಎಂದು ಆಪ್ತರು ಸಿದ್ದರಾಮಯ್ಯನವರ ಮನವೊಲಿಸಿದ್ದಾರೆ. ಅದರ ಒಂದು ಸ್ಯಾಂಪಲ್ ನಿನ್ನೆ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡುವೆಯೇ ‘ಹಲೋ ಜಮೀರ್ ಎಲ್ಲಿದ್ದಿಯ ಬಾ’ ಮನೆಗೆ ಮಾತಾಡೋಣ ಎಂದು ಹೇಳಿದ್ದಾರೆ.

blank

ಸಿದ್ದರಾಮಯ್ಯ ಕರೆಯಂತೆ ಇಂದು ಜಮೀರ್, ಸಿದ್ದರಾಮಯ್ಯ ನಿವಾಸಕ್ಕೆ ಬರಲಿದ್ದಾರೆ. ಒಂದು ವೇಳೆ ಜಮೀರ್ ಇಂದು ಸಿದ್ದರಾಮಯ್ಯ ನಿವಾಸಕ್ಕೆ ಬಂದರೆ ಆಪರೇಷನ್ ಜಮೀರ್ ಯಶಸ್ವಿಯಾಗಲಿದೆ. ಜಮೀರ್ ಇಂದು ಸಿದ್ದರಾಮಯ್ಯ ನಿವಾಸಕ್ಕೆ ಬರದಿದ್ದರೆ ಆಪರೇಷನ್ ಫೇಲ್ ಆಗಲಿದೆ. ಒಟ್ಟಿನಲ್ಲಿ ಫಲಿತಾಂಶ ಏನಾಗಬಹುದು ಎಂಬುದೇ ಸದ್ಯದ ಕುತೂಹಲವಾಗಿದೆ.

Source: publictv.in Source link